ಲಂಡನ್:ಇಲ್ಲಿನ ಚಸ್ಟರ್ ಲೆ ಸ್ಟ್ರೀಟ್ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಇಂದು ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಣಸಾಟ ನಡೆಸಲಿವೆ.
ಉಭಯ ತಂಡಗಳಿಗೂ ಇದು ಲೀಗ್ ಹಂತದ ಅಂತಿಮ ಪಂದ್ಯವಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಸೆಮಿಫೈನಲ್ ಹಂತ ತಲುಪಲು ಇಂದಿನ ಪಂದ್ಯವನ್ನ ಗೆಲ್ಲಲೇ ಬೇಕಾದ ಒತ್ತಡದಲ್ಲಿವೆ.
ಈಗಾಗಲೆ ಭಾರತ ತಂಡದ ವಿರುದ್ಧ 31 ರನ್ಗಳ ಜಯ ದಾಖಲಿಸಿರುವ ಇಂಗ್ಲೆಂಡ್, ಇಂದಿನ ಪಂದ್ಯದಲ್ಲಿ ವಿಲಿಯಮ್ಸನ್ ಪಡೆಯನ್ನ ಕಟ್ಟಿಹಾಕುವ ಹುಮ್ಮಸ್ಸಿನಲ್ಲಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ಜಾನಿ ಬೈರ್ಸ್ಟೋವ್, ಜಾಸನ್ ರಾಯ್, ಜೋ ರೂಟ್ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇತ್ತ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿರೋದು ಆಂಗ್ಲರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಮತ್ತೊಂದೆಡೆ ಸತತ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕಿವೀಸ್, 2 ಪಂದ್ಯಗಳಲ್ಲಿ ಸೋಲು ಕಂಡು ಸೆಮೀಸ್ ಹಂತ ತಲುಪುವಲ್ಲಿ ವಿಫಲವಾಗಿದೆ.