ಲಾಹೋರ್(ಪಾಕಿಸ್ತಾನ): ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗಾಗಿ ಪ್ರಕಟಗೊಂಡಿದ್ದ ಪಾಕ್ ತಂಡಕ್ಕೆ ಇದೀಗ ಮತ್ತಿಬ್ಬರ ಸೇರ್ಪಡೆ ಮಾಡಲಾಗಿದ್ದು, ಅದರಲ್ಲಿ ಕೆಲವೊಂದು ಬದಲಾವಣೆ ಮಾಡಿ ಇದೀಗ ಫೈನಲ್ ಪಟ್ಟಿ ಪ್ರಕಟ ಮಾಡಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ಕ್ರಿಕೆಟ್ ಸರಣಿ ಹಾಗೂ ಟಿ-20 ವಿಶ್ವಕಪ್ ಟೂರ್ನಿಗಾಗಿ ಪಾಕ್ ಕ್ರಿಕೆಟ್ ಬೋರ್ಡ್ ಕಳೆದ ಸೆಪ್ಟೆಂಬರ್ 6ರಂದು 15 ಸದಸ್ಯರ ತಂಡ ಪ್ರಕಟ ಮಾಡಿತ್ತು. ಆದರೆ, ಇದರಲ್ಲಿ ಇದೀಗ ಮತ್ತಷ್ಟು ಬದಲಾವಣೆ ಮಾಡಲಾಗಿದೆ. ಅಜಮ್ ಖಾನ್ ಮತ್ತು ಮೊಹಮ್ಮದ್ ಹಸ್ನೈನ್ ಬದಲಾಗಿ ಇದೀಗ ಪಾಕ್ ಮಾಜಿ ಕ್ಯಾಪ್ಟನ್ ಸರ್ಫರಾಜ್ ಅಹ್ಮದ್, ಫಖಾರ್ ಜಮಾನ್ ಮತ್ತು ಹೈದರ್ ಅಲಿ ಆಯ್ಕೆಯಾಗಿದ್ದಾರೆ. ಸಕ್ಲೇನ್ ಮುಷ್ತಾಕ್ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಪಾಕ್ ಕ್ರಿಕೆಟ್ ಬೋರ್ಡ್, ತಂಡದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಾವು ಹೈದರ್ ಅಲಿ, ಫಖರ್ ಜಮಾನ್ ಹಾಗೂ ಸರ್ಫರಾಜ್ ಅಹ್ಮದ್ ಅವರನ್ನ ತಂಡಕ್ಕೆ ಸೇರಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.