ಕರ್ನಾಟಕ

karnataka

ETV Bharat / sports

ಬ್ರಿಸ್ಟಲ್​ನಲ್ಲಿ ಮಳೆಯಾಟ: ಪಾಕ್​-ಲಂಕಾ ಪಂದ್ಯ ರದ್ದು! - undefined

ಮುಂಜಾನೆಯಿಂದ ಸುರಿದ ಮಳೆಯಿಂದಾಗಿ ಬ್ರಿಸ್ಟಲ್​ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರದ್ದಾಗಿದೆ.

ಪಾಕ್​-ಲಂಕಾ ಪಂದ್ಯ ರದ್ದು

By

Published : Jun 7, 2019, 9:01 PM IST

ಇಂಗ್ಲೆಂಡ್​:ಇಲ್ಲಿನ ಬ್ರಿಸ್ಟಲ್​ನಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್​ ಪಂದ್ಯವನ್ನ ಮಳೆಯ ಕಾರಣದಿಂದ ರದ್ದು ಮಾಡಲಾಗಿದೆ.

ಇಂದು ಮುಂಜಾನೆಯಿಂದ ಬ್ರಿಸ್ಟಲ್​ನಲ್ಲಿ ಮಳೆ ಸುರಿಯುತ್ತಿತ್ತು. ಹೀಗಾಗಿ ಮಳೆ ನಿಂತ ಮೇಲೆ ಪಂದ್ಯ ಪ್ರಾರಂಭ ಮಾಡೋದಾಗಿ ಐಸಿಸಿ ಹೇಳಿತ್ತು. ಜೋರು ಮಳೆಯಲ್ಲದಿದ್ದರೂ ಸಂಜೆಯವರೆಗೆ ಎಡೆಬಿಡದೆ ಸುರಿದ ತುಂತುರು ಮಳೆಯಿಂದ ಪಿಚ್​ ಸಾಕಷ್ಟು ಒದ್ದೆಯಾಗಿದೆ. ಹೀಗಾಗಿ ಪಂದ್ಯವನ್ನ ರದ್ದು ಮಾಡಲಾಗಿದೆ.

ಉಭಯ ತಂಡಗಳಿಗೂ ಒಂದೊಂದು ಅಂಕ ನೀಡಲಾಗಿದೆ. ಎರಡೂ ತಂಡಗಳು ಈ ಹಿಂದೆ ಒಂದು ಪಂದ್ಯವನ್ನು ಗೆದ್ದು, ಒಂದು ಪಂದ್ಯದಲ್ಲಿ ಸೋಲು ಕಂಡಿದ್ದವು. ಇಂದು ಒಂದು ಅಂಕ ಪಡೆದ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡ ಮೂರು ಅಂಕಗಳೊಂದಿಗೆ ಕ್ರಮವಾಗಿ ಪಾಯಿಂಟ್ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

For All Latest Updates

TAGGED:

ABOUT THE AUTHOR

...view details