ಲಂಡನ್:ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಗೆ ಆರಂಭದಿಂದಲೂ ಎಸೆತಕ್ಕೆ ಒಂದರಂತೆ ರನ್ ಗಳಿಸುತ್ತಾ ಬ್ಯಾಟಿಂಗ್ ನಡೆಸುವಂತೆ ತಂಡದ ಮ್ಯಾನೇಜ್ಮೆಂಟ್ ಹೇಳಬೇಕಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಸಲಹೆ ನೀಡಿದ್ದಾರೆ.
ಧೋನಿಗೆ ಪ್ರತಿ ಬಾಲ್ಗೆ ಒಂದರಂತೆ ರನ್ ಗಳಿಸುವಂತೆ ಹೇಳಿ: ಸಂಜಯ್ ಮಂಜ್ರೇಕರ್ - undefined
ಮಾಜಿ ನಾಯಕ ಎಂ.ಎಸ್.ಧೋನಿಯವರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಹಲವರಿಂದ ಟೀಕೆ ವ್ಯಕ್ತವಾಗುತ್ತಿರುವಾಗಲೇ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್, ಟೀಂ ಮ್ಯಾನೇಜ್ಮೆಂಟ್ಗೆ ಸಲಹೆಯೊಂದನ್ನು ನೀಡಿದ್ದಾರೆ.
ಧೋನಿಯ ನಿಧಾನಗತಿಯ ಬ್ಯಾಟಿಂಗ್ ಟೀಕಿಸಿರುವ ಮಂಜ್ರೇಕರ್, ಎಂಎಸ್ ಅಭ್ಯಾಸ ಪಂದ್ಯಗಳಲ್ಲಿ ಆಡುವಂತೆ ಆಡಿದರೆ ನೋಡಲು ಇಷ್ಟ. 30 ಬಾಲ್ಗೆ 30 ರನ್ ಬಾರಿಸುವುದನ್ನು ನೋಡಲು ಬಯಸುತ್ತೇನೆ. ತಂಡವು 12 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದರೆ, ಡಿಫೆನ್ಸ್ ಆಡುವುದು ಒಳಿತು. ಆದರೆ 20-22 ಓವರ್ ವೇಳೆ ಬ್ಯಾಟಿಂಗ್ ಮಾಡುತ್ತಿದ್ದರೆ ಎಸೆತಕ್ಕೊಂದು ರನ್ ಗಳಿಸಲೇಬೇಕು ಎಂಬುದು ಅವರ ಸಲಹೆಯಾಗಿದೆ.
ಇನ್ನು ಭಾರತಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ವಿಜಯ್ ಶಂಕರ್ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿರುವುದು ಖುಷಿಯ ವಿಚಾರ. ಅಗರ್ವಾಲ್ ಇಂಡಿಯಾದ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ. ಟೀಂ ಇಂಡಿಯಾವು ಬಾಂಗ್ಲಾ ವಿರುದ್ಧ ಜಯ ಸಾಧಿಸಲೇಬೇಕು. ಕೊಹ್ಲಿ ಪಡೆ ಸೋತಿರುವುದು ಒಂದು ಪಂದ್ಯದಲ್ಲಿ ಮಾತ್ರ. ಅಲ್ಲಿನ ಪರಿಸ್ಥಿತಿ ಇಂಗ್ಲೆಂಡ್ ಆಟದ ಶೈಲಿಗೆ ಹೊಂದಾಣಿಕೆ ಇರುವುದರಿಂದ ಭಾರತಕ್ಕೆ ಸೋಲು ಎದುರಾಯಿತು ಎಂದಿದ್ದಾರೆ.