ಕರ್ನಾಟಕ

karnataka

By

Published : Jun 2, 2019, 2:11 AM IST

Updated : Jun 2, 2019, 7:31 AM IST

ETV Bharat / sports

ಅಫ್ಘಾನ್​ ವಿರುದ್ಧ ಆಸೀಸ್​​ಗೆ 7 ವಿಕೆಟ್​​ಗಳ ಭರ್ಜರಿ ಜಯ

ವಿಶ್ವಕಪ್​ನಲ್ಲಿ ಐದು ಬಾರಿ ಚಾಂಪಿಯನ್​ ಆಗಿರುವ ಆಸ್ಟ್ರೇಲಿಯಾ ಈ ಬಾರಿಯ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಆಸ್ಟ್ರೇಲಿಯಾ ತಂಡ 7 ವಿಕೆಟ್​ಗಳ ಭರ್ಜರಿ ಜಯ

ಬ್ರಿಸ್ಟಲ್:2019ರ ವಿಶ್ವಕಪ್​ನಲ್ಲಿ ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ವಿಶ್ವಕಪ್​ನಲ್ಲಿ ಐದು ಬಾರಿ ಚಾಂಪಿಯನ್​ ಆಗಿರುವ ಆಸ್ಟ್ರೇಲಿಯಾ ಈ ಬಾರಿಯ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಲಂಡನ್​​ನ ಬ್ರಿಸ್ಟಲ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 207 ರನ್ ಗಳಿಸಿ 38.2 ಓವರ್​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಸರ್ವಪತನ ಕಂಡಿತು. ಬಳಿಕ ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಅವರ ಅರ್ಧಶತಕಗಳ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 34.5 ಓವರ್​ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.

ಅಫ್ಘಾನಿಸ್ತಾನ ಪರ ರಹಮತ್ ಶಾ (43), ಹಸ್ಮತುಲ್ಲಾ ಶಾಹಿದಿ (18), ಗುಲ್ಬದಿನ್ ನೈಬ್​ (31), ನಜಿಬುಲ್ಲಾ ಜದ್ರಾನ್ (51) ಮತ್ತು ರಶೀದ್ ಖಾನ್ (27) ರನ್ ಪೇರಿಸಿದರು.

ಆಸ್ಟ್ರೇಲಿಯಾ ಪರ ಬೌಲಿಂಗ್​ನಲ್ಲಿ ಕಮ್ಮಿನ್ಸ್ ಮತ್ತು ಜಂಪಾ ತಲಾ 3 ವಿಕೆಟ್, ಸ್ಟೋಯ್ನಿಸ್ 2 ವಿಕೆಟ್ ಪಡೆದು ಮಿಂಚಿದರು. ಇನ್ನು ಬ್ಯಾಟಿಂಗ್​ನಲ್ಲಿ ಫಿಂಚ್​ (66), ಡೇವಿಡ್ ವಾರ್ನರ್ ಅಜೇಯ (89) ಹಾಗೂ ಸ್ಮಿತ್ 18 ರನ್ ಪೇರಿಸಿ ತಂಡವನ್ನು ಗೆಲ್ಲಿಸಿದರು.

Last Updated : Jun 2, 2019, 7:31 AM IST

ABOUT THE AUTHOR

...view details