ಕರ್ನಾಟಕ

karnataka

ETV Bharat / sports

ಹ್ಯಾಟ್ರಿಕ್‌ ಹೀರೋ-ಸ್ವಿಂಗ್‌ಸ್ಟಾರ್‌.. ವಿಂಡೀಸ್‌ ವಿರುದ್ಧದ ಪಂದ್ಯಕ್ಕೆ ದೇವರ ಕೃಪೆ ಯಾರಿಗೆ! - India vs West Indies

ಪಾಕ್‌ ವಿರುದ್ಧ ಮಂಡಿರಜ್ಜು ಗಾಯದಿಂದ ತಂಡದಿಂದ ಹೊರಗುಳುದಿದ್ದರು ಭುವಿ. ಆದರೆ, ನಿನ್ನೆ ಟೀಂ ಮ್ಯಾಂಚೆಸ್ಟರ್‌ನ ಒಳಾಂಗಣದಲ್ಲಿ ಟೀಂ ಇಂಡಿಯಾ ನೆಟ್‌ ಪ್ರಾಕ್ಟೀಸ್‌ ವೇಳೆ ಭುವಿ ಬೌಲಿಂಗ್‌ ಮಾಡಿದ್ದರು. ಬಿಸಿಸಿಐ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟ ವಿಡಿಯೋದಲ್ಲಿ ಭುವಿ ಬೌಲಿಂಗ್‌ ಮಾಡಿದ್ದ ಕಾಣಿಸಿದೆ. ಆದರೆ, ನಾಳಿನ ವಿಂಡೀಸ್‌ ವಿರುದ್ಧ ಪಂದ್ಯದಲ್ಲಿ ಭುವಿ ಅಂತಿಮ 11ರಲ್ಲಿ ಲಭ್ಯವಿರ್ತಾರಾ ಅನ್ನೋ ಭಾರತೀಯ ನಿಯಂತ್ರಣ ಮಂಡಳಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಹ್ಯಾಟ್ರಿಕ್‌ ಹೀರೋ-ಸ್ವಿಂಗ್‌ಸ್ಟಾರ್‌

By

Published : Jun 26, 2019, 11:58 AM IST

Updated : Jun 26, 2019, 1:55 PM IST

ಮ್ಯಾಚೆಂಸ್ಟರ್‌ :ಗುರುವಾರ ಮ್ಯಾಚೆಂಸ್ಟರ್‌ನ ಔಲ್ಡ್‌ ಟ್ರಾಫೋರ್ಡ್‌ ಗ್ರೌಂಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮುಖಾಮುಖಿಯಾಗಲಿವೆ. ಆದರೆ, ಗಾಯಗೊಂಡ ಭುವನೇಶ್ವರಕುಮಾರ್‌ ಆಡಿಸ್ಬೇಕಾ ಇಲ್ಲ ಹ್ಯಾಟ್ರಿಕ್ ಹೀರೊ ಮೊಹ್ಮದ್‌ ಶಮಿಗೆ ಚಾನ್ಸ್‌ ಕೊಡ್ಬೇಕಾ ಅನ್ನೋ ಬಗ್ಗೆ ಟೀಂ ಇಂಡಿಯಾದಲ್ಲಿ ತಲೆನೋವಾಗಿ ಪರಿಣಮಿಸಿದೆ. ಆದರೆ, ಕ್ರಿಕೆಟ್‌ ದೇವರ ಆಯ್ಕೆ ಮಾತ್ರ ಸ್ಪಷ್ಟ.

ಟೀಂ ಇಂಡಿಯಾಗೆ ಈಗ ಶುರುವಾಗಿದೆ ದೊಡ್ಡ ತಲೆನೋವು!

ಪಾಕ್‌ ವಿರುದ್ಧದ ಪಂದ್ಯದಲ್ಲಿ ಭುವಿ ಗಾಯದ ಸಮಸ್ಯೆಗೀಡಾಗಿ ರಿಟೈರ್ಡ್‌ ಹರ್ಟ್‌ ಆಗಿದ್ದರು. ಆಪ್ಘನ್‌ ವಿರುದ್ಧದ ಮ್ಯಾಚ್‌ಗೂ ಅಲಭ್ಯರಾಗಿದ್ದರು. ಆದರೆ, ಗುಣಮುಖರಾಗ್ತಿರುವ ಭುವಿ ನೆಟ್‌ ಪ್ರಾಕ್ಟೀಸ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆದರೆ, ನಾಳಿನ ಪಂದ್ಯದಲ್ಲಿ ಭುವಿ ಅಥವಾ ಶಮಿ ಇಬ್ಬರಲ್ಲಿ ಯಾರಿಗೆ ಮಣೆ ಹಾಕ್ಬೇಕೆಂಬುದರ ಬಗ್ಗೆ ಚರ್ಚೆ ಶುರುವಾಗಿದೆ.

