ಕರ್ನಾಟಕ

karnataka

ETV Bharat / sports

ಸೆಮೀಸ್​​ನಲ್ಲಿ ಟೀಮ್ ಇಂಡಿಯಾ ಎಕ್ಸಿಟ್: ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ_ಕೋಟಿ ನಷ್ಟ! - ನಷ್ಟ

ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಪಡೆ ಫೈನಲ್ ಪ್ರವೇಶಿಸಲಿದೆ ಎನ್ನುವ ಲೆಕ್ಕಾಚಾರ ಉಲ್ಟಾ ಆಗುತ್ತಿದ್ದಂತೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಕೋಟ್ಯಂತರ ರೂಪಾಯಿ ನಷ್ಟ ಹೊಂದಿದೆ.

ಸ್ಟಾರ್ ಸ್ಪೋರ್ಟ್ಸ್

By

Published : Jul 14, 2019, 2:30 PM IST

ಲಂಡನ್:ವಿಶ್ವಕಪ್​ ಟೂರ್ನಿಯ ಕಪ್ ಗೆಲ್ಲುವ ನೆಚ್ಚಿನ ತಂಡವೆಂದು ಬಿಂಬಿತವಾಗಿದ್ದ ಟೀಮ್ ಇಂಡಿಯಾ ಅಚ್ಚರಿ ಫಲಿತಾಂಶದಲ್ಲಿ ಸೆಮೀಸ್​​ನಲ್ಲಿ ಮುಗ್ಗರಿಸಿ ಹೋರಾಟ ಅಂತ್ಯಗೊಳಿಸಿತ್ತು.

ಟೀಮ್ ಇಂಡಿಯಾ ವಿಶ್ವಕಪ್​ನಿಂದ ಹೊರಬೀಳುತ್ತಿದ್ದಂತೆ ಟೂರ್ನಿಯ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್​ ಮೇಲೆ ಬಾರಿ ಹೊಡೆತ ಬಿದ್ದಿದೆ. ಕೊಹ್ಲಿ ಪಡೆ ಫೈನಲ್ ಪ್ರವೇಶಿಸಲಿದೆ ಎನ್ನುವ ಲೆಕ್ಕಾಚಾರ ಉಲ್ಟಾ ಆಗುತ್ತಿದ್ದಂತೆ ವಾಹಿನಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದೆ.

ಇದೇ ಕಾರಣಕ್ಕೆ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಬೆಂಬಲ ಕಿವೀಸ್​ಗೆ!

ಟೀಮ್ ಇಂಡಿಯಾ ಫೈನಲ್​​ಗೆ ಬರಲಿದೆ ಎನ್ನುವ ವಿಶ್ವಾಸದಲ್ಲಿ ಉಪಾಂತ್ಯ ಪಂದ್ಯದ ಜಾಹೀರಾತುಗಳಿಗೆ ಹತ್ತು ಸೆಕೆಂಡ್​ಗೆ ₹25ರಿಂದ ₹30 ಲಕ್ಷ ಚಾರ್ಜ್​ ಮಾಡಲು ಉದ್ದೇಶಿಸಿತ್ತು. ಆದರೆ ಸೆಮೀಸ್​ನಲ್ಲಿ ಭಾರತ ಸೋತ ಪರಿಣಾಮ ವಾಹಿನಿ ಸುಮಾರು ₹10 ರಿಂದ ₹15 ಕೋಟಿ ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗಿದೆ.

'ಕ್ರಿಕೆಟ್ ಕಾಶಿ'ಯಲ್ಲಿ ಫೈನಲ್ ಮ್ಯಾಚ್‌: ಪ್ರತಿಷ್ಟಿತ ಪ್ರಶಸ್ತಿಗೆ ಮುತ್ತಿಡುವವರಾರು?

ಸೆಮಿಫೈನಲ್​​ನಲ್ಲಿ ಭಾರತ ಸೋತ ಪರಿಣಾಮ ಫೈನಲ್ ಪಂದ್ಯದಲ್ಲಿ ಹತ್ತು ಸೆಕೆಂಡ್ ಜಾಹೀರಾತು ದರ ₹15ರಿಂದ ₹17 ಲಕ್ಷ ರೂ ಆಗಿತ್ತು.

ABOUT THE AUTHOR

...view details