ಕರ್ನಾಟಕ

karnataka

ETV Bharat / sports

ಇವತ್ತಷ್ಟೇ ಅಲ್ಲ.. ಹರಿಣಗಳ ವಿರುದ್ಧ ಭಾರತ ಆಡಿದ 5 ರೋಚಕ ಪಂದ್ಯ ಮರೆಯೋದುಂಟೆ.. - ಭಾರತ ಮತ್ತು ದ.ಆಫ್ರಿಕಾ

ಹರಿಣಗಳನ್ನ ಇವತ್ತು ಭಾರತ ಬಗ್ಗುಬಡಿದಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಭಾರತ ತೋರಿದ ಸಾಂಘಿಕ ಪ್ರದರ್ಶನದ ಮುಂದೆ ದಕ್ಷಿಣ ಆಫ್ರಿಕಾ ಪ್ಲೇಯರ್ಸ್‌ ಸೋತು ಶರಣಾಗಿದ್ದಾರೆ. ಕ್ಯಾಪ್ಟನ್‌ ಕೊಹ್ಲಿಗೆ ಕೆಣಕಿದ್ದ ರಬಾಡಾಗೆ ವಿರಾಟ್‌ ಬ್ಯಾಟ್‌ ಮೂಲಕ ಉತ್ತರಿಸಿದ್ದಾರೆ.

ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ರೋಚಹ ಹಣಾಹಣಿ ಪಂದ್ಯಗಳು

By

Published : Jun 5, 2019, 11:02 PM IST

ನವದೆಹಲಿ :ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಬ್ಲ್ಯೂಬಾಯ್ಸ್‌ ಮೊದಲ ಪಂದ್ಯದಲ್ಲೇ ಹರಿಣಗಳ ವಿರುದ್ಧ ಭರ್ಜರಿಯಾಗಿ ಕಾದಾಡಿದ್ದಾರೆ. ದ. ಆಫ್ರಿಕಾ ವಿರುದ್ಧದ ರೋಚಕ ಹಣಾಹಣಿಯಲ್ಲಿ ಭಾರತ ಗೆದ್ದಿದೆ. ವಿಶ್ವಕಪ್ ಮತ್ತು ಚಾಂಪಿಯನ್ಸ್‌ ಟ್ರೋಪಿ ಸೇರಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಪರಸ್ಪರ ಕಾದಾಡಿದ ಐದು ಅದ್ಭುತ ಹಣಾಹಣಿಗಳು ಇಲ್ಲಿವೆ ನೋಡಿ..

1993ರ ಹೀರೊ ಕಪ್‌ನಲ್ಲಿ ಸಚಿನ್‌ ಹೀರೊ..

ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ 1993ರಲ್ಲಿ ಏಕದಿನ ಪಂದ್ಯ ನಡೆದಿತ್ತು. ಭಾರತ ಇನ್ನೇನು ಸೋಲೊಪ್ಪಿಕೊಂಡಿತು ಎಂದು ಎಲ್ಲಾ ಭಾರತೀಯರು ಸಪ್ಪೆ ಮೋರೆ ಹಾಕಿದ್ದಾಗ ಮಾಂತ್ರಿಕನಂತೆ ಬಂದಿದ್ದೇ ಸಚಿನ್‌ ತೆಂಡುಲ್ಕರ್‌. ಕ್ಯಾಪ್ಟನ್‌ ಅಜರುದ್ದೀನ್‌ ಬಾಲ್‌ನ ಸಚಿನ್‌ ಕೈಗಿತ್ತಿದ್ದರು. ಕೊನೆಯ ಓವರ್​ನಲ್ಲಿ ದ.ಆಫ್ರಿಕಾಕ್ಕೆ ಕೇವಲ 6 ರನ್‌ ಬೇಕಿತ್ತು. ಈ ಸಮಯದಲ್ಲಿ ಸಚಿನ್​ ಮೊದಲ ಎಸೆತದಲ್ಲಿಯೇ ಡಿ.ವಿಲ್ಲಿಯರ್ಸ್​ರನ್ನು ರನ್​ ಔಟ್​ ಮಾಡ್ತಾರೆ. ಇನ್ನುಳಿದ ಮೂರು ಬಾಲ್​ಗಳನ್ನು ಡಾಟ್​ ಮಾಡಿ, ನಂತ ಬ್ರೈನ್​ ಮಿಚೆಲ್​ ಸ್ಟ್ರೈಕ್​ಗೆ ಬಂದಾಗ 3 ರನ್​ಗಳ ಅವಶ್ಯಕತೆ ಇರತ್ತೆ. ಆದರೆ, ಸಚಿನ್​ ಕೇವಲ ಒಂದು ರನ್​ ಕೊಟ್ಟು ದ.ಆಫ್ರಿಕಾವನ್ನು ಮಣಿಸಿಸುತ್ತಾರೆ. ಬಳಿಕ ಹೀರೊ ಕಪ್‌ನ ಟೀಂ ಇಂಡಿಯಾ ಎತ್ತಿ ಹಿಡಿದಿತ್ತು.

