ಅಲ್ ಅಮೆರತ್, ಓಮನ್:ಸ್ಕಾಟ್ಲೆಂಡ್ ಕ್ರಿಕೆಟ್ ತಂಡ ಓಮನ್ ಕ್ರಿಕೆಟ್ ತಂಡವನ್ನು ಎಂಟು ವಿಕೆಟ್ಗಳ ಅಂತರದಿಂದ ಸೋಲಿಸುವ ಮೂಲಕ ಐಸಿಸಿ ಟಿ-20 ವಿಶ್ವಕಪ್ನ ಸೂಪರ್-12 ಗುಂಪಿಗೆ ಲಗ್ಗೆಯಿಟ್ಟಿದೆ.
ಗ್ರೂಪ್ ಬಿ ಪಂದ್ಯದಲ್ಲಿ ಟಾಸ್ ಸೋತು ಕೌಶಲ್ಯಯುತ ಬೌಲಿಂಗ್ ಮಾಡಿದ ಸ್ಕಾಟ್ಲೆಂಡ್ ಕೇವಲ 122 ರನ್ಗಳಿಗೆ ಓಮನ್ ತಂಡವನ್ನು ಕಟ್ಟಿಹಾಕುವಲ್ಲಿ ಸಫಲವಾಯಿತು. ಓಮನ್ ಪರ ಅಕಿಬ್ ಇಲ್ಯಾಸ್ 37 ರನ್, ಝೀಶನ್ ಮಕ್ಸೂದ್ 34, ಮೊಹಮದ್ ನದೀಂ 25 ರನ್ ಬಿಟ್ಟರೆ ಯಾವ ಬ್ಯಾಟ್ಸ್ಮನ್ ಕೂಡಾ 10 ರನ್ ಗಡಿ ದಾಟಿರಲಿಲ್ಲ.
ಸ್ಕಾಟ್ಲೆಂಡ್ ಪರ ಜೋಷ್ ಡಾವೆ 3 ವಿಕೆಟ್ ಪಡೆದರೆ ಸಫಯಾನ್ ಶರೀಫ್ ಹಾಗೂ ಮೈಖಲ್ ಲೀಸ್ಕ್ ತಲಾ ಎರಡು ವಿಕೆಟ್ ಪಡೆದು ತಂಡಕ್ಕೆ ಓಮನ್ ಅನ್ನು ಕಡಿಮೆ ರನ್ಗಳಿಗೆ ಕಟ್ಟಿಹಾಕುವಲ್ಲಿ ಸಫಲರಾದರು.
122 ರನ್ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ ಇನ್ನೂ 18 ಎಸೆತಗಳು ಬಾಕಿ ಇರುವಂತೆ ಕೇವಲ 17 ಓವರ್ಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿದೆ. ಸ್ಕಾಟ್ಲೆಂಡ್ನ ಕೈಲೆ ಕೋಯಿಟ್ಜರ್ 41 ರನ್, ರಿಚಿ ಬೆರಿಂಗ್ಟನ್ 31 ರನ್ , ಮ್ಯಾಥ್ಯೂ ಕ್ರಾಸ್ 26 ರನ್, ಜಾರ್ಜ್ ಮುನ್ಸೆ 20 ರನ್ ಗಳಿಸ ಗೆಲುವಿಗೆ ಕಾರಣರಾಗಿದ್ದಾರೆ. ಓಮನ್ ತಂಡದ ಬೌಲರ್ಗಳು ಕೇವಲ ಎರಡು ವಿಕೆಟ್ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ.
ಇದನ್ನೂ ಓದಿ:T-20 World Cup Ind vs Pak: ಯಾವಾಗಲೂ ನಮ್ಮದೇ ಗೆಲುವು.. ಈ ಸಲ ಕೂಡ!