ಇಂಗ್ಲೆಂಡ್: ವಿಶ್ವಕಪ್ ಟೂರ್ನಮೆಂಟ್ಗಾಗಿ ಈಗಾಗಲೆ ಇಂಗ್ಲೆಂಡ್ ತಲುಪಿರುವ ಟೀಂ ಇಂಡಿಯಾ ಆಟಗಾರರು, ಆಂಗ್ಲರ ನಾಡಲ್ಲಿ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ. ಇಂಗ್ಲೆಂಡ್ನಲ್ಲಿರುವ ರೋಹಿತ್ ಆಟಗಾರರ ಕೆಲವು ಫನ್ನಿ ವಿಷಯಗಳನ್ನ ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ಆಟಗಾರರ ಬಗ್ಗೆ ರೋಹಿತ್ ಮಾತನಾಡಿರುವ ವೀಡಿಯೋವನ್ನ ಐಸಿಸಿ ತನ್ನ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ. ವೀಡಿಯೋದಲ್ಲಿ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಿಟ್ ಮ್ಯಾನ್ ಹಂಚಿಕೊಂಡಿದ್ದಾರೆ. ರೋಹಿತ್ ಪ್ರಕಾರ ಅತಿ ಹೆಚ್ಚು ಸೆಲ್ಫಿ ತೆಗೆದುಕೊಳ್ಳುವ ವ್ಯಕ್ತಿ ಎಂದರೆ ಅದು ಹಾರ್ದಿಕ್ ಪಾಂಡ್ಯ, ಅತಿ ಕೆಟ್ಟ ಡ್ಯಾನ್ಸರ್ ಕೂಡ ಹಾರ್ದಿಕ್ ಪಾಂಡ್ಯ ಎಂದಿದ್ದಾರೆ.
ಇನ್ನು ಶಿಖರ್ ಧವನ್ ಮ್ಯೂಸಿಕ್ ಪ್ಲೇ ಮಾಡಿದರೆ ಮೈಕ್ ಕಸಿದುಕೊಂಡು ಹಾಡು ಹೇಳಲು ಶುರು ಮಾಡ್ತಾರಂತೆ. ವಿಮಾನದ ಹೊರಡುವ ಬಗ್ಗೆ ಪದೇ ಪದೆ ಕೇಳುವವರು ಯಾರು ಎಂಬ ಪ್ರಶ್ನೆಗೆ ರೋಹಿತ್ ಎಲ್ಲಾ ಆಟಗಾರರು ಎಂದು ಉತ್ತರಿಸಿದ್ದಾರೆ. ಇತ್ತ ಭುವನೇಶ್ವರ್ ಕುಮಾರ್ಗೆ ರೊಮ್ಯಾಂಟಿಕ್ ಕಾಮಿಡಿ ಅಂದ್ರೆ ತುಂಬಾ ಇಷ್ಟ ಎಂದಿದ್ದಾರೆ.
ಅತಿ ಕೆಟ್ಟ ರೂಂ ಮೇಟ್ ಯಾರು ಎಂದಿದ್ದಕ್ಕೆ ಶಿಖರ್ ಧವನ್ ತುಂಬಾ ಡರ್ಟಿ ಎಂದು ಉತ್ತರಿಸಿದ್ದಾರೆ. ಅಲ್ಲದೆ ಹಾರ್ದಿಕ್ ಪಾಂಡ್ಯಾ ತನ್ನ ಬಗ್ಗೆ ತಾನೇ ಗೂಗಲ್ನಲ್ಲಿ ಸರ್ಚ್ ಮಾಡುತ್ತಿರುತ್ತಾರೆ ಎಂದಿದ್ದಾರೆ. ಹೆಚ್ಚು ಕಾಲ ಜಿಮ್ನಲ್ಲಿ ಕಳೆಯುವ ವ್ಯಕ್ತಿ ಎಂದರೆ ಕ್ಯಾಪ್ಟನ್ ಕೊಹ್ಲಿ ಎಂದಿದ್ದಾರೆ. ಹೆಚ್ಚು ಕಾಫಿ ಕುಡಿಯುವ ವ್ಯಕ್ತಿ ಯಾರು ಎಂದಿದ್ದಕ್ಕೆ ನಾನೇ ಎಂದು ಉತ್ತರ ನೀಡಿದ್ದಾರೆ.
ಇನ್ನು ಬಸ್ಗೆ ಯಾವಾಗಲೂ ಲೇಟಾಗಿ ಬರುವ ವ್ಯಕ್ತಿ ಯಾರು ಎಂದಿದ್ದಕ್ಕೆ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಎಂದಿದ್ದಾರೆ. ಅಲ್ಲದೇ ಕುಲ್ದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಹೆಚ್ಚು ಫೋನ್ ಬಳಸುತ್ತಾರೆ ಎಂದು ಹಿಟ್ಮ್ಯಾನ್ ರೋಹಿತ್, ಬ್ಲೂ ಬಾಯ್ಸ್ ಬಣ್ಣ ಬಯಲು ಮಾಡಿದ್ದಾರೆ.