2002ರ ಚಾಂಪಿಯನ್ಸ್‌ ಸೆಮಿಫೈನಲ್‌- ಕೊಲಂಬೊ..

2002ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಹರಿಣಗಳನ್ನ ಭಾರತ ಬಗ್ಗುಬಡಿದಿತ್ತು. ಆ ಮ್ಯಾಚ್​ನಲ್ಲಿ ಮೊದಲ ಬ್ಯಾಟ್‌ ಮಾಡಿದ್ದ ಟೀಂ ಇಂಡಿಯಾ 262 ರನ್​ಗಳಿಸಿತ್ತು. ಯುವರಾಜ್‌ ಮತ್ತು ಸೆಹ್ವಾಗ್‌ ಸಿಡಿಸಿಲಬ್ಬರದ ಅರ್ಧಶತಕದಿಂದಾಗಿ ಟೀಂ ಇಂಡಿಯಾ ಫೈಟಿಂಗ್ ಸ್ಕೋರ್‌ ಮಾಡಿತ್ತು. ಇದನ್ನು ಬೆನ್ನಟ್ಟಿದ್ದ ದ.ಆಫ್ರಿಕ 192 ಪೇರಿಸಿದ್ದ ವೇಳೆ ಹರ್ಷೈಲ್‌ ಗಿಬ್ಸ್‌ ರಿಟೈರ್ಡ್‌ ಹರ್ಟಾಗಿದ್ದರು. ಭಜ್ಜಿ ಎಸೆದ ಬಾಲ್‌ನಲ್ಲಿ ಯುವಿ ಹಿಡಿದ ಅದ್ಭುತ ಕ್ಯಾಚ್‌ಗೆ ಜಾಂಟಿ ರೋಡ್ಸ್‌ ಔಟಾಗಿದ್ದರು. ಹರ್ಭನ್​ ಸಿಂಗ್​ ಮತ್ತು ವೀರೇಂದ್ರ ಸೆಹ್ವಾಗ್‌ ಬಿಡದೆ ಕಾಡಿದ್ರು. ಭಜ್ಜಿ 2 ಮತ್ತು ಸೆಹ್ವಾಗ್​ ಕಿತ್ತ 3 ವಿಕೆಟ್‌ಗಳಿಂದಾಗಿ ಪಂದ್ಯದ ದಿಕ್ಕೇ ಬದಲಾಗಿತ್ತು. ಆ ಪಂದ್ಯವನ್ನ ಹರಿಣಗಳು 10 ರನ್​ಗಳಿಂದ ಸೋತಿದ್ದವು.

2010-11ರಲ್ಲಿ ಮ್ಯಾಜಿಕ್‌ ಮಾಡಿದ್ದ ಮುನಾಫ್‌ ಪಟೇಲ್‌..

ಸಚಿನ್​ ತೆಂಡುಲ್ಕರ್​

2010-11ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತ ಜೋಹಾನ್ಸ್‌ಬರ್ಗ್‌ನಲ್ಲಿ ಆಡಿದ್ದ 2ನೇ ಏಕದಿನ ಪಂದ್ಯದಲ್ಲಿ ಮುನಾಫ್​ ಪಟೇಲ್​ ಮ್ಯಾಜಿಕ್​ ಮಾಡಿದ್ದರು. ಕೊನೆಯ ಓವರ್​ನಲ್ಲಿ ಕೇವಲ ಮೂರು ರನ್​ಗಳು ಬೇಕಿದ್ದಾಗ, ಕ್ಯಾಪ್ಟನ್​ ಧೋನಿ ಮುನಾಫ್​ ಪಟೇಲ್​ಗೆ ಬೌಲಿಂಗ್​ ಮಾಡಲು ಹೇಳಿದ್ದರು. ಮುನಾಫ್‌ ಕೊನೆಯ ವಿಕೆಟ್​ ಉರುಳಿಸಿದ್ರಿಂದ ಭಾರತ ಬರೀ ಒಂದೇ ರನ್‌ನಿಂದ ದಕ್ಷಿಣ ಆಫ್ರಿಕಾ ತಂಡವನ್ನ ಮಣಿಸಿತ್ತು. 31ಓವರ್‌ಗೆ ಪವರ್‌ ಪ್ಲೇ ಪಡೆದಿದ್ದಾಗ ದಕ್ಷಿಣ ಆಫ್ರಿಕಾಗೆ ಪ್ರತಿ ಓವರ್‌ಗೆ 2 ರನ್‌ ಬೇಕಿತ್ತಷ್ಟೇ.. ಅದಾಗಿ 20 ರನ್ ಪೇರಿಸುವಷ್ಟರಲ್ಲಿಯೇ ಅದು 3 ವಿಕೆಟ್ ಕಳೆದುಕೊಂಡಿತ್ತು.

2011ರ ವಿಶ್ವಕಪ್‌ನಲ್ಲಿ 29 ರನ್‌ಗೆ ಭಾರತದ 9 ವಿಕೆಟ್ ಪತನ..

