ಬರ್ಮಿಂಗ್ಹ್ಯಾಮ್:ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಪ್ರಸಕ್ತ ವರ್ಷದ ಏಕದಿನ ಕ್ರಿಕೆಟ್ನಲ್ಲಿ 1000 ರನ್ ಗಳಿಸಿದ ಸಾಧನೆಗೆ ಪಾತ್ರರಾಗಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಸಾಧನೆ... ವಿರಾಟ್-ರೋಹಿತ್ ತಲುಪಿದ್ರು ಈ ಮೈಲಿಗಲ್ಲು! - undefined
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಮೈಲಿಗಲ್ಲೊಂದನ್ನು ತಲುಪಿದ್ದಾರೆ.
ಬಾಂಗ್ಲಾ ವಿರುದ್ಧ 26 ರನ್ ಗಳಿಸುವ ಮೂಲಕ ವಿರಾಟ್ ಈ ಸಾಧನೆ ಮಾಡಿದರು. ಹಾಗೆಯೇ ರೋಹಿತ್ ಶರ್ಮಾ ಕೂಡ ಈ ಪಂದ್ಯದಲ್ಲಿ ಶತಕ (104) ಗಳಿಸಿದ್ದಲ್ಲದೆ, 1000 ರನ್ ಗಡಿ ದಾಟಿದರು. ವಿರಾಟ್ ಕೊಹ್ಲಿ ಕೇವಲ 18 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. 59.76ರ ಸರಾಸರಿಯಲ್ಲಿ 95.13ರ ಸ್ಟ್ರೈಕ್ ರೇಟ್ನಂತೆ ಕೊಹ್ಲಿ ರನ್ ಕಲೆಹಾಕಿದ್ದಾರೆ. ಅಲ್ಲದೆ ಸತತ ಮೂರನೇ ವರ್ಷ ಈ ಸಾಧನೆಗೆ ಪಾತ್ರರಾದರು.
ಹಾಗೆಯೇ ಉಪ ನಾಯಕ ರೋಹಿತ್ ಶರ್ಮಾ ಕೂಡ ಸತತ ನಾಲ್ಕನೇ ಬಾರಿ 1000 ರನ್ ಗಡಿ ತಲುಪಿದ್ದಾರೆ. ವಿಶ್ವಕಪ್ನಲ್ಲಿ 4ನೇ ಶತಕ ದಾಖಲಿಸಿದ ರೋಹಿತ್, ಒಟ್ಟಾರೆ ಈ ವರ್ಷ 1100 ರನ್ ಗಳಿಸಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ (1138) ಹಾಗೂ ಆಸೀಸ್ನ ಮತ್ತೋರ್ವ ಆಟಗಾರ ಉಸ್ಮಾನ್ ಖವಾಜಾ ಕೂಡ (1067) ಸಾವಿರ ರನ್ ಸಾಧನೆಗೈದ ಇತರ ಇಬ್ಬರು ಆಟಗಾರರಾಗಿದ್ದಾರೆ.