ಕರ್ನಾಟಕ

karnataka

ETV Bharat / sports

ವಿಶ್ವಕಪ್‌ನಲ್ಲಿ ದಾಯಾದಿ ದಂಗಲ್‌ ಅಷ್ಟೇ ಅಲ್ಲ, ಟೀಂ ಇಂಡಿಯಾಗೆ ಆ ತಂಡಗಳೆಲ್ಲಾ ಸವಾಲೇ - Team India

ವಿಶ್ವಕಪ್​ ಟೂರ್ನಮೆಂಟ್​ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಪ್ರತಿಯೊಂದು ತಂಡವು ಈ ಬಾರಿ ಪರಸ್ಪರ ಮುಖಾಮುಖಿಯಾಗಲಿವೆ. ಹೀಗಾಗಿ ಕ್ರಿಕೆಟ್​ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮನೆಮಾಡಿದೆ.

ಟೀಂ ಇಂಡಿಯಾಗೆ ಆ ತಂಡಗಳೆಲ್ಲಾ ಸವಾಲೇ

By

Published : May 27, 2019, 9:33 AM IST

ಲಂಡನ್‌: ವಿಶ್ವಕಪ್‌ ಮೇ 30ಕ್ಕೆ ಗ್ರ್ಯಾಂಡಾಗಿ ಸ್ಟಾರ್ಟ್‌ ಆಗ್ತಿದೆ. ಈ ವರ್ಷ ಟೂರ್ನಿಯ ಫಾರ್ಮ್ಯಾಟ್‌ನಲ್ಲಿ ಸಾಕಷ್ಟು ಬದಲಾಗಿವೆ. ವಿಶ್ವದ 10 ತಂಡ ಮಾತ್ರ ಈ ಸಾರಿ ಆಡ್ತಿವೆ. ಪ್ರತಿ ತಂಡವೂ ಎಲ್ಲ ಟೀಂಗಳ ವಿರುದ್ಧ ಆಡಬೇಕಿದೆ. ಅಂತಿಮವಾಗಿ ನಾಲ್ಕು ತಂಡಗಳಷ್ಟೇ ಸೆೆಮಿಫೈನಲ್ ಪ್ರವೇಶಿಸಲಿವೆ. ಹಾಗಾಗಿ ಕಾತರವಂತೂ ಇದ್ದೇ ಇದೆ. ಪಾಕ್‌ ತಂಡದ ವಿರುದ್ಧವಷ್ಟೇ ಜಿದ್ದಾಜಿದ್ದಿಯಲ್ಲ ಬೇರೆ ಟೀಂಗಳೂ ಒಂದಕ್ಕೊಂದು ಕಾದಾಟ ನಡೆಸ್ತಿರುವುದರಿಂದ ಕ್ರಿಕೆಟ್‌ ಕ್ರೇಜ್‌ ಮತ್ತಷ್ಟು ಹೆಚ್ಚಲಿದೆ.

ಕಾಂಗ್ರೋಗಳ ವಿರುದ್ಧ ಸೆಣಸಲಿರುವ ಭಾರತ :
ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳೂ ಬಲಿಷ್ಠ. ಪರಸ್ಪರರು ಜೂನ್‌ 9ಕ್ಕೆ ಮುಖಾಮುಖಿಯಾಗಲಿವೆ. ವರ್ಷದ ಆರಂಭದಲ್ಲಿ ಆಸೀಸ್‌ ಭಾರತ ಪ್ರವಾಸ ಕೈಗೊಂಡಿತ್ತು. ಟೀಂ ಇಂಡಿಯಾ ವಿರುದ್ಧ ಏಕದಿನ ಮತ್ತು ಟಿ-20 ಸರಣಿ ಆಡಿತ್ತು. ಆಡಿದ ಐದು ಪಂದ್ಯಗಳಲ್ಲಿ ಆಸೀಸ್‌ 3-2 ರಿಂದ ಸರಣಿ ಗೆದ್ದಿತ್ತು. ಡೇವಿಡ್‌ ವಾರ್ನರ್ ಮತ್ತು ಸ್ಟೀವ್ ಸ್ಮಿಥ್‌ ಮತ್ತೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಇವರಿಬ್ಬರೂ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಘಾತಕ ಪ್ಲೇಯರ್‌ಗಳು. ಬ್ಲ್ಯೂಬಾಯ್ಸ್‌ ಇವರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಟೀಂ ಇಂಡಿಯಾ ಟಾಪ್‌ ಆರ್ಡರ್‌ ಬ್ಯಾಟಿಂಗ್‌ ಲೈನ್‌ಅಪ್‌ ಅದ್ಭುತ. ಹಾಗೇ ಸಮರ್ಥ ಆಸೀಸ್‌ ಬೌಲರ್‌ಗಳು ಭಾರತೀಯರ ಸ್ಟ್ರ್ಯಾಟರ್ಜಿ ಬುಡಮೇಲು ಮಾಡಬಲ್ಲರು. ಹಾಗಾಗಿ ಎರಡೂ ತಂಡದ ಮಧ್ಯೆ ಜಿದ್ದಾಜಿದ್ದಿ ಪಂದ್ಯ ನಡೆಯಲಿದೆ.

