ಹೈದರಾಬಾದ್: ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿದ್ದರಿಂದ ತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಅಖ್ತರ್ ಇದೀಗ ಹುರಿದುಂಬಿಸುವ ಟ್ವೀಟ್ ಮಾಡಿ ಟ್ರೋಲ್ಗೆ ಗುರಿಯಾಗಿದ್ದಾರೆ.
ಟೆಸ್ಟ್ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡದ ಆಟಗಾರ ಕೆವಿನ್ ಪೀಟರ್ಸನ್ ಅವರನ್ನು ಔಟ್ ಮಾಡಿದ್ದ ಫೊಟೋ ಪೋಸ್ಟ್ ಮಾಡಿರುವ ಅಖ್ತರ್, ದೇಶವನ್ನ ಪ್ರತಿನಿಧಿಸುವಾಗ ರಕ್ತ, ಬೆವರು, ಭಾವೋದ್ವೇಗದಿಂದ ಆಡಬೇಕು. ನಿಮ್ಮ ಎದೆಯ ಮೇಲಿರುವ ನಕ್ಷತ್ರ ನಮ್ಮ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ.