ಲಂಡನ್:ಇಂದು ನಡೆಯುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಸ್ಮಿತ್ರನ್ನ ಕಿಚಾಯಿಸಲ್ಲ ಎಂದು ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.
ಭಾರತ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಗಳು ಸ್ಮಿತ್ರನ್ನ ಕಿಚಾಯಿಸಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಬುದ್ದಿ ಹೇಳಿದ್ದರು. ಮುಂದಿನ ಪಂದ್ಯದಲ್ಲಿ ಹೀಗೇ ಆದರೆ ನೀವೇನು ಮಾಡುತ್ತೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಫರಾಜ್, 'ಪಾಕಿಸ್ತಾನದ ಜನ ಕ್ರಿಕೆಟನ್ನ, ಕ್ರೀಡಾಪಟುಗಳನ್ನ ಪ್ರೀತಿಸುತ್ತಾರೆ, ಉತ್ತಮ ಆಟಗಾರರನ್ನ ಬೆಂಬಲಿಸುತ್ತಾರೆ. ಆದ್ರೆ ಆಟಗಾರರನ್ನ ಹೀಯಾಳಿಸುವ ಕೆಲಸ ಮಾಡೋದಿಲ್ಲ' ಎಂದಿದ್ದಾರೆ.