ಸೌತಂಪ್ಟನ್: ವಿಶ್ವಕಪ್-2019ಕ್ಕಾಗಿ ನೆಟ್ನಲ್ಲಿ ಅಭ್ಯಾಸ ಮಾಡುವ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೈಬೆರಳಿಗೆ ಗಾಯವಾಗಿದೆ ಎಂಬ ಸುದ್ದಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಲ್ಲಿಆತಂಕ ಮೂಡಿಸಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಟೀಂ ಇಂಡಿಯಾ, Nothing to worry ಎಂದು ಹೇಳಿದೆ.
ರನ್ ಮಷಿನ್ ಫಿಟ್ & ಫೈನ್! ಕೊಹ್ಲಿ ಗಾಯದ ಬಗ್ಗೆ ಚಿಂತೆ ಬೇಡ: ಟೀಂ ಇಂಡಿಯಾ - undefined
ನೆಟ್ನಲ್ಲಿ ಅಭ್ಯಾಸ ಮಾಡುವ ವೇಳೆ ಕೊಹ್ಲಿ ಹೆಬ್ಬೆರಳಿಗೆ ಗಾಯವಾಗಿದೆ ಎಂಬ ಸುದ್ದಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಇದಕ್ಕೆ ಸ್ಪಷ್ಟ ನೀಡಿರುವ ಟೀಂ ಇಂಡಿಯಾ, Nothing to worry ಎಂದು ಹೇಳಿದೆ.
ಹೆಬ್ಬೆರಳಿಗೆ ಗಾಯವಾಗಿರುವುದರಿಂದ ಕೊಹ್ಲಿ ಅಂಗಳಕ್ಕಿಳಿಯುವರೇ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಉದ್ಭವಿಸಿತ್ತು.ಇದಕ್ಕೆ ಟೀಂ ಇಂಡಿಯಾ, ಆ ಬಗ್ಗೆ ಚಿಂತಿಸುವುದೇ ಬೇಡ ಎಂದಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಇದೇ ಶನಿವಾರ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಎಂದಿನಂತೆ ರನ್ ಕಲೆ ಹಾಕಲು ಕೊಹ್ಲಿ ಫಿಟ್ ಆಗಿದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ.
ಭಾರತದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾಟ್, ಕೊಹ್ಲಿ ಹೆಬ್ಬೆರಳಿಗೆ ಮ್ಯಾಜಿಕ್ ಸ್ಪ್ರೇ ಮಾಡುತ್ತಿರುವ ಸಾಕಷ್ಟು ಫೊಟೋಗಳು ಹರಿದಾಡಿದ್ದವು. ನಂತರ ಬೆರಳಿಗೆ ಬ್ಯಾಂಡೇಡ್ ಸುತ್ತಿಕೊಂಡ ಕೊಹ್ಲಿ,ಅಭ್ಯಾಸ ಮಾಡದೆ ಐಸ್ಪ್ಯಾಕ್ನಿಂದ ಬೆರಳನ್ನು ಒತ್ತಿಹಿಡಿದು ಮೈದಾನದಿಂದ ಹೊರನಡೆದರು ಎಂದು ಹೇಳಲಾಗಿತ್ತು. ಈ ಸುದ್ದಿ ಕೊಹ್ಲಿ ಅಭಿಮಾನಿಗಳಲ್ಲಿ ಬೇಸರ ಉಂಟುಮಾಡಿತ್ತು.