ಕರ್ನಾಟಕ

karnataka

ಪಾಕ್​ ತಂಡದ ವಿರುದ್ಧ ಕ್ರಮ ಕೈಗೊಳ್ಳಿ: ಪ್ರಧಾನಿ ಇಮ್ರಾನ್​ ಖಾನ್​ಗೆ ಅಕ್ಮಲ್ ಮನವಿ

By

Published : Jun 20, 2019, 10:08 PM IST

ಪಾಕಿಸ್ತಾನ ಕ್ರಿಕೆಟ್​ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಇಮ್ರಾನ್​ ಖಾನ್​ಗೆ ಮಾಜಿ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ಕಮ್ರಾನ್​ ಅಕ್ಮಲ್​ ಮನವಿ ಮಾಡಿದ್ದಾರೆ.

ಇಮ್ರಾನ್​ ಖಾನ್​ಗೆ ಅಕ್ಮಲ್ ಮನವಿ

ಇಸ್ಲಮಾಬಾದ್: 2019 ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಪಾಕ್​ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಕ್ರಿಕೆಟ್​ ಆಟಗಾರ ಕಮ್ರಾನ್​ ಅಕ್ಮಲ್​ ಮನವಿ ಮಾಡಿದ್ದಾರೆ.

ವಿಶ್ವಕಪ್​ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಪಾಕ್​ ತಂಡದ ಮೇಲೆ ಮಾಜಿ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಕಮ್ರಾನ್​ ಅಕ್ಮಲ್​ ಆಕ್ರೋಶಗೊಂಡಿದ್ದಾರೆ. ಪಾಕ್​ ಪ್ರಧಾನಿ ಮತ್ತು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ ಪೋಷಕ ಇಮ್ರಾನ್​ ಖಾನ್​ ಅವರಿಗೆ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ನಮ್ಮ ದೇಶದಲ್ಲಿ ಅನೇಕ ಪ್ರತಿಭಾನ್ವಿತ ಕ್ರಿಕೆಟ್​ ಆಟಗಾರರಿದ್ದಾರೆ. ಸಾಮರ್ಥ್ಯಕ್ಕೆ ಅನುಗುಣವಾಗಿ ಆಟಗಾರರನ್ನು ಆಯ್ಕೆ ಮಾಡಿದ್ದೇ ಆದಲ್ಲಿ, ಪಾಕ್​ ತಂಡದ ಬ್ಯಾಟಿಂಗ್​ ಮತ್ತು ಬೌಲಿಂಗ್​ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.

ವಿಶ್ವಕಪ್​ ಟೂರ್ನಿಯಲ್ಲಿ ಪಾಕ್​ ತಂಡ ಹಿನ್ನಡೆ ಅನುಭವಿಸಿದ್ದು, ಆಡಿರುವ 5 ಪಂದ್ಯಗಳಲ್ಲಿ 1ರಲ್ಲಿ ಜಯಗಳಿಸಿದ್ದು, 3 ಪಂದ್ಯದಲ್ಲಿ ಸೊಲು ಕಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ.

For All Latest Updates

TAGGED:

ABOUT THE AUTHOR

...view details