ಕರ್ನಾಟಕ

karnataka

ETV Bharat / sports

ವಿಶ್ವಕಪ್‌ನಲ್ಲಿ '10'ತ್ಯುತ್ತಮ ಟೀಂ ಇಂಡಿಯಾ.. ಇವು ತಂಡದ ಶಕ್ತಿ-ದೌರ್ಬಲ್ಯಗಳು! - Bumrah hold the key

ಎರಡು ಏಕದಿನ ವಿಶ್ವಕಪ್​ ಗೆದ್ದಿರುವ ಟೀಂ ಇಂಡಿಯಾ, ಮತ್ತೊಮ್ಮೆ ವಿಶ್ವಕಪ್​ ಮುಡಿಗೇರಿಸಿಕೊಳ್ಳಲು ಆಂಗ್ಲರ ನಾಡಿಗೆ ಲಗ್ಗೆ ಇಟ್ಟಿದೆ. ಇತರೇ ತಂಡಗಳಿಗೆ ಹೋಲಿಸಿದ್ರೆ ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲುವ ಫೇವರಿಟ್​ ತಂಡವಾಗಿದೆ.

ಟೀಂ ಇಂಡಿಯಾ

By

Published : May 26, 2019, 8:21 AM IST

ಹೈದರಾಬಾದ್​: ಕಾತರಕ್ಕೆ ತೆರೆ ಬೀಳಲು ಇನ್ನೇನು ನಾಲ್ಕೇ ದಿನ. ಜಗತ್ತಿನ ಕ್ರಿಕೆಟ್ ಫ್ಯಾನ್ಸ್‌ ಆಂಗ್ಲರ ನಾಡಿನಲ್ಲಿ ನಡೆಯುವ ವಿಶ್ವಕಪ್​ ಸಮರ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ 2 ಬಾರಿ ವರ್ಲ್ಡ್‌ಕಪ್‌ ಗೆದ್ದಿರುವ ಟೀಂ ಇಂಡಿಯಾ ಈ ಸಾರಿಯೂ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದಾಗಿದೆ. ಬ್ಲ್ಯೂಬಾಯ್ಸ್‌ ಸ್ಟ್ರೆಂಥ್‌ ಜತೆಗೆ ಕೆಲ ವೀಕ್​ನೆಸ್‌ಗಳನ್ನೂ ಮೆಟ್ಟಿ ನಿಲ್ಲಬೇಕು.

ಭಾರತ ತಂಡದಲ್ಲಿ ಒಂದಲ್ಲಾ ಹತ್ತಾರು ವೈಶಿಷ್ಟ್ಯ :
ಬಲಿಷ್ಠ ಬ್ಯಾಟಿಂಗ್​ ಲೈನ್‌ಅಪ್​, ಐಪಿಎಲ್​ಲ್ಲಿ ಧೂಳೆಬ್ಬಿಸಿದ ಪವರ್​ ಹಿಟ್ಟರ್ಸ್​, ಯಂಗ್-ಎನರ್ಜಿಟಿಕ್​ ಅಂಡ್ ಅಗ್ರೆಸ್ಸಿವ್​ ಕ್ಯಾಪ್ಟನ್​, ಅನುಭವಿ ವಿಕೆಟ್​ ಕೀಪರ್​, ಗೇಮ್​ ಚೇಂಜ್​ ಮಾಡಬಲ್ಲ ಯಂಗ್​ ಬೌಲರ್ಸ್​. ಇವೆಲ್ಲ ವಿಶ್ವಕಪ್​ ಆಡ್ತಿರುವ ಟೀಂ ಇಂಡಿಯಾದ ವೈಶಿಷ್ಟ್ಯಗಳು. 2011ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ರೋಚಕ ಫೈನಲ್​ ಹಾಣಾಹಣಿ ಗೆದ್ದು ವಿಶ್ವಕಪ್​ ಎತ್ತಿಹಿಡಿದ ಭಾರತ, ಆ ಗೆಲುವನ್ನ ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ಗೆ ಅರ್ಪಿಸಿತು. ಟೀಂ ಇಂಡಿಯಾದ ಈಗಿನ ನಾಯಕ ಕಿಂಗ್​ ಕೊಹ್ಲಿ, ಕ್ರಿಕೆಟ್ ದೇವರನ್ನ ತಮ್ಮ ಭುಜದ ಮೇಲೆ ಹೊತ್ಕೊಂಡು ಗೆಲುವನ್ನ ಸಂಭ್ರಮಿಸಿದ್ದರು. ಆ ಬಳಿಕ 2015ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಭಾರತ ಮುಗ್ಗರಿಸಿ, ಕ್ರಿಕೆಟ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಈಗ ಮತ್ತೆ ವಿಶ್ವಕಪ್​ ಬಂದಿದೆ. ಕಪ್​ ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಕೊಹ್ಲಿ ಬಳಗವೂ ಇದೆ. ಹಾಗಾದ್ರೇ ಟೀಂ ಇಂಡಿಯಾ ಈ ಬಾರಿ ಕಪ್​ ಗೆಲ್ಲುತ್ತಾ, ಬ್ಲ್ಯೂ ಬಾಯ್ಸ್​ ಸ್ಟ್ರೆಂಥ್​ ಮತ್ತು ವೀಕ್ನೆಸ್​ ಏನು? ಕಪ್​ ಗೆಲ್ಲೋಕೆ ಯಾವೆಲ್ಲಾ ಅವಕಾಶಗಳು ಭಾರತಕ್ಕಿವೆ ಅಂತೀರಾ, ಇಲ್ನೋಡಿ.