ಅದು ನಾಗಪುರದಲ್ಲಿ ನಡೆದಿದ್ದ ವಿಶ್ವಕಪ್‌ ಪಂದ್ಯ. ಆರಂಭಿಕ ಜೋಡಿ ಸಚಿನ್‌ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್‌ ಬರೀ 18 ಓವರ್‌ನಲ್ಲೇ 142 ರನ್ ಪೇರಿಸಿತ್ತು. ಸಚಿನ್ ಔಟಾದ ಬಳಿಕ 29 ರನ್ ಪೇರಿಸುವಷ್ಟರಲ್ಲೇ ಭಾರತದ 9 ವಿಕೆಟ್‌ ಪತನಗೊಂಡಿದ್ದವು. 5 ವಿಕೆಟ್ ಕಿತ್ತ ಡೇಲ್‌ ಸ್ಟೇಯ್ನ್‌ ಭಾರತವನ್ನ ಬರೀ 296ರ್‌ಗೆ ಕಟ್ಟಿ ಹಾಕಿದ್ದರು. ಆಶಿಷ್‌ ನೆಹ್ರಾ ಬೌಲಿಂಗ್‌ನಲ್ಲಿ ರಾಬಿನ್‌ ಪೀಟರ್ಸನ್‌ ಪಂದ್ಯದ ದಿಕ್ಕನ್ನೇ ತಲೆಕೆಳಗಾಗಿಸಿದ್ದರು. 4 ಬೌಲ್‌ ಇರುವಾಗಲೇ ದಕ್ಷಿಣ ಆಫ್ರಿಕಾ ಗೆಲುವಿನ ಕೇಕೆ ಹಾಕಿತ್ತು. 2011ರ ವಿಶ್ವಕಪ್​ನ ಆ ಮ್ಯಾಚ್‌ನಲ್ಲಿ ಭಾರತವು ಕೊನೆಯ ಕ್ಷಣದಲ್ಲಿ ಸೋಲಿಗೆ ಶರಣಾಗಿತ್ತು. ತೆಂಡುಲ್ಕರ್​ 111, ಸೆಹ್ವಾಗ್​ 73 ರನ್‌ ಪೇರಿಸಿದ್ದರು. ಆದರೆ, ಜಾಕ್‌ ಕಲ್ಲೀಸ್​ ಮತ್ತು ಹಾಶೀಂ ಆಮ್ಲ ಬ್ಯಾಟಿಂಗ್‌ ಅಬ್ಬರ ಮುಂದೆ ಭಾರತ ಸೋಲೊಪ್ಪಿಕೊಂಡಿತ್ತು.

2015-16ರಲ್ಲಿ ಬರೀ 5 ರನ್‌ನಿಂದ ಸೋತಿದ್ದ ಭಾರತ ..

ಹರಿಣಗಳ ವಿರುದ್ಧ ಭಾರತ ಆಡಿದ 5 ರೋಚಕ ಪಂದ್ಯ

ಅವತ್ತು ಕಾನ್ಪುರದಲ್ಲಿ ನಡೆದಿದ್ದ ಮೊದಲ ಏಕ ದಿನ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್‌ ಮತ್ತು ರೋಹಿತ್‌ ಶರ್ಮಾ ಶತಕ ಸಿಡಿಸಿದ್ದರು. ಮೊದಲು ಬ್ಯಾಟ್ ಮಾಡಿದ್ದ ಹರಿಣಗಳು ನಿಗದಿತ 50 ಓವರ್‌ನಲ್ಲಿ 303ರನ್ ಪೇರಿಸಿತ್ತು. ಈ ಗುರಿಯನ್ನ ಸಮರ್ಥವಾಗಿಯೇ ಬೆನ್ನಟ್ಟಿತ್ತು ಟೀಂ ಇಂಡಿಯಾ ರೋಹಿತ್ ಅಬ್ಬರಿಸಿದ್ದರು. ನಾಲ್ಕು ಓವರ್‌ಗಳಲ್ಲಿ 35 ರನ್ ಪೇರಿಸಬೇಕಿತ್ತು. ಆದರೆ, ಸುಸ್ತಾಗಿದ್ದ ರೋಹಿತ್ ಮತ್ತು ರೈನಾ ಇಬ್ಬರೂ ಬ್ಯಾಟ್ಸ್‌ಮೆನ್‌ಗಳನ್ನ ಇಮ್ರಾನ್ ತಾಹಿರ್‌ ಒಂದೇ ಓವರ್‌ನಲ್ಲಿ ಪೆವಿಲಿಯನ್‌ಗಟ್ಟಿದ್ದರು. ರಾಬಾಡಾ ಕೊನೆಯ ಓವರ್‌ನಲ್ಲಿ11 ರನ್‌ ಪೇರಿಸೋದಕ್ಕಾಗಿ ಧೋನಿ ಪರದಾಡಿದ್ದರು. ಭಾರತ ಬರೀ 5 ರನ್‌ನಿಂದ ಸೋಲೊಪ್ಪಿಕೊಂಡಿತ್ತು.

ABOUT THE AUTHOR

...view details