ಕರ್ನಾಟಕ

karnataka

ETV Bharat / sports

'ಸರ್ಫರಾಜ್ ಓರ್ವ ಬುದ್ಧಿಹೀನ ನಾಯಕ'...! ಪಾಕ್ ನಾಯಕನನ್ನು ಜರೆದ ರಾವಲ್ಪಿಂಡಿ ಎಕ್ಸ್​​ಪ್ರೆಸ್​​

ಅತ್ಯಂತ ಒತ್ತಡದ ಪಂದ್ಯದಲ್ಲಿ ಟಾಸ್​ ಗೆದ್ದರೂ ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿ ಸೋಲಿಗೆ ಮುನ್ನುಡಿ ಬರೆದಿತ್ತು. ಪಾಕಿಸ್ತಾನದ ಸೋಲಿಗೆ ತೀವ್ರ ಹತಾಶೆಗೊಳಗಾಗಿರುವ ಮಾಜಿ ಆಟಗಾರ ಶೋಯೆಬ್ ಅಖ್ತರ್​, ಸರ್ಫರಾಜ್​ನದ್ದು ಬುದ್ಧಿಹೀನ ನಾಯಕತ್ವ ಎಂದು ಜರೆದಿದ್ದಾರೆ.

ರಾವಲ್ಪಿಂಡಿ ಎಕ್ಸಪ್ರೆಸ್​​

By

Published : Jun 17, 2019, 4:41 PM IST

ಇಸ್ಲಾಮಾಬಾದ್:ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್​​ ಮ್ಯಾಚ್​ನಲ್ಲಿ ಭಾರತ ಭರ್ಜರಿ ಜಯ ಸಾಧಿಸಿ ಟೂನಿಯಲ್ಲಿ ಅಜೇಯವಾಗಿ ಉಳಿದಿದೆ.

ಅತ್ಯಂತ ಒತ್ತಡದ ಪಂದ್ಯದಲ್ಲಿ ಟಾಸ್​ ಗೆದ್ದರೂ ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿ ಸೋಲಿಗೆ ಮುನ್ನುಡಿ ಬರೆದಿತ್ತು. ಪಾಕಿಸ್ತಾನದ ಸೋಲಿಗೆ ತೀವ್ರ ಹತಾಶೆಗೊಳಗಾಗಿರುವ ಮಾಜಿ ಆಟಗಾರ ಶೋಯೆಬ್ ಅಖ್ತರ್​, ಸರ್ಫರಾಜ್​ನದ್ದು ಬುದ್ಧಿಹೀನ ನಾಯಕತ್ವ ಎಂದು ಜರೆದಿದ್ದಾರೆ.

ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಗೆಲುವು... ಪಾಕಿಸ್ತಾನವನ್ನು ಕಾಲೆಳೆದ ಕೋಲ್ಕತ್ತಾ ಪೊಲೀಸ್

ನಾಯಕನೊಬ್ಬ ಇಷ್ಟೊಂದು ಬುದ್ಧಹೀನ ಯಾಕಾಗಿದ್ದಾನೆ ಎನ್ನುವುದು ಅರ್ಥವಾಗುತ್ತಿಲ್ಲ. ಪಾಕಿಸ್ತಾನ ಚೇಸಿಂಗ್​ನಲ್ಲಿ ದುರ್ಬಲ ಎನ್ನುವ ವಿಚಾರ ತಿಳಿದಿರಲಿಲ್ಲವೇ..? ತಮ್ಮ ತಂಡದ ಶಕ್ತಿ ಬ್ಯಾಟಿಂಗ್ ಅಲ್ಲ ಬೌಲಿಂಗ್​ ಎನ್ನುವ ಸಾಮಾನ್ಯ ವಿಚಾರ ಗೊತ್ತಿದ್ದೂ ಚೇಸಿಂಗ್ ಮೊರೆ ಹೋಗಿದ್ದು, ನಿಜಕ್ಕೂ ಮೂರ್ಖತನ ಎಂದು ಅಖ್ತರ್ ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್​​ನಲ್ಲಿ ಹೇಳಿಕೊಂಡಿದ್ದಾರೆ.

ಹೈವೋಲ್ಟೇಜ್ ಪಂದ್ಯಗಳಲ್ಲಿ ಟಾಸ್​ ಗೆಲುವೇ ನಿರ್ಣಯಕ. ಒಂದು ವೇಳೆ ಸರ್ಫರಾಜ್ ಬ್ಯಾಟಿಂಗ್ ಆಯ್ದುಕೊಂಡಿದ್ದಲ್ಲಿ ಅರ್ಧ ಪಂದ್ಯವೇ ಗೆದ್ದಂತಾಗುತ್ತಿತ್ತು ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

'ಪಾಕ್​ ಕೋಚ್ ಆದರೆ ಅವರಿಗೆ ಬ್ಯಾಟಿಂಗ್​​ ಸಲಹೆ ನೀಡುವೆ': ಪತ್ರಕರ್ತನ ಪ್ರಶ್ನೆಗೆ ರೋಹಿತ್​ ಉತ್ತರ!

ಪಂದ್ಯದ ಆರಂಭಕ್ಕೂ ಮುನ್ನ ಪಾಕಿಸ್ತಾನ ಪ್ರಧಾನಿ ಹಾಗೂ ಮಾಜಿ ಪಾಕ್​​ ಕ್ರಿಕೆಟಿಗ ಇಮ್ರಾನ್ ಖಾನ್ ಟ್ವೀಟ್ ಮಾಡಿ, ಟಾಸ್ ಗೆದ್ದಲ್ಲಿ ಬ್ಯಾಟಿಂಗ್ ಆಯ್ದುಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ, ಸರ್ಫರಾಜ್​ ಮೊದಲ ಹೆಜ್ಜೆಯಲ್ಲೇ ಎಡವಿ ಪಂದ್ಯ ಸೋಲಬೇಕಾಯಿತು.​

ABOUT THE AUTHOR

...view details