ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರುತ್ತಿದ್ದು, ಇದಕ್ಕೆ ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ರನ್ನ ದೂಷಿಸಲಾಗುತ್ತಿದೆ. ಇತ್ತೀಚೆಗೆ ಪಾಕ್ ಅಭಿಮಾನಿಯೊಬ್ಬ ಸರ್ಫರಾಜ್ರನ್ನ ಹಂದಿ ಎಂದು ಸಾರ್ವಜನಿಕವಾಗಿ ನಿಂದಿಸಿದ್ದ ಪ್ರಸಂಗ ನಡೆದಿತ್ತು.
ಇಂಥಾ ಮಾತುಗಳಿಂದ ಸರ್ಫರಾಜ್ ಸಾಕಷ್ಟು ಬೇಸರಗೊಂಡಿದ್ದು ಆಟಗಾರರನ್ನು ನಿಂದಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜನ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನಿಂದಿಸೋದು ಸಾಮಾನ್ಯವಾಗಿದೆ. ಅದನ್ನ ತಡೆಯೋಕೆ ನಮ್ಮಿಂದ ಸಾಧ್ಯವಿಲ್ಲ. ಒಂದು ಆಟದಲ್ಲಿ ಸೋಲು,ಗೆಲುವು ಸಾಮಾನ್ಯ. ಇಲ್ಲಿಯವರೆಗೆ ನಾವೊಬ್ಬರೇ ಸೋತಿಲ್ಲ, ಹಲವು ತಂಡಗಳು ಸೋಲು ಕಂಡಿವೆ ಎಂದಿದ್ದಾರೆ.