ಲಂಡನ್ :ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ವಿಶ್ವಕಪ್ ಫೈನಲ್ ಮ್ಯಾಚ್ನ ಮೊದಲ ಇನ್ನಿಂಗ್ಸ್ ಮುಗಿದಿದ್ದು, ಇಂಗ್ಲೆಂಡ್‌ಗೆ ಕಿವೀಸ್ 241 ರನ್ ಸರಳ ಟಾರ್ಗೆಟ್ ನೀಡಿದೆ.
ಇದಕ್ಕೂ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಆರಂಭಿಕರಾಗಿ ಅಂಗಳಕ್ಕೆ ಬಂದ ಮಾರ್ಟಿನ್ ಗಪ್ಟಿಲ್ ತಂಡದ ಮೊತ್ತ ಕೇವಲ 29 ರನ್ ತಲುಪಿದಾಗ ವಿಕೆಟ್ ಒಪ್ಪಿಸಿದ್ರು.
ಈ ವೇಳೆ ಹೆನ್ರಿ ನಿಕೋಲ್ಸ್ ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ನಷ್ಟವಾಗದಂತೆ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಇನ್ನಿಂಗ್ಸ್ ಕಟ್ಟುವತ್ತ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೇನ್ ರನ್ ಗಳಿಸಲು ಪರದಾಡಿದ್ರು. ಅವರು ಮೊದಲ 22 ಎಸೆತಗಳಲ್ಲಿ ಎರಡು ರನ್ ಮಾತ್ರ ದಾಖಲಿಸಿದ್ರು. ಅಂತಿಮವಾಗಿ 53 ಎಸೆತಗಳಲ್ಲಿ 30 ರನ್ ಗಳಿಸಿ ಲಿಯಾಮ್ ಪ್ಲಂಕೆಟ್ ಎಸೆತದಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿದ ಕೇನ್ ಪೆವಿಲಿಯನ್ ಸೇರಿದರು.
ಆರಂಭಿಕ ಒತ್ತಡದಿಂದ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದ ಹೆನ್ರಿ ನಿಕೋಲ್ಸ್ ಅರ್ಧ ಶತಕ ಪೂರೈಸಿದರು. ಅಂತಿಮವಾಗಿ 77 ಎಸೆತಗಳಲ್ಲಿ 55 ರನ್ ಗಳಿಸಿ ಲಿಯಾಮ್ ಪ್ಲಂಕೆಟ್ ಎಸೆತದಲ್ಲಿ ಬೌಲ್ಡ್ ಆದರು.