ಕರ್ನಾಟಕ

karnataka

ETV Bharat / sports

ಜುಲೈ 14ಕ್ಕೆ ವಿಶ್ವಕಪ್​ ನನ್ನ ಕೈಯಲ್ಲಿರಬೇಕು.. ಇದೇ ನನ್ನ ಗುರಿ ಎಂದ ಈ ಯುವ ಆಟಗಾರ! - undefined

ನನಗೆ ಚಾಲೇಂಜ್​ ಎಂದರೆ ತುಂಬಾ ಇಷ್ಟ, ಯಾವುದೇ ಒತ್ತಡವಿಲ್ಲದೇ ಆಟವಾಡಲು ಬಯಸುತ್ತೇನೆ ಎಂದಿರುವ ಹಾರ್ದಿಕ್​ ಪಾಂಡ್ಯ ಜುಲೈ 14ರಂದು ವಿಶ್ವಕಪ್​ ನನ್ನ ಕೈಯಲ್ಲಿರಬೇಕು. ಇದೇ ನನ್ನ ಯೋಚನೆ ಮತ್ತು ಗುರಿ ಎಂದಿದ್ದಾರೆ.

ಜುಲೈ 14ಕ್ಕೆ ವಿಶ್ವಕಪ್​ ನನ್ನ ಕೈಯಲ್ಲಿರಬೇಕು

By

Published : Jun 13, 2019, 1:32 PM IST

ಇಂಗ್ಲೆಂಡ್​: 2019ರ ವಿಶ್ವಕಪ್​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಆಲ್​ರೌಂಡ್​ ಆಟಗಾರ ಹಾರ್ದಿಕ್​ ಪಾಂಡ್ಯ ಟೂರ್ನಿಯ ಬಗ್ಗೆ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.

ಹಾರ್ದಿಕ್​ ಪಾಂಡ್ಯ ವಿಶ್ವಕಪ್​ ಟೂರ್ನಿ ಕುರಿತು ತಮ್ಮ ಯೋಚನೆ ಏನು ಎಂದು ಹಂಚಿಕೊಂಡಿರುವ ವಿಡಿಯೋವನ್ನ ಐಸಿಸಿ ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ಮಾತನಾಡಿರುವ ಹಾರ್ದಿಕ್​ ಟೀಂ ಇಂಡಿಯಾಗೆ ಆಡುವುದು ನನ್ನ ಕನಸಾಗಿತ್ತು. ಅದರಲ್ಲೂ ವಿಶ್ವಕಪ್​ ಟೂರ್ನಿಗೆ ಆಯ್ಕೆಯಾಗಿದ್ದು, ನನಗೆ ಅತೀವ ಆನಂದ ಉಂಟುಮಾಡಿದೆ ಎಂದು ಹಾರ್ದಿಕ್​ ಹರ್ಷ ವ್ಯಕ್ತಪಡಿಸಿದ್ದಾರೆ.

2011ರ ವಿಶ್ವಕಪ್​ ಗೆದ್ದಾಗ ಗೆಳೆಯರೊಂದಿಗೆ ನಾನು ಕೂಡ ರಸ್ತೆಯಲ್ಲೇ ಸಂಭ್ರಮಾಚರಣೆ ನಡೆಸಿದ್ದೇ. ಇಂದು ನಾನು ಕೂಡ ವಿಶ್ವಕಪ್​ ಆಡುವ ತಂಡದಲ್ಲಿ ಸ್ಥಾನ ಪಡೆದಿದ್ದೇನೆ. ಅಂದು ಕಪ್​ ಗೆಲ್ಲಿಸಿಕೊಟ್ಟ ಧೋನಿ ಅವರ ಹೆಗಲಮೇಲೆ ಕೈ ಹಾಕಿಕೊಂಡು ಮಾತನಾಡುತ್ತಿದ್ದೇನೆ ಇದಕ್ಕಿಂತ ಇನ್ನೇನು ಬೇಕು ಹೇಳಿ ಎಂದಿದ್ದಾರೆ.

ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಬೇಕು ಎಂದು ಕಳೆದ 3 ವರ್ಷಗಳಿಂದ ಸಾಕಷ್ಟು ಶ್ರಮ ವಹಿಸಿದ್ದೇನೆ. ಅದರಂತೆ ಇಂದು ತಂಡದಲ್ಲಿ ಸ್ಥಾನ ಪಡೆದಿದ್ದೇನೆ. ನನಗೆ ಚಾಲೆಂಜ್​ ಎಂದರೆ ತುಂಬಾ ಇಷ್ಟ, ಯಾವುದೇ ಒತ್ತಡವಿಲ್ಲದೇ ಆಟವಾಡಲು ಬಯಸುತ್ತೇನೆ. ಜುಲೈ 14ರಂದು ವಿಶ್ವಕಪ್​ ನನ್ನ ಕೈಯಲ್ಲಿರಬೇಕು, ಇದೇ ನನ್ನ ಯೋಚನೆ ಮತ್ತು ಗುರಿ ಎಂದಿದ್ದಾರೆ.

ಪಾಕ್​ ವಿರುದ್ಧ ನಡೆದ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಪಾಂಡ್ಯ ರನ್​ ಔಟ್​ ಆಗಿದ್ದಕ್ಕೆ ಜಡೇಜಾ ವಿರುದ್ಧ ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾತನಾಡಿರುವ ಪಾಂಡ್ಯ, ನಾನು ಜಡೇಜಾ ಬಳಿ ಕ್ಷಮೆ ಕೇಳಿದ್ದೇನೆ. ಆ ಸಮಯದಲ್ಲಿ ನಾನು ತುಂಬಾ ಹಾಗೆ ರಿಯಾಕ್ಟ್​ ಮಾಡಿದ್ದು ತಪ್ಪು ಎಂದಿದ್ದಾರೆ. ಜಡ್ಡು ಕೂಡ ಹಾರ್ದಿಕ್​ ಬಗ್ಗೆ ಮಾತನಾಡಿದ್ದು, ಹಾರ್ದಿಕ್​ ಯಾವುದೇ ಒತ್ತಡವಿಲ್ಲದೇ ಬ್ಯಾಟ್​ ಬೀಸುತ್ತಾರೆ. ಅವರೊಬ್ಬ ರಾಕ್​ಸ್ಟಾರ್​ ಎಂದಿದ್ದಾರೆ.

ಸದ್ಯ ಪ್ರಸಕ್ತ ಟೂರ್ನಿಯಲ್ಲಿ ಹಾರ್ದಿಕ್​ ಪಾಂಡ್ಯ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 7 ಎಸೆತಗಳಲ್ಲಿ ಅಜೇಯ 15 ರನ್​ ಗಳಿಸಿದ್ರೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ 4 ಬೌಡರಿ ಮತ್ತು 3 ಸಿಕ್ಸರ್​ ಸಹಿತ 48 ರನ್​ ಸಿಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details