ಲಂಡನ್: ಕ್ರಿಕೆಟ್ ಕಾಶಿ ಲಂಡನ್ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯಾವಳಿಯು ರೋಚಕ ಘಟ್ಟದತ್ತ ಬಂದು ನಿಂತಿದೆ.
ಜಿದ್ದಾಜಿದ್ದಿನ ಮ್ಯಾಚ್ನಲ್ಲಿ ನ್ಯೂಜಿಲೆಂಡ್ ಇಂಗ್ಲೆಂಡ್ಗೆ 242 ರನ್ಗಳ ಸ್ಪರ್ಧಾತ್ಮ ಗುರಿ ನೀಡಿದೆ. ನ್ಯೂಜಿಲೆಂಡ್ಗೆ ಐತಿಹಾಸಿಕ ಮೊದಲ ಬಾರಿಗೆ ಕಪ್ ಗೆಲ್ಲಬೇಕಾದರೆ 1983ರಲ್ಲಿ ಭಾರತ ತಂಡದ ನಾಯಕ ಕಪಿಲ್ ದೇವ್ ಅವರ ತಂಡ ಪ್ರದರ್ಶಿಸಿದ ಮ್ಯಾಜಿಕ್ ಮರುಕಳಿಸಬೇಕು.ಇದೇ ಮೈದಾನದಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿ ಇತಿಹಾಸ ಬರೆದಿದ್ದ ಕಪಿಲ್ ಬಳಗವು ವಿಂಡೀಸ್ ದಾಳಿಗೆ ಸಿಲುಕಿ 54.2 ಓವರ್ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು.