ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 1258 ದಿನಗಳ ನಂತರ ಏಕದಿನದ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಪಟ್ಟವನ್ನು ಕಳೆದುಕೊಂಡಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನೂತನ ನಂಬರ್ 1 ಬ್ಯಾಟ್ಸ್ಮನ್ ಆಗಿ ಹೊರ ಹೊಮ್ಮಿದ್ದಾರೆ. ಬುಧವಾರ ಪುರುಷರ ಏಕದಿನ ಕ್ರಿಕೆಟ್ನ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು ಬಾಬರ್ ನಂಬರ್ ಒನ್ ಸ್ಥಾನಕ್ಕೇರಿದ ಪಾಕಿಸ್ತಾನದ 4ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಏಕದಿನ ರ‍್ಯಾಂಕಿಂಗ್: 1,258 ದಿನಗಳ ನಂತರ ಅಗ್ರಪಟ್ಟ ಕಳೆದುಕೊಂಡ ಕೊಹ್ಲಿ, ನಂ 1 ಸ್ಥಾನಕ್ಕೇರಿದ ಬಾಬರ್ - ಏಕದಿನ ಕ್ರಿಕೆಟ್ನ ಅಗ್ರಸ್ಥಾನ
ಟೀಂ ಇಂಡಿಯಾದ ನಾಯಕ, ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಏಕದಿನದ ನಂಬರ್ ಒನ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇವರ ಸ್ಥಾನಕ್ಕೆ ಪಾಕ್ ಆಟಗಾರ ಬಾಬರ್ ಅಜಮ್ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಮೂರು ವರ್ಷಗಳ ಬಳಿಕ ಕೊಹ್ಲಿ ನಂಬರ್ವನ್ ಸ್ಥಾನ ಕಳೆದುಕೊಂಡಿದ್ದಾರೆ.
![ಏಕದಿನ ರ‍್ಯಾಂಕಿಂಗ್: 1,258 ದಿನಗಳ ನಂತರ ಅಗ್ರಪಟ್ಟ ಕಳೆದುಕೊಂಡ ಕೊಹ್ಲಿ, ನಂ 1 ಸ್ಥಾನಕ್ಕೇರಿದ ಬಾಬರ್ Babar dethrones King Kohli, ends his 3-year-long reign as top ODI batsman](https://etvbharatimages.akamaized.net/etvbharat/prod-images/768-512-11401438-229-11401438-1618400320372.jpg)
ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ರನ್ ಮಿಷನ್ ವಿರಾಟ್ ಕೊಹ್ಲಿ ನಾಲ್ಕು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದರು. ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿರುವ ಪಾಕ್ ತಂಡದ ನಾಯಕ ಬಾಬರ್ ಅಜಮ್ ಉತ್ತಮ ಪ್ರದರ್ಶನ ತೋರಿದ್ದು ಶತಕ 3 ಪಂದ್ಯಗಳಿಂದ 250+ ರನ್ಗಳಿಸಿದ್ದರು. ಅವರ ಈ ಪ್ರದರ್ಶನವೇ ಕೊಹ್ಲಿಯನ್ನು ಹಿಂದಿಕ್ಕಲು ನೆರವಾಗಿದೆ.
ವಿರಾಟ್ ಕೊಹ್ಲಿ ಅವರು 2017 ಜೂನ್ನಿಂದ ಇಲ್ಲಿಯವೆಗೂ ಸುಮಾರು 41 ತಿಂಗಳು ಅಥವಾ 1258 ದಿನಗಳ ಕಾಲ ಪ್ರಥಮ ಸ್ಥಾನದಲ್ಲಿದ್ದರು. ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದಾರೆ.
Last Updated : Apr 14, 2021, 7:02 PM IST