ಲಂಡನ್: ಟೀಮ್ ಇಂಡಿಯಾ ವಿರುದ್ಧ ಸೋಲನುಭವಿಸಿದ ಬಳಿಕ ಭಾರೀ ಟೀಕೆಗೊಳಗಾಗಿದ್ದ ಸರ್ಫರಾಜ್ ಬಳಗ ಭಾನುವಾರ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಸೆಮೀಸ್ ಕನಸು ಜೀವಂತವಾಗಿರಿಸಿದೆ.
ಪಾಕ್ ವಿರುದ್ಧ 49 ರನ್ಗಳ ಸೋಲು... ಸೆಮಿ ಫೈನಲ್ ರೇಸ್ನಿಂದ ಹೊರಬಿದ್ದ ದಕ್ಷಿಣ ಆಫ್ರಿಕಾ

ಭಾರತದ ವಿರುದ್ಧ ಮುಗ್ಗರಿಸಿದ ಬಳಿಕ ತಮ್ಮ ದೇಶದ ಅಭಿಮಾನಿಗಳೇ ಸರ್ಫರಾಜ್ರನ್ನು ವಿವಿಧ ರೀತಿಯಲ್ಲಿ ಹಾಸ್ಯ ಮಾಡಿದ್ದರು. ಶಾಪಿಂಗ್ಗೆ ಎಂದು ಮಾಲ್ ಬಳಿ ಸರ್ಫರಾಜ್ ಕಾಣಿಸಿಕೊಂಡಿದ್ದಾಗ ಪಾಕ್ ಅಭಿಮಾನಿ ಸರ್ಫರಾಜ್ರನ್ನು 'ಹಂದಿ' ಎಂದು ಕೀಳಾಗಿ ಜರೆದಿದ್ದ. ಇದೀಗ ಪಾಕ್ ಅಭಿಮಾನಿಗಳೇ ಸರ್ಫರಾಜ್ ನಮ್ಮನ್ನು ಕ್ಷಮಿಸಿ ಎಂದು ಭಾವನಾತ್ಮಕವಾಗಿ ಕೇಳಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕ್ ಅಭಿಮಾನಿಯೊಬ್ಬ ಸರ್ಫರಾಜ್ ವಿ ಆರ್ ಸಾರಿ( ಸರ್ಫರಾಜ್ ನಮ್ಮನ್ನು ಕ್ಷಮಿಸಿ) ಎಂದು ಪೋಸ್ಟರ್ ಹಿಡಿದಿದ್ದು, ಸದ್ಯ ವೈರಲ್ ಆಗಿದೆ.
ಭಾನುವಾರ ಫ್ಲೆಸಿಸ್ ಪಡೆಯನ್ನು 49 ರನ್ಗಳಿಂದ ಸೋಲಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನೂರಾರು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಕ್ಷಮೆಯಾಚಿಸಿದ್ದು, ತಮ್ಮ ತಂಡವನ್ನು ಕಷ್ಟದ ಸಂದರ್ಭದಲ್ಲಿ ಬೆಂಬಲ ನೀಡದಿರುವುದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.