ಕರ್ನಾಟಕ

karnataka

ETV Bharat / sports

ಹಿ ಈಸ್ ಆನ್ ಹಿಸ್ ಲಾಸ್ಟ್ ಲೆಗ್ : ಇವರ ಆಟ ನನಗೂ ಇಷ್ಟ.. - ಮಾಜಿ ಆಲ್​ರೌಂಡರ್​ ಆಟಗಾರ ಕಪಿಲ್​ ದೇವ್​

ಕಳೆದೊಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಲಿದ್ದಾರಂತೆ. ಇದಕ್ಕಾಗಿ ಮೈದಾನಲ್ಲಿ ಕಸರತ್ತು ನಡೆಸಿದ್ದಾರೆ. ಧೋನಿ ಆಗಮನದ ಕುರಿತು ಮಾಜಿ ಆಲ್​ರೌಂಡರ್​ ಆಟಗಾರ ಕಪಿಲ್​ ದೇವ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

Kapil Dev and MS Dhoni Playing T20 World Cup,ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ
ಸಂಗ್ರಹ ಚಿತ್ರ

By

Published : Feb 28, 2020, 1:59 PM IST

ನೋಯ್ಡಾ :ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮತ್ತೆ ಆಡುವುದಾಗಿ ತಿಳಿಸಿರುವ ಮಹೇಂದ್ರ ಸಿಂಗ್ ಧೋನಿ ಕ್ರಮಕ್ಕೆ ಟೀಂ ಇಂಡಿಯಾದ ಮಾಜಿ ಆಲ್​ರೌಂಡರ್​ ಆಟಗಾರ ಕಪಿಲ್​ ದೇವ್‌ ಅಷ್ಟೊಂದು ಉತ್ಸುಕತೆ ತೋರಿಸಿಲ್ಲ. ಐಪಿಎಲ್​ ಅನ್ನೋದು ಕ್ರಿಕೆಟ್​ ಲೋಕದ ಭವಿಷ್ಯದ ತಾರೆಗಳನ್ನು ಹುಡುಕುವ ಪಂದ್ಯ. ಧೋನಿ ಟಿ-20 ವಿಶ್ವಕಪ್​ಗಾಗಿ ಪರಿಗಣಿಸಬೇಕಾದ ಕೆಲವು ಪಂದ್ಯಗಳನ್ನು ಆಡಬೇಕು ಎಂದು ಸಲಹೆ ಜೊತೆಗೆ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿಮಗೆ ವಿಶ್ರಾಂತಿ ಅಗತ್ಯವಿದೆ ಎನಿಸಿದರೆ ಐಪಿಎಲ್​​​​ ಆಡಬೇಡಿ: ಕೊಹ್ಲಿ ಪಡೆಗೆ ಕಪಿಲ್​ದೇವ್​​​​ ಸಲಹೆ

ನೋಯ್ಡಾದಲ್ಲಿ ನಡೆದ ಹೆಚ್​ಸಿಎಲ್ ಐದನೇ ಆವೃತ್ತಿ ಗ್ರ್ಯಾಂಡ್‌​​ ಈವೆಂಟ್​ನಲ್ಲಿ ಮಾತನಾಡಿದ ಕಪಿಲ್​ ದೇವ್​, ಧೋನಿಗೆ ಮಾತ್ರ ಇದು ಅನ್ವಯಿಸುವುದಿಲ್ಲ. ಐಪಿಎಲ್​ ಅನ್ನೋದು ಮುಂದಿನ 10 ವರ್ಷಗಳಗಾಲ ನಾವು ಹೆಮ್ಮೆ ಪಡುವಂತಹ ಉತ್ತಮ ಯುವ ಆಟಗಾರನನ್ನು ಹುಡುಕುವಂತಹದ್ದಾಗಿದೆ. ಧೋನಿ ಈಗಾಗಲೇ ದೇಶಕ್ಕಾಗಿ ತುಂಬಾ ಸಾಧನೆ ಮಾಡಿ ತೋರಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್‌ ದೇವ್‌ (ಸಂಗ್ರಹ ಚಿತ್ರ)

ಧೋನಿ ಅವರ ಅಭಿಮಾನಿಯಾಗಿ ಟಿ-20 ವಿಶ್ವಕಪ್ ಆಡುವುದನ್ನು ನೋಡಲು ನಾನು ಬಯಸುತ್ತೇನೆ. ಆದರೆ, ಆಟಗಾರರ ಹಿಡಿತವೆಲ್ಲವೂ ನಿರ್ವಹಣಾಗಾರರ ಮೇಲೆ ಅವಲಂಬಿತವಾಗಿರುತ್ತದೆ. ಓರ್ವ ಕ್ರಿಕೆಟಿಗನಾಗಿ ನಾನು ಇದನ್ನು ಬಲ್ಲೆ. ಕಳೆದ ಒಂದು ವರ್ಷದಿಂದ ಕ್ರಿಕೆಟ್​ ಅಂಗಳದಲ್ಲಿ ಅವರು ಬ್ಯಾಟ್​ ಹಿಡಿದಿದ್ದು ನಾವು ನೋಡಿಯೇ ಇಲ್ಲ. ವಿಭಿನ್ನ ಆಟಗಾರರಿಗೆ ವಿಭಿನ್ನ ನಿಯಮಗಳು ಇರಬಾರದು ಎಂದು ಇತ್ತೀಚೆಗೆ ಧೋನಿಗೆ ಸಿಕ್ಕ ಅಲ್ಪ ಅವಕಾಶಗಳ ಕುರಿತು ಕಳವಳ ಕೂಡ ವ್ಯಕ್ತಪಡಿಸಿದರು.

ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್‌ ದೇವ್‌ (ಸಂಗ್ರಹ ಚಿತ್ರ)

ಇದನ್ನೂ ಓದಿ : ವಾವ್ಹ್​ ಧೋನಿ: ಪಿಚ್​​​ ರೋಲರ್​ ಡ್ರೈವ್​ ಮಾಡಿದ್ರು ಮಾಹಿ- ವಿಡಿಯೋ ವೈರಲ್​!

ಮಹೇಂದ್ರ ಸಿಂಗ್ ಧೋನಿ ಈಗ ಕ್ರಿಕೆಟ್​ನ ಕೊನೆಯ ಕಾಲಘಟ್ಟದಲ್ಲಿದ್ದಾರೆ. ಅವರು ಆಡಬೇಕು. ಅವರ ಆಟದ ಶೈಲಿಯನ್ನು ನಾನು ನೋಡಬೇಕು. ಇದು ನನ್ನ ವೈಯಕ್ತಿಕ ಹೇಳಿಕೆ. ಆದರೆ, ಮುಂದಿನ ಪೀಳಿಗೆಯನ್ನು ಹುಡುಕುವುದು ಐಪಿಎಲ್​ನ ಉದ್ದೇಶ ಎನ್ನುವುದನ್ನು ಇಲ್ಲಿ ಮರೆಯುಂತಿಲ್ಲ ಎಂದರು.

ABOUT THE AUTHOR

...view details