ಕಾಂಗರೋಗಳ ವಿರುದ್ಧ ಸೆಣಸಲಿರುವ ಭಾರತ

ಕ್ರಿಕೆಟ್‌ ಜನಕರನ್ನೇ ಮಣಿಸುತ್ತಾ ಕೆರಿಬಿಯನ್ಸ್‌ ಪಡೆ :
ಆಂಗ್ಲರ ವಿರುದ್ಧ ವೆಸ್ಟ್‌ ಇಂಡೀಸ್‌ ಜೂನ್‌ 14ರಂದು ಸೆಣಸಲಿದೆ. ಎರಡೂ ತಂಡದಲ್ಲೂ ಬಿಗ್‌ ಹಿಟ್ಟರ್‌ಗಳಿದ್ದಾರೆ. ಫೆಬ್ರವರಿ ತಿಂಗಳಲ್ಲಷ್ಟೇ ಕೆರಿಬಿಯನ್ಸ್‌ ಮತ್ತು ಆಂಗ್ಲರು ಆಡಿದ 5 ಪಂದ್ಯದ ಸರಣಿ, 2-2ರಿಂದ ಟೈ ಆಗಿತ್ತು. 4ನೇ ಪಂದ್ಯದಲ್ಲಿ ಇಂಗ್ಲೆಂಡ್‌ 418 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದನ್ನ ಚೇಸ್ ಮಾಡಿದ್ದ ವಿಂಡೀಸ್ ಬರೀ 29 ರನ್‌ಗಳಿಂದ ಸೋತಿತ್ತು. ಆಂಡ್ರೇ ರಸೆಲ್‌ ಮತ್ತು ಕ್ರಿಸ್‌ ಗೇಯ್ಲ್‌ ಜೋಡಿ ಆಂಗ್ಲರ ಬೌಲಿಂಗ್‌ ಲೈನ್‌ಅಪ್‌ನ ಚಿಂದಿ ಉಡಾಯಿಸಿದ್ದರು. ಲಂಡನ್‌ನಲ್ಲಿ ಈ ತಂಡಗಳು ರನ್‌ ಹೊಳೆ ಹರಿಸೋದರಲ್ಲಿ ಡೌಟೇ ಇಲ್ಲ.

ಕ್ರಿಕೆಟ್‌ ಜನಕರನ್ನೇ ಮಣಿಸುತ್ತಾ ಕೆರಿಬಿಯನ್ಸ್‌ ಪಡೆ

ಹರಿಣಗಳ ಕಟ್ಟಿ ಹಾಕೋಕೆ ಸಾಧ್ಯವಾ ಕಾಂಗ್ರೋಗಳು:
ಜುಲೈ 6ರಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡ ಕಾದಾಟವಿದೆ. 2018ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಬಾಲ್‌ ಟ್ಯಾಪರಿಂಗ್‌ ಹಗರಣಕ್ಕೆ ಸಿಲುಕಿ ಡೇವಿಡ್ ವಾರ್ನರ್, ಸ್ವೀವ್ ಸ್ಮಿಥ್ 1 ವರ್ಷ ನಿಷೇಧಕ್ಕೊಳಗಾಗಿ ಈಗ ಮತ್ತೆ ಹರಿಣಗಳ ವಿರುದ್ಧ ಫೈಟ್‌ ಮಾಡಲಿದ್ದಾರೆ. ಎರಡೂ ತಂಡ ಒಳ್ಳೇ ಬೌಲಿಂಗ್‌ ಲೈನ್‌ಅಪ್‌ ಹೊಂದಿವೆ. ಸ್ಟೇಯ್ನ್‌, ರಬಾಡಾ ಒಳ್ಳೇ ಫಾರ್ಮ್‌ನಲ್ಲಿದ್ದು, ಮೈಕೆಲ್‌ ಸ್ಟಾರ್ಕ್‌ ಕಟ್ಟಿ ಹಾಕಬಲ್ಲರು. ಬ್ಯಾಟಿಂಗ್‌ ಫ್ರೆಂಡ್ಲಿ ಕಂಡೀಷನ್‌ನಲ್ಲಿ ಬೌಲರ್‌ಗಳೇ ಪಂದ್ಯ ಡಾಮಿನೇಟ್‌ ಮಾಡಿದ್ರೂ ಅಚ್ಚರಿಯಿಲ್ಲ.