ಕ್ಯಾಪ್ಟನ್‌ ವಿರಾಟ್‌ ಕೊಹ್ಲಿಗೆ ಸ್ಪಷ್ಟ ಸಲಹೆ ನೀಡಿದ ದೇವರು!

ಗಾಯದ ಸಮಸ್ಯೆಯಿಂದ ಹೊರಗುಳಿದಾಗ ಭುವಿ ಬದಲು ಶಮಿ ಆಡಲು ಅವಕಾಶ ಪಡೆದಿದ್ದರು. ಆಪ್ಘನ್‌ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಹೀರೋವಾಗಿದ್ದಾರೆ ಶಮಿ. ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಬೇಕಾದ ಇಕ್ಕಟ್ಟಿಗೆ ಟೀಂ ಇಂಡಿಯಾ ಸಿಲುಕಿದೆ. ಆದರೆ, ಕ್ಯಾಪ್ಟವ್‌ ವಿರಾಟ್‌ ಕೊಹ್ಲಿಗೆ ಸಚಿನ್ ಸ್ಪಷ್ಟ ಸಲಹೆ ನೀಡಿದ್ದಾರೆ.

ಹ್ಯಾಟ್ರಿಕ್ ಹೀರೋಗಿಲ್ಲ ದೇವರ ಬೆಂಬಲ..

ಈಗ ಅದ್ಭುತ ಫಿಟ್‌ನೆಸ್‌ ಕಾಪಾಡಿಕೊಂಡ ಶಮಿ 2.0!

ಆಪ್ಘನ್‌ ವಿರುದ್ಧ ಹ್ಯಾಟ್ರಿಕ್‌ ಸೇರಿ 4 ವಿಕೆಟ್‌ ಕಿತ್ತಿದ್ದಾರೆ ಶಮಿ. ವಿಶ್ವಕಪ್‌ನಲ್ಲಿ ಚೇತನ್‌ ಶರ್ಮಾ ಬಿಟ್ರೇ ಹ್ಯಾಟ್ರಿಕ್‌ ವಿಕೆಟ್‌ ಪಡೆದ 2ನೇ ಭಾರತೀಯ ಬೌಲರ್‌ ಎಂಬ ಗರಿ ಶಮಿಗಿದೆ. 2-3 ವರ್ಷದಲ್ಲಿ ವೈಯಕ್ತಿಕ ಜೀವನದ ಕ್ರೂಷಿಯಲ್‌ ಟೈಮ್‌ನಲ್ಲೂ ಶಮಿ ಬೌನ್ಸ್‌ ಬ್ಯಾಕ್‌ ಆಗಿದ್ದಾರೆ. ಫಿಟ್‌ನೆಸ್‌ ಅದ್ಭುತವಾಗಿ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾದಲ್ಲಿ ಈಗ ಮೊಹ್ಮದ್‌ ಶಮಿ 2.0 ಅಂತಾನೇ ತಂಡದ ದೈಹಿಕ ತರಬೇತುದಾರ ಶಂಕರ್‌ ಬಸು ಶ್ಲಾಘಿಸಿದ್ದರು. ಮಾಜಿ ಕ್ರಿಕೆಟರ್‌ ಚೇತನ್‌ ಶರ್ಮಾ ತಮ್ಮ ರೆಕಾರ್ಡ್‌ ಮುರಿದ ಶಮಿ ಮತ್ತು ಟೀಂ ಇಂಡಿಯಾಗೆ ವಿಶ್‌ ಮಾಡಿದ್ದರು.

ಸ್ವಿಂಗ್‌ಸ್ಟಾರ್‌ ಭುವಿ ಬೆಂಬಲಿಸಿ ಬ್ಯಾಟ್‌ ಬೀಸಿದ ತೆಂಡುಲ್ಕರ್‌!

