ಲಂಡನ್:ಹೆಬ್ಬೆರಳು ಗಾಯದಿಂದ ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿರುವ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
"ನನ್ನ ಮೇಲೆ ನೀವು ತೋರಿಸುತ್ತಿರುವ ಪ್ರೀತಿ, ಕಾಳಜಿಗೆ ನನ್ನ ಆಭಾರಿಯಾಗಿದ್ದೇನೆ. ಆದರೆ, ಸದ್ಯ ಆಗಿರುವ ಗಾಯ ಗುಣಮುಖವಾಗುತ್ತಿಲ್ಲ. ಇದು ನಿಜಕ್ಕೂ ಬೇಸರವನ್ನುಂಟು ಮಾಡಿದೆ. ಟೀಮ್ ಇಂಡಿಯಾ ಹಾಗೂ ದೇಶಕ್ಕಾಗಿ ನಾನು ಆಡಬೇಕು ಎನ್ನುವ ಆಸೆ ನನ್ನದಾಗಿತ್ತು. ಆದರೆ ಗಾಯದಿಂದ ಸಂಪೂರ್ಣ ಹೊರಬರುವವರೆಗೂ ಮೈದಾನಕ್ಕಿಳಿಯುವಂತಿಲ್ಲ."
ಶಿಖರ್ ಸ್ಥಾನದಲ್ಲಿ ಅವಕಾಶ ಪಡೆದುಕೊಂಡರೂ, ಆಡುವ 11ರಲ್ಲಿ ರಿಷಭ್ಗೆ ಚಾನ್ಸ್ ಸುಲಭವಲ್ಲ!
"ನಮ್ಮ ತಂಡ ಉತ್ತಮವಾಗಿ ಆಡುತ್ತಿದೆ, ಇದೇ ಗೆಲುವಿನ ಫಾರ್ಮ್ನಲ್ಲಿ ಟೀಮ್ ಇಂಡಿಯಾ ಮುಂದುವರೆಯಲಿದೆ ಹಾಗೂ ವಿಶ್ವಕಪ್ ನಾವೇ ಗೆಲ್ಲುತ್ತೇವೆ. ತಂಡಕ್ಕೆ ನಿಮ್ಮ ಬೆಂಬಲ ಅತ್ಯಂತ ಮುಖ್ಯ ಹಾಗೂ ಇದೇ ರೀತಿ ನಮ್ಮನ್ನು ಹುರಿದುಂಬಿಸುತ್ತಿರಿ" ಎಂದು ಧವನ್ ಗಾಯದ ನೋವು ಹಾಗೂ ಟೂರ್ನಿಯಿಂದ ಹೊರಬಿದ್ದ ನಂತರವೂ ನಗುತ್ತಾ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಗಾಯಗೊಂಡು ವಿಶ್ವಕಪ್ನಿಂದ ಶಿಖರ್ ಧವನ್ ಔಟ್... ರಿಷಭ್ ಪಂತ್ಗೆ ಅವಕಾಶ!
ಯುವ ಆಟಗಾರ ರಿಷಭ್ ಪಂತ್ ಗಾಯಾಳು ಶಿಖರ್ ಧವನ್ ಸ್ಥಾನವನ್ನು ತುಂಬಲಿದ್ದಾರೆ. ಟೀಮ್ ಇಂಡಿಯಾ ಸದ್ಯ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು ಟೂರ್ನಿಯಲ್ಲಿ ಅಜೇಯವಾಗುಳಿದಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಮ್ಯಾಚ್ ಮಳೆಯಿಂದ ರದ್ದುಗೊಂಡಿತ್ತು. ಶನಿವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ದುರ್ಬಲ ಅಫ್ಘಾನಿಸ್ತಾನವನ್ನು ಎದುರಿಸಲಿದೆ.