ಜೈಪುರ:ಭಾರತ ಕ್ರಿಕೆಟ್ ತಂಡ ಟಿ-20(Ind vs NZ, 1st T20I) ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಪಂದ್ಯದ ಶುಭಾರಂಭದ ನಡುವೆಯೂ ಈ ಗೆಲುವು ಅನೇಕ ಪಾಠಗಳನ್ನು ಕಲಿಸಿದೆ ಎಂದು ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 62 ರನ್ ಹಾಗೂ ನಾಯಕ ರೋಹಿತ್ ಶರ್ಮಾ (Rohit)48 ರನ್ಗಳ ನೆರವಿನಿಂದ ಭಾರತ, ನ್ಯೂಜಿಲ್ಯಾಂಡ್ ನೀಡಿದ 164 ರನ್ಗಳ ಗುರಿಯನ್ನು ಪ್ರಯಾಸದಿಂದಲೇ ತಲುಪಿ ವಿಜಯದ ನಗೆ ಬೀರಿದೆ.
ಇದನ್ನೋ ಓದಿ:IND vs NZ 1st T20: ಕಿವೀಸ್ ವಿರುದ್ಧ ಜಯದೊಂದಿಗೆ ರೋಹಿತ್-ದ್ರಾವಿಡ್ ಯುಗಾರಂಭ
ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಪಂದ್ಯ ಜಯದೊಂದಿಗೆ ಮುಕ್ತಾಯವಾಯಿತು. ಆದರೆ ನಮಗೆ ಹಲವು ಪಾಠಗಳನ್ನೂ ಕಲಿಸಿತು. ಏಕೆಂದರೆ ನಮ್ಮ ಕೆಲ ಹುಡುಗರಿಗೆ ಇಂತಹ ಸಂದರ್ಭದಲ್ಲಿ ಹೇಗೆ ಬ್ಯಾಟ್ ಬೀಸಬೇಕು ಎಂಬುದು ಹೊಸ ಅನುಭವವಾಗಿತ್ತು ಎಂದಿದ್ದಾರೆ.
ನಿರ್ಣಾಯಕ ಆಟದ ವೇಳೆ ಏನು ಮಾಡಬೇಕೆಂದು ಅರ್ಥಮಾಡಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಇದು ಕೇವಲ ಪವರ್ - ಹಿಟ್ಟಿಂಗ್ ಮಾಡುವ ಸಮಯುವಲ್ಲ. ಚೆಂಡನ್ನು ಫೀಲ್ಡರ್ನ ಎಡ ಅಥವಾ ಬಲಕ್ಕೆ ಇರಿಸಿ ಮತ್ತು ಸಿಂಗಲ್ಸ್ ಅಥವಾ ಬೌಂಡರಿಗಳನ್ನು ಹುಡುಕಲು ಪ್ರಯತ್ನಿಸುವ ಬಗೆಯಷ್ಟೇ ಅಲ್ಲ, ಗೆಲುವಿಗೆ ಬೇಕಾದ ರನ್ಗಳನ್ನು ಹೇಗೆ ಗಳಿಸಬೇಕು ಎಂಬುದಕ್ಕೂ ಪಾಠವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.