ಕರ್ನಾಟಕ

karnataka

ETV Bharat / sports

ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಕಿವೀಸ್ ಪರಾಕ್ರಮ, ಮೊದಲ ಪಂದ್ಯದಲ್ಲೇ ಲಂಕಾ ದಹನ!

ಸೊಫಿಯಾ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್​ನ ಮಾರ್ಟಿನ್​ ಗಪ್ಟಿಲ್​ ಹಾಗೂ ಮನ್ರೊ ಹೆಬ್ಬಂಡೆಯಂತೆ ನಿಂತು ತಂಡದ ಗೆಲುವಿಗೆ ಕಾರಣರಾದರು.

ಕಿವೀಸ್

By

Published : Jun 1, 2019, 8:11 PM IST

ಕಾರ್ಡಿಫ್​:ವಿಶ್ವಕಪ್​ ಕ್ರಿಕೆಟ್‌ನ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 137 ರನ್​ಗಳ ಗುರಿಯನ್ನು ಸುಲಭವಾಗಿ ತಲುಪುವ ಮೂಲಕ ನ್ಯೂಜಿಲೆಂಡ್​ ಗೆಲುವಿನ ಕೇಕೆ ಹಾಕಿದೆ.

ಸೊಫಿಯಾ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್​ನ ಮಾರ್ಟಿನ್​ ಗಪ್ಟಿಲ್​ ಹಾಗೂ ಮನ್ರೊ ಹೆಬ್ಬಂಡೆಯಂತೆ ನಿಂತು ತಂಡದ ಗೆಲುವಿಗೆ ಕಾರಣರಾದರು. ಗಪ್ಟಿಲ್​ 2 ಸಿಕ್ಸರ್​ ಹಾಗೂ 8 ಬೌಂಡರಿ​ ಬಾರಿಸಿ 73 ರನ್​ ಗಳಿಸಿದರೆ, ಮನ್ರೊ ಒಂದು ಸಿಕ್ಸರ್‌ ಹಾಗೂ 6 ಬೌಂಡರಿ ಬಾರಿಸಿ 58 ರನ್ ಕಲೆ ಹಾಕಿದರು. ಇಬ್ಬರ ಅಮೋಘ ಜೊತೆಯಾಟದಿಂದ 16.1 ಓವರ್​ನಲ್ಲಿಯೇ ಕಿವೀಸ್​ ಪಡೆ 10 ವಿಕೆಟ್​ಗಳ ಜಯ ಸಾಧಿಸಿತು.

ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲೆಂಡ್​ಗೆ, ಬೌಲಿಂಗ್​ನಲ್ಲಿ ಲೂಕಿ ಫರ್ಗ್ಯುಸನ್ ಹಾಗೂ ಮ್ಯಾಟ್​ ಹೆನ್ರಿ, ಲಂಕಾಪಡೆಯ ತಲಾ ಮೂರು ವಿಕೆಟ್​ಗಳನ್ನು ಕಿತ್ತು ಬಲ ತುಂಬಿದರು. ಟ್ರೆಂಟ್​ ಬೌಲ್ಟ್​, ಕಾಲಿನ್​ ಡಿ ಗ್ರ್ಯಾಂಡ್​ಹೋಮ್​, ಜೇಮ್ಸ್​ ನಿಶಾಮ್​, ಮಿಷಲ್​ ಸ್ಯಾಂಟ್ನರ್​ ತಲಾ ಒಂದು ವಿಕೆಟ್​ ಕಬಳಿಸಿ ಲಂಕಾ ತಂಡಕ್ಕೆ ಆಘಾತ ನೀಡಿದರು.

ಲಂಕಾ ನಾಯಕ ದಿಮುತ ಕರುಣಾರತ್ನೆ 84 ಬಾಲ್‌ಗಳಿಗೆ 52 ರನ್ ​ಗಳಿಸಿದ್ದು ಬಿಟ್ಟರೆ, ಮತ್ಯಾರೂ ಹೇಳಿಕೊಳ್ಳುವಂತಹ ಬ್ಯಾಟಿಂಗ್​ ಮಾಡಲಿಲ್ಲ. ಕುಶಾಲ್​ ಪರೇರ ಹಾಗೂ ತಿಸಾರ ಪೆರೇರಾ ಕ್ರಮವಾಗಿ 29 , 27 ರನ್​ ಗಳಿಸಿದರು. ವಿಶೇಷ ಅಂದ್ರೆ, 8 ಮಂದಿ ಲಂಕಾ ಬ್ಯಾಟ್ಸ್​ಮನ್​ಗಳು ಒಂದಂಕಿ ಗಳಿಸಿ ವಾಪಸ್ಸಾಗುವಂತಾಯ್ತು. 29.2 ಓವರ್​ಗಳಲ್ಲಿ ಲಂಕೆ ಕೇವಲ 136 ರನ್ ಗಳಿಸಿ ಆಲ್​ಔಟ್​ ಆಯ್ತು.

For All Latest Updates

TAGGED:

ABOUT THE AUTHOR

...view details