ಲಂಡನ್:ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಈ ಪಂದ್ಯದಲ್ಲಿ ಬೆನ್ಸ್ಟೋಕ್ಸ್ರ ಬ್ಯಾಟ್ಗೆ ತಗುಲಿ ಬಾಲ್ ಬೌಂಡರಿ ಸೇರಿದ್ದಕ್ಕೆ ಸ್ಟೋಕ್ಸ್ ತಮ್ಮ ಜೀವನದಂತ್ಯದವರೆಗೂ ಕೇನ್ಸ್ ಬಳಿ ಕ್ಷಮೆ ಕೇಳುತ್ತೇನೆಂದು ತಿಳಿಸಿದ್ದಾರೆ.
ಫೈನಲ್ ಪಂದ್ಯದ ಅಂತಿಮ ಓವರ್ನಲ್ಲಿ ಬೆನ್ ಸ್ಟೋಕ್ಸ್ ತನಗರಿವಿಲ್ಲದೆ ಮಾಡಿದ ಯಡವಟ್ಟಿನಿಂದ ನ್ಯೂಜಿಲೆಂಡ್ ತಂಡ ವಿಶ್ವಕಪ್ ಕಳೆದುಕೊಳ್ಳುವಂತಾಯ್ತು.ಕಡೆಯ ಮೂರು ಬಾಲ್ನಲ್ಲಿ ಇಂಗ್ಲೆಂಡ್ ಗೆಲುವಿಗೆ 9 ರನ್ ಬೇಕಿತ್ತು. ಬೋಲ್ಟ್ ಎಸೆತವನ್ನ ಡೀಪ್ ಮಿಡ್ವಿಕೆಟ್ಗೆ ಬಾರಿಸಿದ ಸ್ಟೋಕ್ಸ್ ಎರಡನೇ ರನ್ ಕದಿಯುವಾಗ, ಗಪ್ಟಿಲ್ ಎಸೆದ ಚೆಂಡು ಸ್ಟೋಕ್ಸ್ಗೆ ತಗುಲಿದ್ದರಿಂದ ಬಾಲ್ ನೇರವಾಗಿ ಬೌಂಡರಿ ತಲುಪಿತು.
ತನಗರಿವಿಲ್ಲದೆ ನಡೆದ ಅಚಾತುರ್ಯವನ್ನ ಮನ್ನಿಸುವಂತೆ ಸ್ಟೋಕ್ಸ್ ಕೇನ್ಸ್ ಬಳಿ ಮನವಿ ಮಾಡಿದ್ರು. ಇದ್ರಿಂದ ಇಂಗ್ಲೆಂಡ್ ತಂಡಕ್ಕೆ 6 ರನ್ ಸೇರ್ಪಡೆಯಾಯ್ತು. ವಿಲಯಮ್ಸನ್ ಜಾಗದಲ್ಲಿ ಬೇರೆ ಆಟಗಾರರಿದ್ದರೆ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಹೆಚ್ಚೇನು ಪ್ರತರೋದ ಸೇರದೆ ಕ್ರೀಡಾ ಸ್ಪೂರ್ತಿ ಮೆರೆದ ಕಿವೀಸ್ ನಾಯಕ ವಿಲಿಯಮ್ಸನ್ಗೆ ಕ್ರಿಕೆಟ್ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪಂದ್ಯ ಮುಗಿದ ನಂತರ ಮಾತನಾಡಿದ ಸ್ಟೋಕ್ಸ್ " ನಾನು ನನ್ನ ಜೀವನದುದ್ದಕ್ಕೂ ಕೇನ್ಗೆ ಕ್ಷಮೆಯಾಚಿಸುತ್ತೇನೆ, ನಾನು ಬೇಕೆಂದು ಚೆಂಡನ್ನು ತಡೆಯಲಿಲ್ಲ. ನನಗರಿವಿಲ್ಲದೆ ಚೆಂಡು ನನ್ನ ಬ್ಯಾಟ್ ತಗುಲಿ ಬೌಂಡರಿ ಸೇರಿತು ಎಂದು ಕೇನ್ ವಿಲಿಯಮ್ಸನ್ಗೆ ಕ್ಷಮೆ ಕೇಳಿದ್ದಾರೆ.
ಪಂದ್ಯ ಮುಗಿದ ವೇಳೆ ಮಾತನಾಡಿದ ವಿಲಿಯಮ್ಸನ್ ಇಂಥಾ ಘಟನೆಗಳು ನಡೆಯಬಾರದು? ನಿಜಕ್ಕೂ ಇದು ದುರದೃಷ್ಟಕರ ಎಂದು ಹೇಳಿದ್ದಾರೆ.
ಇತ್ತ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕೂಡ ವಿಲಿಯಮ್ಸನ್ ಕ್ರಿಡಾ ಸ್ಪೂರ್ತಿ, ಸೋಲಿನಲ್ಲೂ ನಗುವ ಗುಣವನ್ನ ಶ್ಲಾಘಿಸಿದ್ದಾರೆ.