ಮ್ಯಾಂಚೆಸ್ಟರ್:ಐಸಿಸಿ ವಿಶ್ವಕಪ್ 2019ರ ಆವೃತ್ತಿಯಲ್ಲಿ ಹೈವೋಲ್ಟೇಜ್ ಕದನವಾಗಿರುವ ಇಂಡೋ-ಪಾಕ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಪಾಕ್ ಬೌಲರ್ಗಳ ಬೆವರಿಳಿಸುತ್ತಿದ್ದಾರೆ. ಈ ವೇಳೆ ಪಾಕ್ ಎರಡು ಬಾರಿ ರನೌಟ್ ಚಾನ್ಸ್ ಮಿಸ್ ಮಾಡ್ಕೊಂಡಿದ್ದು ಭಾರತಕ್ಕೆ ಜೀವದಾನ ಸಿಕ್ಕಂತಾಗಿದೆ.
ಭಾರತದ ಎರಡು ರನೌಟ್ ಚಾನ್ಸ್ ಮಿಸ್ ಮಾಡ್ಕೊಂಡ ಪಾಕ್! - 50
ಇಂಡಿಯಾ-ಪಾಕ್ ಹೈ ವೋಲ್ಟೇಜ್ ಪಂದ್ಯದ ವೇಳೆ ಪಾಕಿಸ್ತಾನ ತಂಡ ಈಗಾಗಲೇ ಎರಡು ರನೌಟ್ ಚಾನ್ಸ್ ಮಿಸ್ ಮಾಡಿಕೊಂಡಿದೆ.
ಕೃಪೆ: Twitter
ಪಂದ್ಯದ ವೇಳೆ ಪಾಕ್ ಎರಡು ರನೌಟ್ಗಳ ಚಾನ್ಸ್ ಮಿಸ್ ಮಾಡಿಕೊಂಡಿದೆ. 9 ಓವರ್ನ ಮೊದಲ ಎಸೆತದಲ್ಲಿ ರಾಹುಲ್ ಔಟಾಗುವ ಸಾಧ್ಯತೆ ಇತ್ತು. ಆದ್ರೆ ಫಖರ್ ಜಮಾನ್ ಬೌಲರ್ ಎಂಡ್ಗೆ ಬಾಲ್ ಎಸೆದಿದ್ದರಿಂದ ರಾಹುಲ್ ಬಚಾವ್ ಆದರು. ಇದಾದ ಬಳಿಕ ರೋಹಿತ್ ಶರ್ಮಾ ಅವರ ರನೌಟ್ ಚಾನ್ಸ್ನ್ನು ಪಾಕ್ ಕಳೆದುಕೊಂಡಿತು. ಪಾಕ್ ರನೌಟ್ ಚಾನ್ಸ್ ಕಳೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Last Updated : Jun 16, 2019, 5:19 PM IST