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ

ಟಾಪ್‌ ಆರ್ಡರ್‌ ಬ್ಯಾಟ್ಸ್‌ಮೆನ್ಸ್‌, ಸ್ಪಿನ್‌ ಬೌಲರ್ಸ್‌ ಬಲ:
ಟಾಪ್​ ಆರ್ಡರ್​ ಬ್ಯಾಟಿಂಗ್​ ಲೈನಪ್ ಹೊಂದಿದೆ ಭಾರತ. ಎಡಗೈ ಬ್ಯಾಟ್ಸ್‌ಮೆನ್‌ ಶಿಖರ್​ ಧವನ್​, ಈ ಬಾರಿಯ ಐಪಿಎಲ್​ ಕಪ್​ ಗೆದ್ದ ನಾಯಕ ರೋಹಿತ್​ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಭಾರತ ತಂಡದಲ್ಲಿ ರನ್​ ಮಳೆ ಸುರಿಸೋ ಟಾಪ್​ ಆರ್ಡರ್ ಬ್ಯಾಟ್ಸ್‌ಮೆನ್​ಗಳು. 2015ರ ವಿಶ್ವಪ್​ನಲ್ಲಿ ಭಾರತದ ಟಾಪ್​ ಆರ್ಡರ್​ ಬ್ಯಾಟ್ಸ್‌ಮೆನ್‌ಗಳು ಬರೋಬ್ಬರಿ 13,055 ರನ್ ಪೇರಿಸಿದ್ದರು.

ತಂಡದಲ್ಲಿ ಮ್ಯಾಜಿಕ್ ಮಾಡಬಲ್ಲ ಸ್ಪಿನ್ನರ್ಸ್‌ಗಳಿದ್ದಾರೆ. ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​ ಹಾಗೂ ಯಜುವೇಂದ್ರ ಚಾಹಲ್​ ಭಾರತ ತಂಡದ ಸ್ಪಿನ್​ ಮಾಂತ್ರಿಕರು. ಸದ್ಯ ಈ ಮೂವರೂ ಸ್ಥಿರ ಪ್ರದರ್ಶನ ನೀಡುತ್ತಿರುವುದು ಭಾರತಕ್ಕೆ ಪ್ಲಸ್​ ಪಾಯಿಂಟ್​. 2015ರ ವರ್ಲ್ಡ್‌​ಕಪ್​ನಿಂದ ಈ ಮೂವರಲ್ಲಿ ಕನಿಷ್ಟ ಒಬ್ಬರು ಆಡಿರುವ ಪಂದ್ಯಗಳಲ್ಲಿ ಒಟ್ಟು 517 ವಿಕಟ್​ಗಳು ಉರುಳಿವೆ.

