ದುಬೈ:ಟಿ-20 ವಿಶ್ವಕಪ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಕೆ.ಎಲ್.ರಾಹುಲ್ ಮತ್ತ ಇಶಾನ್ ಕಿಶನ್ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದಾರೆ.
ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊಹಮದ್ ಶಮಿ ಮೂರು ವಿಕೆಟ್ಗಳನ್ನು ಗಳಿಸಿದ್ದು, ಏಳು ವಿಕೆಟ್ಗಳ ಅಂತರದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಇಶಾನ್ ಕಿಶನ್ 46 ಎಸೆತಗಳಲ್ಲಿ 70 ರನ್ ಮತ್ತು ಕೆ.ಎಲ್.ರಾಹುಲ್ 24 ಎಸೆತಗಳಲ್ಲಿ 51 ರನ್ ಗಳಿಸಿದ್ದು, ರಿಷಬ್ ಪಂತ್ 14 ಎಸೆತಗಳಲ್ಲಿ 29 ರನ್ ಗಳಿಸಿ ಇಂಗ್ಲೆಂಡ್ ನೀಡಿದ್ದ 188 ರನ್ಗಳ ಗುರಿಯನ್ನು ಭೇದಿಸಿದ್ದಾರೆ.