ಇದರ ಮಧ್ಯೆಯೂ ಸಚಿನ್‌ ಮಾತ್ರ ವಿಂಡೀಸ್‌ ವಿರುದ್ಧದ ನಾಳಿನ ಪಂದ್ಯದಲ್ಲಿ ಭುವಿ ಪರವೇ ಬ್ಯಾಟ್‌ ಬೀಸಿದ್ದಾರೆ. ಬಲವಾಗಿ ಭುವಿ ಬೆಂಬಲಕ್ಕೆ ನಿಂತಿದ್ದಾರೆ. 'ಒಂದು ವೇಳೆ ಭುವಿ ಫಿಟ್ ಆಗಿದ್ರೇ ನಾನು ಅವರನ್ನ ಕಣಕ್ಕಿಳಿಸಬೇಕೆಂದು ಬಯಸುತ್ತೇನೆ. ಅದಕ್ಕೆ ಕಾರಣ ಭುವಿ ಬಾಲ್‌ನ ಸ್ವಿಂಗ್‌ ಮಾಡುವ ಅದ್ಭುತ ಸಾಮರ್ಥ್ಯ ಹೊಂದಿದ್ದಾರೆ. ಸ್ವಿಂಗ್‌ ದಾಳಿಯಿಂದಲೇ ವಿಂಡೀಸ್‌ನ ಟಾಫ್‌ ಆರ್ಡರ್‌ ಬ್ಯಾಟ್ಸ್‌ಮೆನ್‌ಗಳಿಗೆ ದೊಡ್ಡ ಸವಾಲು ಒಡ್ಡಬಲ್ಲರು' ಅಂತಾ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಹೇಳಿದ್ದಾರೆ.

ಬಲವಾಗಿ ಭುವಿ ಬೆಂಬಲಕ್ಕೆ ನಿಂತ ಕ್ರಿಕೆಟ್‌ ದೇವರು..

ಭುವಿ ಆಡುವ ಬಗ್ಗೆ ಆಯ್ಕೆ ಮಂಡಳಿ ಸ್ಪಷ್ಟಪಡಿಸಿಲ್ಲ!

ಪಾಕ್‌ ವಿರುದ್ಧ ಮಂಡಿರಜ್ಜು ಗಾಯದಿಂದ ತಂಡದಿಂದ ಹೊರಗುಳುದಿದ್ದರು ಭುವಿ. ಆದರೆ, ನಿನ್ನೆ ಟೀಂ ಮ್ಯಾಂಚೆಸ್ಟರ್‌ನ ಒಳಾಂಗಣದಲ್ಲಿ ಟೀಂ ಇಂಡಿಯಾ ನೆಟ್‌ ಪ್ರಾಕ್ಟೀಸ್‌ ವೇಳೆ ಭುವಿ ಬೌಲಿಂಗ್‌ ಮಾಡಿದ್ದರು. ಬಿಸಿಸಿಐ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟ ವಿಡಿಯೋದಲ್ಲಿ ಭುವಿ ಬೌಲಿಂಗ್‌ ಮಾಡಿದ್ದ ಕಾಣಿಸಿದೆ. ಆದರೆ, ನಾಳಿನ ವಿಂಡೀಸ್‌ ವಿರುದ್ಧ ಪಂದ್ಯದಲ್ಲಿ ಭುವಿ ಅಂತಿಮ 11ರಲ್ಲಿ ಲಭ್ಯವಿರ್ತಾರಾ ಅನ್ನೋ ಭಾರತೀಯ ನಿಯಂತ್ರಣ ಮಂಡಳಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಮಹಾನ್‌ ಟೂರ್ನಿಯ ಭಾಗವಾಗಲು ನವದೀಪ್‌ ಸೈನಿಗೆ ಬುಲಾವ್‌!

ಭುವಿ ಗಾಯಗೊಳ್ತಿದ್ದಂತೆಯೇ ಭಾರತ 'ಎ' ತಂಡದ ರೆಗ್ಯುಲರ್‌ ಬೌಲರ್‌ ನವದೀಪ್‌ ಸೈನಿಗೆ ವಿಶ್ವಕಪ್‌ ಟೂರ್ನಿಯ ಭಾಗವಾಗುವಂತೆ ಬುಲಾವ್‌ ನೀಡಿತ್ತು. ಟೀಂ ಇಂಡಿಯಾಗೆ ನೆಟ್‌ ಬೌಲರಾಗುವಂತೆ ಸೂಚಿಸಿತ್ತು. ಈಗಾಗಲೇ ಮ್ಯಾಂಚೆಸ್ಟರ್‌ನಲ್ಲಿರುವ ಸೈನಿಯೊಬ್ಬರೇ ನೆಟ್‌ ಬೌಲರ್‌ ಅಂತಾ ಬಿಸಿಸಿಐ ಅಧಿಕೃತ ವಾಟ್ಸ್‌ಆ್ಯಪ್‌ ಗ್ರುಪ್‌ನಲ್ಲಿ ಸ್ಪಷ್ಟಪಡಿಸಿದೆ.

Last Updated : Jun 26, 2019, 1:55 PM IST

For All Latest Updates

ABOUT THE AUTHOR

...view details