ಮಹೇಂದ್ರ ಸಿಂಗ್​ ಧೋನಿ

ಮಧ್ಯಮ ಕ್ರಮಾಂಕ, ಫಾರ್ಮ್‌ನದ್ದೇ ದೌರ್ಬಲ್ಯಗಳು:
ಭಾರತದ ಬ್ಯಾಟಿಂಗ್​ ಹೆಚ್ಚಾಗಿ ಆರಂಭಿಕ ಆಟಗಾರರನ್ನೇ ನೆಚ್ಚಿದೆ. ಮಧ್ಯಮ ಕ್ರಮಾಂಕದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಅಂಕಿ-ಅಂಶಗಳ ಪ್ರಕಾರ 2015ರ ವಿಶ್ವಕಪ್ ಬಳಿಕ ಭಾರತದ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳಿಂದ 13,055 ರನ್​ಗಳು ಬಂದಿವೆ. ಇದು ಉಳಿದ ತಂಡಗಳಿಗೆ ಹೋಲಿಸದ್ರೆ ಅತೀ ಹೆಚ್ಚು ರನ್​. ಇದೇ ವೇಳೆ ಭಾರತ ತಂಡದ ಮಧ್ಯಮ ಕ್ರಮಾಂಕದ ರನ್​ ಕೇವಲ 7,025. ಇದು 6ನೇ ಅತೀ ಹೆಚ್ಚು ಮೊತ್ತ. ಹೀಗಾಗಿ ಮಧ್ಯಮ ಕ್ರಮಾಂಕದ ಆಟಗಾರರು ಇನ್ನಷ್ಟು ವೇಗ ರನ್‌ ಪೇರಿಸಬೇಕಿದೆ.

ಆಟಗಾರರ ಫಾರ್ಮ್​ ಸಮಸ್ಯೆ ಪದೇಪದೆ ಕಾಡುತ್ತಿದೆ. ನಾಯಕ ವಿರಾಟ್​ ಕೊಹ್ಲಿ ರನ್​ ಮೆಷಿನ್​ ಅಂತಾನೇ ಫೇಮಸ್​. ಯಾವ ಕ್ಷಣದಲ್ಲಿ ಅಬ್ಬರಿಸುತ್ತಾರೆಂದು ಎದುರಾಳಿಗಳೂ ಗೆಸ್​ ಮಾಡೋದು ಕಷ್ಟ. ಆದರೆ, ಈ ಬಾರಿಯ ಐಪಿಎಲ್​ನಲ್ಲಿ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ವಿಶ್ವಕಪ್​ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವುದರಿಂದ ಫಾರ್ಮ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಇನ್ನೊಂದೆಡೆ ಮಾಜಿ ನಾಯಕ ಎಂ ಎಸ್​ ಧೋನಿ ಐಪಿಎಲ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದರು. ಆದರೆ, ಅದಕ್ಕೂ ಹಿಂದೆ ನಡೆದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಧೋನಿ ಫಾರ್ಮ್​ ಕಳೆದುಕೊಂಡಿದ್ದರು. ಈಗ ಮತ್ತೆ ಧೋನಿ ಕಳಪೆ ಫಾರ್ಮ್‌ ಹೊಂದಬಾರದಷ್ಟೇ.

ಜಸ್ಪ್ರಿತ್​ ಬುಮ್ರಾ

2 ಬಾರಿ ಚಾಂಪಿಯನ್‌ ಭಾರತ ತಂಡಕ್ಕೆ ಅವಕಾಶಗಳು :
ಸದ್ಯ ವಿಶ್ವಕಪ್​ಗೆ ಆಯ್ಕೆಯಾಗಿರೋ ಟೀಂ ಇಂಡಿಯಾ ಬಲಿಷ್ಟವಾಗಿದೆ. 15 ಮಂದಿಯೂ ಅಬ್ಬರಿಸುವ ಸಾಮರ್ಥ್ಯವುಳ್ಳವರೇ. ಪ್ಲೇಯಿಂಗ್​ ಇಲೆವೆನ್​ ಹೊರತುಪಡಿಸಿ, ಉಳಿವ ನಾಲ್ಕು ಆಟಗಾರರನ್ನು ಅಗತ್ಯ ಬಿದ್ದಾಗ ಅಥವಾ ಇಂಜುರಿ ಸಮಸ್ಯೆ ಎದುರಾದಾಗ ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ಸದ್ಯ ಹಾರ್ದಿಕ್​ ಪಾಂಡ್ಯ ಹಾಗೂ ಜಸ್ಪ್ರೀತ್​ ಬೂಮ್ರಾ ಉತ್ತಮ ಫಾರ್ಮ್​ನಲ್ಲಿದ್ದಾರೆ. ಈ ಬಾರಿ ಮುಂಬೈ ಐಪಿಎಲ್‌ ಚಾಂಪಿಯನ್ ಆಗಲು ಈ ಇಬ್ಬರ ಪಾತ್ರ ದೊಡ್ಡದಾಗಿತ್ತು. ಬೂಮ್ರಾ ಏಕದಿನ ಕ್ರಿಕೆಟ್​ನಲ್ಲಿ ನಂಬರ್​ ಒನ್​ ಱಂಕಿಂಗ್​ನಲ್ಲಿದ್ದಾರೆ. ಇವರನ್ನು ಸಮರ್ಥ ಅಸ್ತ್ರವಾಗಿ ಬಳಸುವ ಅವಕಾಶವಿದೆ.

