ದುಬೈ: ಜಂಟಲ್‌ಮನ್ ಕ್ರೀಡೆ ಕ್ರಿಕೆಟ್ ಅಂದರೆ ಹಾಗೆಯೇ. ಅಲ್ಲಿ ಸೋಲು-ಗೆಲುವು, ಮನರಂಜನೆಯ ಜೊತೆ-ಜೊತೆಗೆ ಕಳಕಳಿ, ಮಾನವೀಯತೆ, ಕ್ರೀಡಾಸ್ಫೂರ್ತಿಯೂ ಕಂಡುಬರುತ್ತದೆ. ಇಂತಹ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಜಗಮೆಚ್ಚುಗೆಗೆ ಪಾತ್ರವಾಗಿದೆ.
ಕ್ರೀಡಾಸ್ಫೂರ್ತಿ! ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಂಗೆ ಬಂದ ಸ್ಕಾಟ್ಲೆಂಡ್ ತಂಡಕ್ಕೆ ಟೀಂ ಇಂಡಿಯಾ ಟಿಪ್ಸ್ ನಿನ್ನೆ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರ ಡೆಸ್ಸಿಂಗ್ ರೂಂಗೆ ಸ್ಕಾಟ್ಲೆಂಡ್ ಆಟಗಾರರು ಬಂದಿದ್ದರು. ಈ ವೇಳೆ ವಿರಾಟ್ ಕಾಹ್ಲಿ, ರೋಹಿತ್ ಶರ್ಮಾ, ರಾಹುಲ್, ಬೂಮ್ರಾ, ಅಶ್ವಿನ್, ಹಾರ್ದಿಕ್ ಪಾಂಡ್ಯ ಹಲವು ಕ್ರಿಕೆಟಿಂಗ್ ಟಿಪ್ಸ್ ನೀಡಿದರು. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಬಿಸಿಸಿಐ ಹಾಗೂ ಸ್ಕಾಟ್ಲೆಂಡ್ ಕ್ರಿಕೆಟ್ ಸಂಸ್ಥೆಗಳೂ ಕೂಡಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಪರೂಪದ ವಿಡಿಯೋ ಹಂಚಿಕೊಂಡಿವೆ.
ಸ್ಕಾಟ್ಲೆಂಡ್ ತಂಡದ ಆಟಗಾರರಿಗೆ ಕೆಎಲ್ ರಾಹುಲ್ ಕ್ರಿಕೆಟ್ ಪಾಠ ಸ್ಕಾಟ್ಲೆಂಟ್ ಆಟಗಾರ ಮೈಕೆಲ್ ಲೀಸ್ಕ್ ಅವರಿಗೆ ಆರ್.ಅಶ್ವಿನಿ ತಮ್ಮ ಕ್ರಿಕೆಟ್ ಜೀವನದ ಆರಂಭ ಹಾಗೂ ಸ್ಪಿನ್ ಬೌಲಿಂಗ್ ಬಗ್ಗೆ ಒಂದಷ್ಟು ಸಲಹೆಗಳನ್ನು ನೀಡಿದರು. ಇದೇ ವೇಳೆ, ಅವರು ತಾನು ಟೆನ್ನಿಸ್ ಬಾಲ್‌ನಲ್ಲಿ ಹೇಗೆ ಬೌಲಿಂಗ್ ಆರಂಭಿಸಿದೆ ಎಂದು ಲೀಸ್ಕ್‌ಗೆ ವಿವರಿಸಿದರು.
ಆರ್.ಅಶ್ವಿನ್ ಅವರಿಂದ ಬೌಲಿಂಗ್ ಟಿಪ್ಸ್ ಮತ್ತೊಂದೆಡೆ, ಸ್ಕಾಟ್ಲೆಂಡ್ ನಾಯಕ ರಿಚಿ ಬೆರಿಂಗ್ಟನ್, ವಿಕೆಟ್ ಕೀಪರ್ ಮ್ಯಾಥ್ಯೂ ಕ್ರಾಸ್ ಹಾಗೂ ಇತರೆ ಆಟಗಾರರಿಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಒಂದಷ್ಟು ಟಿಪ್ಸ್ ಕೊಟ್ಟರು.
ಜಸ್‌ಪ್ರಿತ್ ಬೂಮ್ರಾ ಅವರಿಂದ ಬೌಲಿಂಗ್ ಟಿಪ್ಸ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕ್ರಿಕೆಟ್‌ಗೆ ಪದಾರ್ಪಣೆ ಹಾಗೂ ಮೊದಲ ಬಾರಿಗೆ ಬೌಲಿಂಗ್‌ನಲ್ಲಿ ಅವಕಾಶ ಸಿಕ್ಕ ಬಗ್ಗೆ ಹಂಚಿಕೊಂಡರು. 'ನಿಮಗೆ ರಣಜಿ ಗೊತ್ತಾ?' ಎಂದು ಪಾಂಡ್ಯ ಕೇಳಿದಾಗ ಆ ಆಟಗಾರರು 'ಹೌದು' ಎನ್ನುತ್ತಾರೆ. ಅಂಡರ್19 ಪಂದ್ಯದಲ್ಲಿ ಆಡುತ್ತಿದ್ದಾಗ ರಣಜಿ ಟ್ರೋಫಿ ಕೋಚ್ ನನ್ನನ್ನು ಗಮನಿಸಿದರು. ಒಂದು ಲೋಕಲ್ ಪಂದ್ಯದಲ್ಲಿದ್ದ ಇಬ್ಬರು ಫಾಸ್ಟ್ ಬೌಲರ್‌ಗಳು ಗಾಯಗೊಳ್ಳುತ್ತಾರೆ. ಅದೇ ವೇಗದ ಬೌಲರ್‌ಗಳ ಬಳಿಯೇ ಶೂ ಪಡೆದುಕೊಂಡು ಆ ಪಂದ್ಯದಲ್ಲಿ ನಾನು 5 ವಿಕೆಟ್ ಪಡೆದೆ. ಬಳಿಕ ನಾನು ರಣಜಿಗೆ ಸೇರಿದೆ ಎಂದು ತಮ್ಮ ಅನುಭವ ಶೇರ್ ಮಾಡಿದರು.
ಹಾರ್ದಿಕ್ ಪಾಂಡ್ಯರಿಂದ ಬೌಲಿಂಗ್ ಬಗ್ಗೆ ಮಾಹಿತಿ ದುಬೈನಲ್ಲಿ ನಿನ್ನೆ ನಡೆದ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ದ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಸ್ಕಾಟ್ಲೆಂಡ್ ನೀಡಿದ್ದ 85 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 6.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಕೆ.ಎಲ್.ರಾಹುಲ್ ಕೇವಲ 19 ಎಸೆತಕ್ಕೆ ಅರ್ಧಶತಕ ಗಳಿಸಿ ದಾಖಲೆ ಬರೆದರು. ಮತ್ತೊಬ್ಬ ಆರಂಭಿಕ ರೋಹಿತ್ ಶರ್ಮಾ ಕೂಡಾ ಅಬ್ಬರದ ಬ್ಯಾಟಿಂಗ್ ಮಾಡಿದರು. ಅವರು 16 ಎಸೆತಕ್ಕೆ 30 ರನ್ ಗಳಿಸಿದ್ದರು.