ಕರ್ನಾಟಕ

karnataka

ETV Bharat / sports

ನೀಲಿಮಯವಾದ ಮ್ಯಾಂಚೆಸ್ಟರ್: ಕೊಹ್ಲಿ ಹೃದಯ ಗೆದ್ದ ಅಭಿಮಾನಿ ದೇವರುಗಳು! - undefined

ದೂರದ ಇಂಗ್ಲೆಂಡ್​ನಲ್ಲಿ ವಿಶ್ವಕಪ್​ ಕ್ರಿಕೆಟ್​ ಟೂರ್ನಿ ನಡೆಯುತ್ತಿದ್ದರೂ ಸಹ ಸಾವಿರಾರು ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ಬೆಂಬಲಿಸುವ ಟೀಂ ಇಂಡಿಯಾ ಅಭಿಮಾನಿಗಳ ಅಭಿಮಾನಕ್ಕೆ ಕೊಹ್ಲಿ ಖುಷಿಯಾಗಿದ್ದಾರೆ.

ಕೊಹ್ಲಿ ಹೃದಯ ಗೆದ್ದ ಅಭಿಮಾನಿ ದೇವರುಗಳು!

By

Published : Jun 28, 2019, 11:12 AM IST

ಮ್ಯಾಂಚೆಸ್ಟರ್: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಪ್​ ಕ್ರಿಕೆಟ್​ ಟೂರ್ನಿಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಅಭಿಮಾನಿಗಳ ಬೆಂಬಲಕ್ಕೆ ನಾಯಕ ವಿರಾಟ್​ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ನಿನ್ನೆ ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಪೋರ್ಡ್​ ಮೈದಾನದಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್​ ವಿರುದ್ಧದ ಪಂದ್ಯದ ವೇಳೆ ಮೈದಾನದ ತುಂಬೆಲ್ಲ ಭಾರತೀಯ ಅಭಿಮಾನಿಗಳೇ ತುಂಬಿದ್ದರು. ಸಾವಿರಾರು ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿದ್ದ ಅಭಿಮಾನಿಗಳು ಕೊಹ್ಲಿ ಪಡೆಯನ್ನ ಚಿಯರ್​ ಮಾಡುತ್ತಿದ್ದರು.

ವೆಸ್ಟ್​ ಇಂಡೀಸ್​ ವಿರುದ್ಧ ಗೆಲುವು ಸಾಧಿಸಿದ ಬಳಿಕ, ಸಾವಿರಾರು ಸಂಖ್ಯೆಯಲ್ಲಿ ಮ್ಯಾಂಚೆಸ್ಟರ್​ಗೆ ಆಗಮಿಸಿದ್ದ ಅಭಿಮಾನಿಗಳಿಗೆ ಕೊಹ್ಲಿ ಚಪ್ಪಾಳೆ ಮೂಲಕ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ಕೊಹ್ಲಿ, ಫುಟ್​ಬಾಲ್​ ಪಂದ್ಯದ ಬಗ್ಗೆ ಗೊತ್ತಿಲ್ಲ. ಆದರೆ ಮ್ಯಾಂಚೆಸ್ಟರ್​ ಮಾತ್ರ ಸಂಪೂರ್ಣ ನೀಲಿಮಯವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details