ಗೆಲ್ಲುವ ಫೇವರೆಟ್‌ ತಂಡ ಭಾರತಕ್ಕೆ ಭೀತಿಯೂ ಇದೆ :

ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಆಟಗಾರರೇ ಸಿಗುತ್ತಿಲ್ಲ. ಟೀಂ ಇಂಡಿಯಾ ಇದಕ್ಕಾಗಿ ಹಲವು ಆಟಗಾರರನ್ನ ಪರೀಕ್ಷಿಸಿದೆ. ಆದರೆ, ಸ್ಟ್ಯಾಂಡಿಂಗ್​ ಬ್ಯಾಟ್ಸ್​ಮನ್​ಗಳು ಟೀಂ ಇಂಡಿಯಾಗೆ ಲಭ್ಯವಾಗುತ್ತಿಲ್ಲ. ಮಿಡ್ಲ್​ ಆರ್ಡರ್​ಗಾಗೇ ಈವರೆಗೆ, ಭಾರತ 24 ಆಟಗಾರರನ್ನ ಬಳಸಿಯೂ, ಯಾವ ಜೋಡಿಯೂ ಕ್ಲಿಕ್​ ಆಗಿಲ್ಲ. ಮೂವರು ವೇಗದ ಬೌಲರ್​ಗಳನ್ನು ಈ ಸಾರಿ ಆಯ್ಕೆ ಮಾಡಲಾಗಿದೆ. ಶಮಿ, ಭುವನೇಶ್ವರ್​ ಹಾಗೂ ಬೂಮ್ರಾ ಪೇಸರ್​ಗಳಾಗಿ ಹೆಚ್ಚೆಚ್ಚು ವಿಕೆಟ್​ ಕೀಳ್ತಾರಾ ಅನ್ನೋ ಆತಂಕವೂ ಇದೆ. ಇಂಗ್ಲೆಂಡ್​ನ ಅಂಗಳಗಳಲ್ಲಿ ಉಮೇಶ್​ ಯಾದವ್ ಹೆಚ್ಚು ಕ್ಲಿಕ್​ ಆಗಿದ್ದಾರೆ. ಆದರೆ, ಯಾದವ್​ ಆಯ್ಕೆಯಾಗದಿರುವುದು ಅಭಿಮಾನಿಗಳಿಗೆ ಚಿಂತೆಯಾಗಿದೆ.

ವಿಶ್ವಕಪ್​ ಆಡಲಿರೋ ಭಾರತ ತಂಡದ ಪ್ಲೇಯರ್‌ಗಳು :
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ವಿಜಯ್ ಶಂಕರ್, ಎಂಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್, ಭುವನೇಶ್ವರ್​ ಕುಮಾರ್, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್. ತಂಡದ ದೌರ್ಬಲ್ಯಗಳನ್ನ ಹತ್ತಿಕ್ಕಿ ಸಾಂಘಿಕ ಶಕ್ತಿ ಪ್ರದರ್ಶನ ತೋರಿದ್ರೇ ನಿಜಕ್ಕೂ ಭಾರತ ಈ ಸಾರಿ ಆಂಗ್ಲರ ನಾಡಿನಲ್ಲಿ ವರ್ಲ್ಡ್‌ಕಪ್‌ ಎತ್ತಿ ಹಿಡಿಯೋದರಲ್ಲಿ ಅನುಮಾನವೇ ಇಲ್ಲ.

ABOUT THE AUTHOR

...view details