ಇಸ್ಲಾಮಾಬಾದ್(ಪಾಕಿಸ್ತಾನ): ಅಕ್ಟೋಬರ್ 17ರಿಂದ ಬಹುನಿರೀಕ್ಷಿತ ಐಸಿಸಿ ಟಿ - 20 ವಿಶ್ವಕಪ್ ಟೂರ್ನಾಮೆಂಟ್ ಆರಂಭಗೊಳ್ಳುತ್ತಿದ್ದು, ಅದಕ್ಕಾಗಿ ಎಲ್ಲ ಕ್ರಿಕೆಟ್ ತಂಡಗಳು ಸಜ್ಜಾಗಿವೆ. ಇದರ ಬೆನ್ನಲ್ಲೇ ಪಾಕ್ ಜೆರ್ಸಿ ವಿಚಾರವಾಗಿ ಅನೇಕ ಆಕ್ರೋಶ, ಟ್ರೋಲ್ ಕೇಳಿ ಬಂದಿದ್ದವು. ಆದರೆ, ಇದೀಗ ಈ ವಿವಾದ ಸುಖ್ಯಾಂತ ಕಂಡಿದೆ.
ಐಸಿಸಿ ಟಿ-20 ವಿಶ್ವಕಪ್ ಭಾರತದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ, ಕೋವಿಡ್ನಿಂದಾಗಿ ದುಬೈನಲ್ಲಿ ಆಯೋಜನೆಯಾಗಿದ್ದು, ಇದರ ಆತಿಥ್ಯ ಮಾತ್ರ ಭಾರತದ್ದಾಗಿದೆ. ಹೀಗಾಗಿ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಎಲ್ಲ ತಂಡಗಳು ತಮ್ಮ ಜೆರ್ಸಿ ಮೇಲೆ 'ICC'Men's T20 World Cup India '2021' ಎಂದು ಬರೆದುಕೊಳ್ಳಬೇಕು.
ಆದರೆ, ಪಾಕಿಸ್ತಾನ ಮಾತ್ರ ತಮ್ಮ ಜರ್ಸಿ ಮೇಲೆ 'T20 World Cup UAE 2021' ಎಂದು ಬರೆಯಿಸಿಕೊಂಡಿದೆ ಎನ್ನಲಾಗಿತ್ತು. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಸಿಕ್ಕಾಪಟ್ಟೆ ಆಕ್ರೋಶ ಕೂಡಾ ವ್ಯಕ್ತವಾಗಿತ್ತು.