ಕಾರ್ಡಿಫ್(ಇಂಗ್ಲೆಂಡ್): ನಿನ್ನೆ ನಡೆದ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಬ್ಯಾಟಿಂಗ್ ಮಾಡುವಾಗ ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.
ಬಾಂಗ್ಲಾ ತಂಡದ ಆಟಗಾರ ಶಬ್ಬೀರ್ ರೆಹಮಾನ್ 40ನೇ ಓವರ್ನ ಮೊದಲ ಎಸೆತ ಎಸೆಯಲು ಬಂದಾಗ ಧೋನಿ ಅವರನ್ನು ತಡೆದು ನಿಲ್ಲಿಸಿದ್ರು. ಸ್ಕ್ವೇರ್ ಲೆಗ್ ಫೀಲ್ಡರ್ನ್ನು ತನ್ನ ಎಡಗಡೆಗೆ ಬಂದು ನಿಲ್ಲಲು ಹೇಳುವಂತೆ ಧೋನಿ, ಶಬ್ಬೀರ್ಗೆ ಸೂಚಿಸಿದ್ರು. ಧೋನಿ ಹೇಳುತ್ತಿದ್ದಂತೆ ಮರುಯೋಚನೆ ಮಾಡದ ಶಬ್ಬೀರ್ ತನ್ನ ತಂಡದ ನಾಯಕ ಮೊರ್ತಾಜಾರನ್ನು ಕೇಳದೆ, ಸ್ಕ್ವೇರ್ ಲೆಗ್ನಲ್ಲಿರುವ ಫೀಲ್ಡರ್ನ್ನ ಧೋನಿ ಸೂಚಿಸಿದ ಜಾಗದಲ್ಲಿ ನಿಲ್ಲುವಂತೆ ಹೇಳಿದ್ರು.