ಕರ್ನಾಟಕ

karnataka

ETV Bharat / sports

ಜೀವನಕ್ಕೆ ಕ್ರಿಕೆಟ್​ ಅತಿದೊಡ್ಡ ಟೀಚರ್... ಮಕ್ಕಳಿಗೆ​ ವಿರಾಟ್ ಕ್ರಿಕೆಟ್ ಪಾಠ

ಟೀಂ ಇಂಡಿಯಾ ಆಟಗಾರರಾದ ವಿರಾಟ್​ ಕೊಹ್ಲಿ, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಮತ್ತು ರಿಷಭ್ ಪಂತ್ ಶಾಲಾ ಮಕ್ಕಳಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟಿದ್ದಾರೆ.

ಮಕ್ಕಳಿಗೆ​ ಕ್ರಿಕೆಟ್ ಪಾಠ ಹೇಳಿಕೊಟ್ಟ ವಿರಾಟ್

By

Published : Jun 21, 2019, 7:51 PM IST

ಸೌತಾಂಪ್ಟನ್(ಇಂಗ್ಲೆಂಡ್): 2019ರ ವಿಶ್ವಕಪ್​ ಕ್ರಿಕೆಟ್​ ಟೂರ್ನಿಗಾಗಿ ಇಂಗ್ಲೆಂಡ್​ ಪ್ರವಾಸದಲ್ಲಿರುವ ವಿರಾಟ್​ ಕೊಹ್ಲಿ, ಸೌತಾಂಪ್ಟನ್​ನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್​ ಆಡಿ ಎಂಜಾಯ್​ ಮಾಡಿದ್ದಾರೆ.

ಐಸಿಸಿ, ಟೀಂ ಇಂಡಿಯಾ ಆಟಗಾರರಾದ ವಿರಾಟ್​ ಕೊಹ್ಲಿ, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಮತ್ತು ರಿಷಭ್ ಪಂತ್ ಜೊತೆ ಶಾಲಾ ಮಕ್ಕಳಿಗೆ ಕ್ರಿಕೆಟ್ ಆಡುವ ಅವಕಾಶ ಕಲ್ಪಿಸಲಾಗಿತ್ತು. ಮಕ್ಕಳೊಂದಿಗೆ ಖುಷಿ ಖುಷಿಯಾಗಿ ಆಟವಾಡಿದ ಟೀಂ ಇಂಡಿಯಾ ಆಟಗಾರರು ಅದರ ಜೊತೆಗೆ ಕ್ರಿಕೆಟ್​ ಪಾಠವ್ನನೂ ಹೇಳಿಕೊಟ್ಟಿದ್ದಾರೆ.

ಕ್ರಿಕೆಟ್ ವರ್ಲ್ಡ್​ ಕಪ್​ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ವಿರಾಟ್, 'ಮಕ್ಕಳ ಜೀವನ ಶೈಲಿಯನ್ನ ಬದಲಾಯಿಸುವಲ್ಲಿ ಕ್ರಿಕೆಟ್​ ಬಹುಮುಖ್ಯ ಪಾತ್ರ ವಹಿಸುವುದಲ್ಲದೆ, ಅವರನ್ನ ಹೊಸ ಮನುಷ್ಯರನ್ನಾಗಿ ರೂಪಿಸುತ್ತದೆ. ಕ್ರಿಕೆಟ್​ನಲ್ಲಿ​ ಏಳು ಬೀಳುಗಳನ್ನ ಕಾಣುತ್ತೀರಿ. ಕಷ್ಟದ ಸಮಯದಿಂದ ಹೇಗೆ ಹೊರ ಬರಬೇಕು ಎಂಬುದನ್ನ ಕಲಿಯುತ್ತೀರಿ. ನನ್ನ ಪ್ರಕಾರ ಕ್ರಿಕೆಟ್​ ಜೀವನದ ಹಲವು ಆಯಾಮಕ್ಕೆ ಓರ್ವ ಶಿಕ್ಷಕನಿದ್ದಂತೆ' ಎಂದಿದ್ದಾರೆ.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ವಿರಾಟ್​, 'ಮಕ್ಕಳೊಂದಿಗೆ ಸಮಯ ಕಳೆಯುವುದು ನಿಜಕ್ಕೂ ಸಂತಸ ತಂದಿದೆ. ಅವರ ಬೆಳವಣಿಗೆಗೆ ನಮ್ಮದೊಂದು ಕಾಣಿಕೆ ನೀಡಿದ್ದೇವೆ. ಮಕ್ಕಳು ಏನೇ ಮಾಡಿದ್ರೂ ಪ್ರಾಮಾಣಿಕವಾಗಿ ಬದ್ಧತೆಯಿಂದ ಮಾಡುತ್ತಾರೆ. ಕಲಿಯಲು ತುಂಬಾ ಇದೆ. ಮಕ್ಕಳೊಂದಿಗೆ ಕ್ರಿಕೆಟ್​ ಆಡಿದ ಕ್ಷಣವನ್ನ ಮರೆಯಲು ಸಾಧ್ಯವಿಲ್ಲ' ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details