ಲಂಡನ್: ಸಾಂಘಿಕ ಪ್ರದರ್ಶನದ ಫಲವಾಗಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದಿದ್ದರೆ, ಅತ್ತ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಸ್ಪಿನ್ನರ್ ಯಜ್ವೇಂದ್ರ ಚಹಲ್ ಭಾರತದ ಕಪ್ತಾನ ಆಗಬಹುದು ಎಂದಿದ್ದಾರೆ.
ಟೀಂ ಇಂಡಿಯಾ ನಿಗದಿತ 50 ಓವರ್ನಲ್ಲಿ 336 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿದ ಸರ್ಫರಾಜ್ ಪಡೆ ಒಂದು ಹಂತದಲ್ಲಿ ಉತ್ತಮ ರನ್ ಕಲೆ ಹಾಕುತ್ತಾ ಸಾಗಿತ್ತು.
'ವಾಘಾ ಗಡಿಯಲ್ಲಿದ್ದ ಪೌರುಷ ಎಲ್ಲೋಯ್ತು'...? ಹಸನ್ ಅಲಿ ಕಳಪೆ ಪ್ರದರ್ಶನಕ್ಕೆ ಅಖ್ತರ್ ಗರಂ..!
ಬಾಬರ್ ಅಜಂ ಹಾಗೂ ಫಕರ್ ಜಮಾನ್ 104 ರನ್ಗಳ ಉತ್ತಮ ಜೊತೆಯಾಟ ನಡೆಸಿ ತಮ್ಮ ಪಾಳೆಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ, ಇದೇ ವೇಳೆ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ 9 ರನ್ ಅಂತರದಲ್ಲಿ ಪೆವಿಲಿಯನ್ ಸೇರಿದರು.
ಕೈಹಿಡಿದ ಚಹಲ್ ಸಲಹೆ:
ಉತ್ತಮವಾಗಿ ರನ್ ಗಳಿಸುತ್ತಾ ಟೀಂ ಇಂಡಿಯಾಗೆ ಮುಳ್ಳಾಗಿದ್ದ ಬಾಬರ್ ಅಜಂ ಹಾಗೂ ಫಕರ್ ಜಮಾನ್ ಜೋಡಿಯನ್ನು ಬೇರ್ಪಡಿಸಲು ಸಹಾಯವಾಗಿದ್ದು ಸ್ಪಿನ್ನರ್ ಯಜ್ವೇಂದ್ರ ಚಹಲ್ ಸಲಹೆ ಎನ್ನುವುದು ಇದೀಗ ರಿವೀಲ್ ಆಗಿದೆ.
ಪಾಕ್ ವಿರುದ್ಧ ಗೆದ್ದ ಭಾರತಕ್ಕೆ ಸಿಕ್ತು ಈ ಕೊಡುಗೆ... ಕೊಹ್ಲಿ ಪಡೆ ಫುಲ್ ಖುಷ್!
ಸ್ಪಿನ್ ವೇಳೆ ಪಿಚ್ ವರ್ತನೆಯನ್ನು ಗಮನಿಸಿದ ಚಹಲ್, ಕುಲ್ದೀಪ್ ಬೌಲಿಂಗ್ ಎಂಡ್ ಬದಲಾಯಿಸುವಂತೆ ಉಪನಾಯಕ ರೋಹಿತ್ ಶರ್ಮಾ ಬಳಿ ಹೇಳಿದ್ದಾರೆ. ಇದನ್ನು ರೋಹಿತ್ ನೇರವಾಗಿ ಹೋಗಿ ನಾಯಕ ಕೊಹ್ಲಿ ಬಳಿ ಹೇಳಿ ಕುಲ್ದೀಪ್ ಬೌಲಿಂಗ್ ಎಂಡ್ ಚೇಂಜ್ ಮಾಡಿದ್ದಾರೆ.
ಬೌಲಿಂಗ್ ಎಂಡ್ ಬದಲಾವಣೆಯಾದ ಓವರ್ನಲ್ಲೇ ಕುಲ್ದೀಪ್ ಉತ್ತಮವಾಗಿ ರನ್ ಗಳಿಸುತ್ತಿದ್ದ ಬಾಬರ್ ಅಜಂ ವಿಕೆಟ್ ಕಿತ್ತಿದ್ದಾರೆ. ಮತ್ತೊಂದು ಓವರ್ನಲ್ಲಿ ಅಪಾಯಕಾರಿ ಆಟಗಾರ ಫಕರ್ ಜಮಾನ್ ಸಹ ಕುಲ್ದೀಪ್ ಬೌಲಿಂಗ್ ಅರಿಯುವಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ಪತ್ನಿ ಜತೆ ಹುಕ್ಕಾ ಬಾರ್ನಲ್ಲಿ ಮೋಜು - ಮಸ್ತಿ ಮಾಡಿದ್ರಾ ಶೋಯೆಬ್!
ಅತ್ಯಂತ ಮಹತ್ವದ ಸಂದರ್ಭದಲ್ಲಿ ಯಜ್ವೇಂದ್ರ ಚಹಲ್ ಸಲಹೆ ಕೈಹಿಡಿದು ಭಾರತಕ್ಕೆ ಸುಲಭ ಜಯ ದಕ್ಕುವಂತಾಯಿತು. ಚಹಲ್ ಟಿವಿಗೆ ಸಂದರ್ಶನ ನೀಡಿರುವ ರೋಹಿತ್, ಅತ್ಯಮೂಲ್ಯ ಸಲಹೆಯ ವಿಚಾರಕ್ಕೆ ಯಜ್ವೇಂದ್ರ ಚಹಲ್ ನಾಯಕನಾಗಬಹುದು ಎಂದು ಹಾಸ್ಯ ಮಾಡಿದ್ದಾರೆ.