ಕರ್ನಾಟಕ

karnataka

ETV Bharat / sports

ಯಾರ್ಕರ್​​​​ ಕಿಂಗ್​​​ ಮೇಲೆ ವಾಡಾ ಕಣ್ಣು... ಡೋಪಿಂಗ್​​​​ ಪರೀಕ್ಷೆಗೆ ಹಾಜರಾದ ಬೂಮ್ರಾ!

ಸ್ಟೈಲಿಶ್​ ಯಾರ್ಕರ್​ ಕಿಂಗ್​ ಬೂಮ್ರಾ ವಿಶ್ವ ಡೋಪಿಂಗ್​ ನಿರೋಧಕ ಸಂಸ್ಥೆ ನಡೆಸಿದ ಡೋಪಿಂಗ್​ ಪರೀಕ್ಷೆಗೆ ಹಾಜರಾದರು.

ಯಾರ್ಕರ್​ ಕಿಂಗ್​ ಮೇಲೆ ವಾಡಾ ಕಣ್ಣು

By

Published : Jun 4, 2019, 11:43 AM IST

ಲಂಡನ್​: ಜೂನ್​ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲೇ ಭಾರತದ ಪೇಸ್​ ಬೌಲರ್​ ಜಸ್ಪ್ರಿತ್​ ಬೂಮ್ರಾರನ್ನು ವಾಡಾ ಡೋಪಿಂಗ್​ ಪರೀಕ್ಷೆಗೆ ಒಳಪಡಿಸಿತು.

ವಿಶ್ವಕಪ್​ ಆಡುತ್ತಿರುವ ಆಟಗಾರರಿಗೆ ವಿಶ್ವ ಡೋಪಿಂಗ್​ ನಿರೋಧಕ ಸಂಸ್ಥೆ ಪರೀಕ್ಷೆ ಕೈಗೊಳ್ಳುತ್ತೆ. ಈ ಡೋಪಿಂಗ್​ ಪರೀಕ್ಷೆಗೆ ಬೂಮ್ರಾ ಮಾತ್ರ ಹಾಜರಾಗಿದ್ದು, ಅವರಿಂದ ಶಾಂಪಲ್​ನ್ನು ವಾಡಾ ತೆಗೆದುಕೊಂಡಿದೆ.

ಇನ್ನು ಈ ಪರೀಕ್ಷೆಗೆ ಆಟಗಾರರೆಲ್ಲರೂ ಹಾಜರಾಗಬೇಕೆಂಬ ನೀತಿ ಇಲ್ಲ. ಯಾವ ಆಟಗಾರರನ್ನಾದರೂ ವಾಡಾ ಪರೀಕ್ಷಿಸಬಹುದಾಗಿದೆ. ಅದರಂತೆ ವಾಡಾ ಸೋಮವಾರ ಸ್ಟೈಲಿಶ್​ ಯಾರ್ಕರ್​ ಬೂಮ್ರಾರನ್ನು ಡೋಪಿಂಗ್​ ಟೆಸ್ಟ್​ಗೆ ಒಳಪಡಿಸಿದ್ದು, ಅವರಿಂದ ಮೂತ್ರದ ಶಾಂಪಲ್​ನ್ನು ಪಡೆಯಿತು.

ABOUT THE AUTHOR

...view details