ಕರ್ನಾಟಕ

karnataka

By

Published : Jun 17, 2019, 2:58 PM IST

ETV Bharat / sports

ವಿಶ್ವಕಪ್​ನಲ್ಲಿ ನಡೆಯುತ್ತಿದೆ ಭಾರತದ ಬಜೆಟ್​ಗಿಂತ ಹೆಚ್ಚು ಮೊತ್ತದ ಬೆಟ್ಟಿಂಗ್! ಲೆಕ್ಕ ಕೇಳಿದ್ರೆ ತಲೆ ತಿರುಗೋದು ನಿಶ್ಚಿತ..

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯದ ವೇಳೆ ದೆಹಲಿ ಒಂದರಲ್ಲೇ 100 ಕೋಟಿಗೂ ಹೆಚ್ಚು ಬೆಟ್ಟಿಂಗ್​ ನಡೆದಿದೆ ಎಂದು ಹೇಳಲಾಗುತ್ತಿದೆ.

ಭಾರತರದ ಬಜೆಟ್​ಗಿಂತ ಹೆಚ್ಚು ಮೊತ್ತದ ಬೆಟ್ಟಿಂಗ್

ನವದೆಹಲಿ:ಬೆಟ್ಟಿಂಗ್​ ಪ್ರಿಯರಿಗೆ ಕ್ರಿಕೆಟ್​ ಅಂದ್ರೆ ಅಚ್ಚಮೆಚ್ಚು. ಅದ್ರಲ್ಲೂ ಐಪಿಲ್​ ಮತ್ತು ವಿಶ್ವಕಪ್​ ಟೂರ್ನಿ ವೇಳೆಯಲ್ಲಿ ಭಾರೀ ಮೊತ್ತದ ಬೆಟ್ಟಿಂಗ್​ ನಡೆಯತ್ತೆ. ಸದ್ಯ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯಲ್ಲಿ ಅಂದಾಜು14 ಲಕ್ಷ ಕೋಟಿ ಬೆಟ್ಟಿಂಗ್​ ನಡೆಯಲಿದೆ ಎಂದು ವಿಶ್ವ ಸಟ್ಟಾ ದಂಧೆ ಮಾರುಕಟ್ಟೆ ಅಂದಾಜು ಹಾಕಿದೆ​.

ಈ ಬೆಟ್ಟಿಂಗ್​ ದಂಧೆ ಭಾರತದಲ್ಲೂ ವ್ಯಾಪಿಸಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಪಂದ್ಯದ ವೇಳೆ ರಾಜಧಾನಿ ದೆಹಲಿಯೊಂದರಲ್ಲೇ 100 ಕೋಟಿ ಮೊತ್ತದಷ್ಟು ಬೆಟ್ಟಿಂಗ್​ ನಡೆದಿದೆ ಎಂದು ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೈದಾನದಿಂದ ಬರುತ್ತೆ ಮಾಹಿತಿ:
ಬೆಟ್ಟಿಂಗ್​ ನಡೆಸುವವರ ಪರವಾಗಿ ಕೆಲವರು ಮೈದಾನದಿಂದಲೇ ಮಾಹಿತಿ ನೀಡುತ್ತಿರುತ್ತಾರೆ. ಟಿವಿಯಲ್ಲಿ ಲೈವ್​ ಬರೋದಕ್ಕಿಂತ 1 ರಿಂದ 2 ನಿಮಿಷ ಮೊದಲೇ ದಂಧೆಕೋರರಿಗೆ ಮಾಹಿತಿ ಸಿಗುತ್ತಿರುತ್ತದೆ. ಈ ಮಾಹಿತಿ ಮೇರೆಗೆ ಪ್ರತೀ ಬಾಲ್​ಗೂ ಬೆಟ್ಟಿಂಗ್​ ನಡೆಸುತ್ತಿರುತ್ತಾರೆ.

ಬೆಟ್ಟಿಂಗ್​ ದಂಧೆಗೆ ಬಳಕೆಯಾಗುತ್ತೆ ಟಿಲಿಗ್ರಾಂ ಆ್ಯಪ್:
ದಂಧೆಕೋರರು ಟೆಲಿಗ್ರಾಂ ಆ್ಯಪ್​ ಬಳಸಿ ಒಂದು ಗ್ರೂಪ್​ ಕ್ರಿಯೇಟ್​ ಮಾಡುತ್ತಾರೆ. ಈ ಆ್ಯಪ್​ನಲ್ಲಿ 2 ಲಕ್ಷದ ವರೆಗೆ ಸದಸ್ಯರನ್ನ ಸೇರಿಸುವ ಅವಕಾಶವಿದೆ. ಹೀಗಾಗಿ ವಾಟ್ಸ್​ ಆ್ಯಪ್ ಬದಲಿಗೆ ಟೆಲಿಗ್ರಾಂ ಆ್ಯಪ್​ ಬಳಸಿ ಬೆಟ್ಟಿಂಗ್​ ದಂಧೆ ನಡೆಸುತ್ತಿದ್ದಾರೆ. ವಾಟ್ಸ್​ ಆ್ಯಪ್​ನಲ್ಲಿ ಕೇವಲ 256 ಸದಸ್ಯರನ್ನ ಮಾತ್ರ ಗ್ರೂಪ್​ಗೆ ಸೇರಿಸ ಬಹುದು. ಆದ್ರೆ ಟೆಲಿಗ್ರಾಂನಲ್ಲಿ ಇಂತಹ ಅಡೆತಡೆ ಇಲ್ಲ.

ಮ್ಯಾಚ್​ ಆರಂಭಕ್ಕೂ ಮುನ್ನ ಕ್ರಿಯೇಟ್​ ಆಗುತ್ತೆ ಈ ಗ್ರೂಪ್:
ಪ್ರತೀ ಪಂದ್ಯ ಪ್ರಾರಂಭಕ್ಕೂ ಮೊದಲು ಟೆಲಿಗ್ರಾಂ ಆ್ಯಪ್​ನಲ್ಲಿ ಒಂದು ಗ್ರೂಪ್​ ಮಾಡಲಾಗುತ್ತದೆ. ಆ ಗ್ರೂಪ್​ಗೆ ಬೆಟ್ಟಿಂಗ್​ ಆಡುವವರನ್ನ ಸೇರಿಸಿ ಎಷ್ಟೆಷ್ಟು ಬೆಟ್ಟಿಂಗ್ ಕಟ್ಟಲಾಗುತ್ತದೆ ಎಂದು ತೀರ್ಮಾನ ಮಾಡಲಾಗುತ್ತದೆ. ಪ್ರತಿಯೊಂದು ಗ್ರೂಪ್​ನಲ್ಲಿ 2 ಸಾವಿವ ಮಂದಿ ಸದಸ್ಯರಿರುತ್ತಾರೆ.

For All Latest Updates

TAGGED:

ABOUT THE AUTHOR

...view details