ಕರ್ನಾಟಕ

karnataka

ETV Bharat / sports

ಪಾಕ್​ ಕ್ರಿಕೆಟ್​ನ ಹೈ ಪರ್ಫಾರ್ಮೆನ್ಸ್ ಕೋಚಿಂಗ್​ ಮುಖ್ಯಸ್ಥ ಸ್ಥಾನದಿಂದ ಗ್ರಾಂಟ್ ಬ್ರಾಡ್‌ಬರ್ನ್ ರಾಜೀನಾಮೆ - ಪಾಕ್​ ಕ್ರಿಕೆಟ್ ಬೋರ್ಡ್​

ಪಿಸಿಬಿ ಅಧ್ಯಕ್ಷರಾಗಿ ರಮೀಝ ರಾಜಾ ಆಯ್ಕೆಯಾಗುತ್ತಿದ್ದಂತೆ ಪಾಕ್​​ ಕ್ರಿಕೆಟ್​​ನಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ಅನೇಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಘೋಷಣೆ ಮಾಡ್ತಿದ್ದಾರೆ..

Grant Bradburn
Grant Bradburn

By

Published : Oct 15, 2021, 4:37 PM IST

ಲಾಹೋರ್ ​(ಪಾಕಿಸ್ತಾನ) :2018ರಿಂದಲೂ ಪಾಕಿಸ್ತಾನ ಕ್ರಿಕೆಟ್​ ತಂಡದ ಫೀಲ್ಡಿಂಗ್​ ಕೋಚ್​ ಆಗಿ ಸೇವೆ ಸಲ್ಲಿಸಿದ್ದ ನ್ಯೂಜಿಲ್ಯಾಂಡ್​​​ನ ಮಾಜಿ ಸ್ಪಿನ್ನರ್​​​ ತದ ನಂತರ ಹೈ ಪರ್ಫಾರ್ಮೆನ್ಸ್ ಕೋಚಿಂಗ್​ ಹುದ್ದೆ ಅಲಂಕಾರ ಮಾಡಿದ್ದರು. ಆದರೆ, ಇದೀಗ ಅವಧಿ ಮಕ್ತಾಯಗೊಂಡಿರುವ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹೊಸ ಅವಕಾಶ ಪಡೆದುಕೊಳ್ಳುವ ಉದ್ದೇಶದಿಂದ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಪಾಕ್​ ತಂಡದೊಂದಿಗೆ ಮೂರು ವರ್ಷಗಳ ಅವಧಿ ಕೊನೆಗೊಳಿಸಿದ್ದಾಗಿ ಪಿಸಿಬಿ ಕೂಡ ಪ್ರಕಟಣೆ ಹೊರಡಿಸಿದೆ.

ಪಾಕ್​ ತಂಡದೊಂದಿಗೆ ಸೇವೆ ಸಲ್ಲಿಸಿರುವುದು, ಅನೇಕ ಸವಾಲು ಹಾಗೂ ತಂಡ ಮುನ್ನಡೆಸಲು ಅವಕಾಶ ಪಡೆದುಕೊಂಡಿರುವುದಕ್ಕಾಗಿ ನಾನು ಪಿಸಿಬಿಗೆ ಕೃತಜ್ಞತೆ ಹೇಳುತ್ತೇನೆ ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿರಿ:ಫೋನ್​ನಲ್ಲಿ ಬ್ಯುಸಿ: ಮಗುವಿನೊಂದಿಗೆ ಮ್ಯಾನ್​​ಹೋಲ್​​ನಲ್ಲಿ ಬಿದ್ದ ಮಹಿಳೆ!

ಪಾಕ್​​ನ ​ಪಿಸಿಬಿ ಮುಖ್ಯಸ್ಥರಾಗಿ ರಮೀಝ ರಾಜಾ ಅಧಿಕಾರ ವಹಿಸಿಕೊಂಡ ನಂತರ ಇದೀಗ ಐದನೇ ವ್ಯಕ್ತಿ ರಾಜೀನಾಮೆ ನೀಡುತ್ತಿದ್ದಾರೆ. ಈಗಾಗಲೇ ಪಾಕ್​​ ತಂಡದ ಮುಖ್ಯ ಕೋಚ್​​​ ಮಿಸ್ಬಾ ಉಲ್​ ಹಕ್​​, ಬೌಲಿಂಗ್ ತರಬೇತುದಾರ ವಕಾರ್ ಯೂನಿಸ್​ ರಾಜೀನಾಮೆ ನೀಡಿದ್ದಾರೆ. ಇದಾದ ಬಳಿಕ ವಾಸೀಂ ಖಾನ್​​ ಹಾಗೂ ಮಾರ್ಕೆಟಿಂಗ್​​ ಮುಖ್ಯಸ್ಥ ಬಾಬರ್​ ಹಮೀದ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

1990 ರಿಂದ 2001ರವರೆಗೆ ನ್ಯೂಜಿಲ್ಯಾಂಡ್​ ಪರವಾಗಿ 7 ಟೆಸ್ಟ್​​​ 11 ಏಕದಿನ ಪಂದ್ಯಗಳನ್ನಾಡಿದ್ದ ಆಫ್​​ ಸ್ಪಿನ್ನರ್​​ ಗ್ರಾಂಟ್​​, ನ್ಯೂಜಿಲ್ಯಾಂಡ್​​ A ಮತ್ತು ಅಂಡರ್​-19 ತಂಡದ ತರಬೇತುದಾರರಾಗಿದ್ದರು.

ABOUT THE AUTHOR

...view details