ಕರ್ನಾಟಕ

karnataka

By

Published : Jul 11, 2019, 5:00 AM IST

ETV Bharat / sports

ರೋಚಕ ಘಟ್ಟದಲ್ಲಿ ಧೋನಿ ರನೌಟ್​... ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತಾ ಅಂಪೈರ್​ ನಿರ್ಲಕ್ಷ್ಯ?

ನಿನ್ನೆ ನಡೆದ ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಎಂ.ಎಸ್​ ಧೋನಿಯ ರನ್​ಔಟ್​ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಂಪೈರ್ ನಿರ್ಲಕ್ಷ್ಯದಿಂದ ಧೋನಿ ಬಲಿಯಾಗಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತಾ ಅಪೈರ್​ ನಿರ್ಲಕ್ಷ್ಯ?

ಮ್ಯಾಂಚೆಸ್ಟರ್​: ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಭಾರತ ತಂಡ ಸೆಮಿಫೈನಲ್​ನಲ್ಲಿ ಕಿವೀಸ್​ ಬೌಲರ್​ಗಳ ಮಾರಕ ದಾಳಿಗೆ 18 ರನ್​ಗಳಿಂದ ಸೋಲು ಕಂಡಿದೆ. ಆದ್ರೆ ಈ ಪಂದ್ಯದ ರೋಚಕ ಘಟ್ಟದಲ್ಲಿ ಧೋನಿ ರನ್​ ಔಟ್​ಗೆ ಬಲಿಯಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ನಿಯಮದ ಪ್ರಕಾರ ಅಂತಿಮ 10 ಓವರ್​ಗಳ ಬ್ಯಾಟಿಂಗ್​ ಪವರ್​ ಪ್ಲೇನಲ್ಲಿ 30 ಯಾರ್ಡ್​ ಸರ್ಕಲ್​ನಿಂದ ಹೊರಗೆ ಕೇವಲ 5 ಜನ ಫೀಲ್ಡರ್​ಗಳಿರಬೇಕು. ಆದ್ರೆ ಧೋನಿ ರನ್​ಔಟ್​ ಆಗುವ ಎಸೆತಕ್ಕೂ ಮೊದಲು ಗ್ರಾಫಿಕ್ಸ್​ನಲ್ಲಿ ತೋರಿಸುವಂತೆ 6 ಜನ ಕ್ಷೇತ್ರ ರಕ್ಷಕರು 30 ಯಾರ್ಡ್​ನಿಂದ ಹೊರಗೆ ಫೀಲ್ಡಿಂಗ್​ ಮಾಡುತ್ತಿದ್ದರು.

ಒಂದು ವೇಳೆ ನಿಯಮಕ್ಕಿಂತ ಹೆಚ್ಚಿನ ಫೀಲ್ಡರ್​ಗಳು 30 ಯಾರ್ಡ್​ ಸರ್ಕಲ್​ನಿಂದ ಹೊರಗಿದ್ದರೆ ನೋ ಬಾಲ್​ ನೀಡಬೇಕು. ಆದ್ರೆ ಅಂಫೈರ್​ ನಿರ್ಲಕ್ಷ್ಯದಿಂದ ನೋಬಾಲ್ ಇರುವುದು ಗೊತ್ತಾಗಿಲ್ಲ. ಇದರಿಂದ ಧೋನಿ ರನ್​ಔಟ್​ಗೆ ಬಲಿಯಾಗಿದ್ದಾರೆ ಎಂದು ಟ್ವಿಟ್ಟರ್​ನಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details