ಓವಲ್(ಲಂಡನ್): ಆತಿಥೇಯ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಕಮ್ಬ್ಯಾಕ್ ಮಾಡಿದೆ. ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ ಮೂರನೇ ದಿನದಾಟದ (ನಿನ್ನೆ) ಅಂತ್ಯಕ್ಕೆ 270 ರನ್ ಕಲೆಹಾಕಿತ್ತು.
ಮತ್ತೆ ನಿರಾಸೆ ಮೂಡಿಸಿದ ರಹಾನೆ
ಆದರೆ ಇಂದು ನಾಲ್ಕನೇ ದಿನದಾಟ ಆರಂಭಿಸಿರುವ ಟೀಮ್ ಇಂಡಿಯಾ ಆರಂಭದಲ್ಲೇ ರವೀಂದ್ರ ಜಡೇಜಾ (17) ಮತ್ತು ರಹಾನೆ (0) ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿದೆ. ಮೂರನೇ ದಿನದಾಟದ ಅಂತ್ಯದ ವೇಳೆ ಜಡೇಜಾ ಅಜೇಯ (9) ರನ್ಗಳಿಕೆ ಮಾಡಿ ಕ್ರೀಸ್ ಕಾಯ್ದುಕೊಂಡಿದ್ದರು. ಇಂದು ಕೇವಲ 8 ರನ್ಗಳಿಸಿ ಕ್ರೀಸ್ ವೋಕ್ಸ್ಗೆ ವಿಕೆಟ್ ಒಪ್ಪಿಸಿದರು. ನಂತರ ಜೊತೆಯಾದ ಅಜಿಂಕ್ಯ ರಹಾನೆ ಯಾವುದೇ ರನ್ಗಳಿಲ್ಲದೆ ವೋಕ್ಸ್ಗೆ ವಿಕೆಟ್ ಒಪ್ಪಿಸಿ ಮತ್ತೊಮ್ಮ ನಿರಾಸೆ ಮೂಡಿಸಿದರು.
ಪ್ರಸ್ತುತ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು 298 ರನ್ಗಳಿಸಿದ್ದು, 199 ರನ್ಗಳ ಮುನ್ನಡೆ ಪಡೆದಿದೆ. ನಾಯಕ ಕೊಹ್ಲಿ 40* ಹಾಗೂ ಪಂತ್ 2* ರನ್ಗಳಿಸಿ ಆಡುತ್ತಿದ್ದಾರೆ.
ಇದನ್ನೂ ಓದಿ: England Vs India 4th: 270ರನ್ಗಳಿಗೆ 3 ವಿಕೆಟ್; 171ರನ್ ಮುನ್ನಡೆ ಪಡೆದ ಭಾರತ