ಲಂಡನ್:ವಿಶ್ವಕಪ್ನ ನ್ಯೂಜಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಶನಿವಾರ ನಡೆದ ಪಂದ್ಯ ರೋಚಕ ಅಂತ್ಯ ಕಂಡಿದ್ದರೆ ಅತ್ತ ಇದೇ ಪಂದ್ಯದ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್ ಪರಿಣಾಮ ವಿಮಾನವೊಂದು ತಡವಾಗಿ ಹೊರಟ ಘಟನೆ ನಡೆದಿದೆ.
ನ್ಯೂಜಿಲ್ಯಾಂಡ್ನ ಸಂಸದ ಕೈರನ್ ಮೆಕಲ್ಟಿ ಟ್ವೀಟ್ ಮಾಡಿದ್ದು, ಪಂದ್ಯದ ರೋಚಕತೆಯಿಂದ ವಿಮಾನ ನಿಗದಿತ ಸಮಯಕ್ಕಿಂತ ಕೊಂಚ ವಿಳಂಬವಾಗಿ ಹೊರಟಿದೆ ಎಂದಿದ್ದಾರೆ.
ಏರ್ ನ್ಯೂಜಿಲ್ಯಾಂಡ್ ಫ್ಲೈಟ್ ಸಂಪೂರ್ಣ ತುಂಬಿತ್ತು. ಇನ್ನೇನು ವಿಮಾನ ಟೇಕಾಫ್ ಆಗಬೇಕು ಎನ್ನುವ ವೇಳೆಗೆ ಪಂದ್ಯ ರೋಚಕ ಘಟ್ಟ ತಲುಪಿತ್ತು. 12 ಎಸೆತದಲ್ಲಿ ವಿಂಡೀಸ್ಗೆ 8 ರನ್ ಅವಶ್ಯಕತೆ ಇತ್ತು. ಆದರೆ ಇದ್ದಿದ್ದು ಒಂದು ವಿಕೆಟ್ ಮಾತ್ರ. ಎಲ್ಲರೂ ತದೇಕಚಿತ್ತದಿಂದ ಟಿವಿಯತ್ತ ಕಣ್ಣು ನೆಟ್ಟಿದ್ದರು. ಪ್ರಯಾಣಿಕರೆಲ್ಲರೂ ವಿಮಾನ ಟೇಕಾಫ್ ಮಾಡದಂತೆ ಮನವಿ ಮಾಡಿದರು. ಕೊನೆಯ ವಿಕೆಟ್ ಉರುಳಿತ್ತಿದ್ದಂತೆ ಎಲ್ಲರೂ ಜೋರಾಗಿ ಕಿರುಚಾಡಿ ನಮ್ಮ ತಂಡ ಗೆಲುವನ್ನು ಸಂಭ್ರಮಿಸಿದೆವು. ಕಿವೀಸ್ ಗೆದ್ದ ಬಳಿಕವೇ ವಿಮಾನ ಹೊರಟಿತು ಎಂದು ಕೈರನ್ ಟ್ವೀಟ್ ಮಾಡಿದ್ದಾರೆ.
ಬ್ರಾತ್ವೇಟ್ ಚೊಚ್ಚಲ ಶತಕ ವ್ಯರ್ಥ... ಕಿವೀಸ್ ವಿರುದ್ಧ ವಿರೋಚಿತ ಸೋಲುಂಡ ಕೆರಿಬಿಯನ್!
ನ್ಯೂಜಿಲ್ಯಾಂಡ್ ತಂಡ ರೋಚಕ ಹಣಾಹಣಿಯಲ್ಲಿ ವಿಂಡೀಸ್ ತಂಡವನ್ನು 5 ರನ್ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.