ಕರ್ನಾಟಕ

karnataka

ETV Bharat / sports

ಧೋನಿ ಪ್ರಯತ್ನ ಮಾಡಿದ್ರು ಆದ್ರೆ...?  ಮಾಹಿ ಆಟದ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ ಹೀಗಿತ್ತು! - undefined

ನಿಧಾನಗತಿಯ ಪಿಚ್​ನಿಂದ ಧೋನಿಗೆ ಬೌಂಡರಿ ಗಳಿಸಲು ಸಾಧ್ಯವಾಗಿಲ್ಲ ಎಂದು ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಮಾಹಿ ಆಟದ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ

By

Published : Jul 1, 2019, 12:20 PM IST

ಬರ್ಮಿಂಗ್​ಹ್ಯಾಮ್: ಇಂಗ್ಲೆಂಡ್​ ವಿರುದ್ಧ ಕೊನೆಯ ಐದು ಓವರ್​ಗಳಲ್ಲಿ ನಿಧಾನಗತಿ ಬ್ಯಾಟಿಂಗ್​ ನಡೆಸಿದ ಧೋನಿ ವಿರುದ್ಧ ಟೀಕೆಗಳು ಕೇಳಿ ಬಂದಿದ್ದು, ಅಭಿಮಾನಿಗಳಲ್ಲದೇ ಮಾಜಿ ಕ್ರಿಕೆಟ್​ ಆಟಗಾರರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್​​ ಕೊಹ್ಲಿ, ‘ಧೋನಿ ಬೌಂಡರಿ ಗಳಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ, ನಿಧಾನಗತಿಯ ಪಿಚ್​ನಿಂದ ಸಾಧ್ಯವಾಗಲಿಲ್ಲ. ಪಿಚ್​ ವರ್ತನೆ ಬಗ್ಗೆ ಅರಿತ ಇಂಗ್ಲೆಂಡ್​ ತಂಡದ ವೇಗಿಗಳು ಉತ್ತಮವಾಗಿ ಬೌಲಿಂಗ್​ ಮಾಡಿದ್ರು’. ಎಂದು ಹೇಳಿದ್ದಾರೆ.

ದಾದಾಗೂ ಬೇಸರ ತರಿಸಿದ ಧೋನಿ ಆಟ... 'ಆ ಇನ್ನಿಂಗ್ಸ್​ ಬಗ್ಗೆ ಕೇಳಬೇಡಿ, ನನ್ನ ಬಳಿ ಉತ್ತರವಿಲ್ಲ' ಎಂದ ಗಂಗೂಲಿ

ಇಂಗ್ಲೆಂಡ್​ ವಿರುದ್ಧ 6 ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ 50 ನೇ ಓವರ್​ ತನಕ ಬ್ಯಾಟಿಂಗ್​ ನಡೆಸಿ ಔಟಾಗದೇ ಉಳಿದರು. ಗೆಲುವಿಗಾಗಿ 338 ರನ್​ಗಳ ಮೊತ್ತ ಚೇಸಿಂಗ್ ಮಾಡಬೇಕಿತ್ತು. ಬಿಗ್​ ಹಿಟ್ಟರ್​ ಪಾಂಡ್ಯ 46 ರನ್​ಗಳಿಸಿ ಔಟಾದರು. ಈ ವೇಳೆ 31 ಎಸೆತಗಳಿಗೆ 71 ರನ್​ಗಳ ಅಗತ್ಯವಿತ್ತು. ಆದರೆ, ಧೋನಿ ಹಾಗೂ ಕೇದಾರ್​ ಜಾಧವ್​ ಕೇವಲ 39 ರನ್​ಗಳಿಸಿದ್ದರು.

ಕೊನೆಯ ಓವರ್​ಗಳಲ್ಲಿ ಧೋನಿ ಹಾಗೂ ಜಾಧವ್​ ಬೌಂಡರಿ ಬಾರಿಸುವ ಬಗ್ಗೆ ಯೋಚಿಸದೇ, ಕೇವಲ ಸಿಂಗಲ್​ಗಳನ್ನು ತೆಗೆದುಕೊಳ್ಳುತ್ತಿದ್ದರು. ಇದು ವೀಕ್ಷಕರಿಗಷ್ಟೇ ಅಲ್ಲದೆ ಕಾಮೆಂಟರಿ ಮಾಡುತ್ತಿದ್ದ ನಾಸೀರ್​ ಹುಸೇನ್​ ಹಾಗೂ ಗಂಗೂಲಿಗೂ ಆಶ್ಚರ್ಯ ತಂದಿತ್ತು.

For All Latest Updates

TAGGED:

ABOUT THE AUTHOR

...view details