ಪಾಕಿಸ್ತಾನ ತಂಡ ಬಗ್ಗುಬಡಿಯುವುದೇ ಆಪ್ಘಾನಿಸ್ತಾನ :
ಏಷ್ಯಾದ ಈ ಎರಡು ತಂಡ ಜೂನ್ 29ಕ್ಕೆ ಕಾದಾಡಲಿವೆ. ತಮ್ಮ ಸಾಮರ್ಥ್ಯ ಒರೆಗೆ ಹಚ್ಚಲಿವೆ. ಆಪ್ಘಾನ್‌ನ ಸ್ಪಿನ್ ಬೌಲರ್‌ಗಳಾದ ರಶೀದ್‌ಖಾನ್‌, ಮುಜೀಬ್‌ ಉರ್‌ ರೆಹಮಾನ್‌ ಕೀ ಪ್ಲೇಯರಾಗುವ ಚಾನ್ಸ್ ಇದೆ. ಆದರೆ, ಒಡಿಐ ಪಂದ್ಯಗಳಲ್ಲಿ ಪಾಕ್ ಈಗ ರನ್ ಕಲೆ ಹಾಕಲು ತಿಣುಕುತ್ತಿದೆ. ಇತ್ತೀಚೆಗೆ ಇಂಗ್ಲೆಂಡ್‌ 5 ಪಂದ್ಯದಲ್ಲಿ ಪಾಕ್‌ನ 4-0ರಿಂದ ಸೋಲಿಸಿ ಸರಣಿ ಗೆದ್ದಿತ್ತು. ಹಾಗಂತಾ ಪಾಕ್‌ನ ಹಗುರವಾಗಿಯೂ ಪರಿಗಣಿಸುವಂತಿಲ್ಲ. 2017ರಲ್ಲಿ ಚಾಂಪಿಯನ್ಸ್ ಟ್ರೋಪಿ ಗೆದ್ದಿತ್ತು ಇದೇ ಪಾಕ್.ಈ ಪಂದ್ಯ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಪಾಕಿಸ್ತಾನ ತಂಡವನ್ನ ಬಗ್ಗುಬಡಿಯುವುದೇ ಆಪ್ಘಾನಿಸ್ತಾನ

ಅವರದೇ ನೆಲದಲ್ಲಿ ಆಂಗ್ಲರನ್ನ ಕಟ್ಟಿ ಹಾಕುತ್ತಾ ಕೊಹ್ಲಿ ಪಡೆ :
ಗ್ರುಪ್‌ ಹಂತದಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನಡುವಣ ಜೂನ್ 30ರಂದು ಪಂದ್ಯವಿದೆ. ಎಷ್ಟೋ ಜನ ಇವೆರಡೂ ತಂಡ ವಿಶ್ವಕಪ್‌ ಫೈನಲ್‌ ತಲುಪಲಿವೆ ಅಂತಾ ಪ್ರೆಡಿಕ್ಟ್ ಮಾಡಿದ್ದಾರೆ. ಆಂಗ್ಲರು ಒಡಿಐನಲ್ಲಿ ಐಸಿಸಿ ಅಂಕಪಟ್ಟಿಯಲ್ಲಿ ಫಸ್ಟ್‌ ರ್ಯಾಂಕ್‌, ಟೀಂ ಇಂಡಿಯಾ ನಂ.2 ಸ್ಥಾನದಲ್ಲಿದೆ.

ಈಗ ಮತ್ತೊಮ್ಮೆ ಇಂಡೋ-ಪಾಕ್‌ ದಾಯಾದಿ ದಂಗಲ್‌ :
ಈವರೆಗಿನ ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕ್‌ನ ಒಂದ್ಸಾರಿಯೂ ಗೆಲ್ಲಲು ಬಿಡದೇ ಭಾರತ ಬಗ್ಗು ಬಡಿದಿದೆ. ರಾಜಕೀಯ ಒತ್ತಡದ ಮಧ್ಯೆ ಈಗ ಮತ್ತೆ ಆಂಗ್ಲರ ನಾಡಿನಲ್ಲಿ ಬದ್ಧ ವೈರಿಗಳು ಕಾದಾಡಲಿವೆ. ಇದು ಬರೀ ಕ್ರಿಕೆಟ್ ಪಂದ್ಯವಾಗಷ್ಟೇ ಇರಲ್ಲ. ಜೂನ್‌ 16ರಂದು ನಡೆಯೋ ಆ ಪಂದ್ಯಕ್ಕೆ ಇಡೀ ವಿಶ್ವ ಕ್ರಿಕೆಟ್‌ ಪ್ರೇಮಿಗಳೇ ಕಾಯುತ್ತಿದ್ದಾರೆ. ಅಷ್ಟೊಂದು ಕ್ರೇಜ್ ಈ ಪಂದ್ಯ ಹುಟ್ಟಿಸಿದೆ.

ABOUT THE AUTHOR

...view details