ಕರ್ನಾಟಕ

karnataka

ETV Bharat / sports

ಕೆ.ಎಲ್​. ರಾಹುಲ್- ಸುನೀಲ್​ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ನಡುವಿನ ಲವ್ವಿಡವ್ವಿ ಕನ್ಫರ್ಮ್​ - ಕೆ.ಎಲ್​. ರಾಹುಲ್​, ಆಥಿಯಾ ಶೆಟ್ಟಿ ಲವ್ವಿಡವ್ವಿ ಕನ್ಫರ್ಮ್​

ಕ್ರಿಕೆಟಿಗ ಕೆ.ಎಲ್​. ರಾಹುಲ್ ಮತ್ತು ನಟಿ​ ಆಥಿಯಾ ಶೆಟ್ಟಿ ನಡುವಿನ ಲವ್ವಿಡವ್ವಿ ವಿಚಾರ ಕನ್ಫರ್ಮ್​ ಆಗಿದೆ. ಆಥಿಯಾ ಶೆಟ್ಟಿ ಅವರು ಕೂಡ ಸ್ಕಾಟ್ಲೆಂಡ್​ ವಿರುದ್ಧ ನಡೆದ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಿದ್ದರು. ಕೆ.ಎಲ್. ರಾಹುಲ್​ ಅಬ್ಬರದ ಅರ್ಧಶತಕ ಸಿಡಿಸಿದಾಗ ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದರು.

Athiya Shetty and KL Rahul
ಕೆ.ಎಲ್​. ರಾಹುಲ್​, ಆಥಿಯಾ ಶೆಟ್ಟಿ

By

Published : Nov 6, 2021, 12:51 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ಬ್ಯಾಟ್ಸ್​ಮನ್​, ಕನ್ನಡಿಗ ಕೆ.ಎಲ್​. ರಾಹುಲ್​ ಮತ್ತು ಬಾಲಿವುಡ್​ ನಟಿ ಹಾಗೂ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಅವರ ನಡುವೆ ಹರಿದಾಡುತ್ತಿದ್ದ ಗಾಸಿಪ್​ಗೆ ರಾಹುಲ್​ ಕೊನೆ ಹಾಡಿದ್ದಾರೆ.

ಇಬ್ಬರ ಮಧ್ಯೆ ಯಾವುದೇ ಸಂಬಂಧ ಇಲ್ಲ ಎನ್ನುವಂತಿದ್ದ ಜೋಡಿ ಇದೀಗ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ನಟಿ ಆಥಿಯಾ ಶೆಟ್ಟಿ ಅವರ ಜನ್ಮದಿನದ ಹಿನ್ನೆಲೆ ಸ್ಕಾಟ್ಲೆಂಡ್​ ವಿರುದ್ಧ ನಡೆದ ಕ್ರಿಕೆಟ್​ ಪಂದ್ಯಾವಳಿ ಬಳಿಕ ಕೆ.ಎಲ್​.ರಾಹುಲ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಆಥಿಯಾ ಶೆಟ್ಟಿ ಜೊತೆಗೆ ಇರುವ ಚಿತ್ರವನ್ನು ಪೋಸ್ಟ್​ ಮಾಡಿ 'ನನ್ನ ಪ್ರೀತಿಯ ಆಥಿಯಾ ಶೆಟ್ಟಿಗೆ ಜನ್ಮದಿನದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಇದು ಅವರಿಬ್ಬರ ಮಧ್ಯೆ ಇರುವ ಗಾಸಿಪ್​ ಅನ್ನು ಅಧಿಕೃತಗೊಳಿಸಿದೆ. ರಾಹುಲ್​ರ ಈ ಪೋಸ್ಟ್​ಗೆ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕಾಮೆಂಟ್​ ಮಾಡಿದ್ದಾರೆ. ಆಥಿಯಾ ಶೆಟ್ಟಿ ಅವರ ತಂದೆ ಸುನಿಲ್​ ಶೆಟ್ಟಿ, ಸಹೋದರ ಅಹಾನ್​ ಶೆಟ್ಟಿ, ನಟಿ, ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಸೈಯಾಮಿ ಖೇರ್​, ಸಾನಿಯಾ ಮಿರ್ಜಾ ಹಾರ್ಟ್​ ಸಿಂಬಲ್​ ಇಮೋಜಿಯನ್ನು ಹಾಕಿದ್ದಾರೆ.

ಕೆ.ಎಲ್​. ರಾಹುಲ್​ ಹಾಕಿರುವ ಇನ್​ಸ್ಟಾಗ್ರಾಮ್​ ಪೋಸ್ಟ್​​ ಸುನೀಲ್​ ಶೆಟ್ಟಿ ಸೇರಿದಂತೆ ಸೆಲೆಬ್ರಿಟಿಗಳ ಕಾಮೆಂಟ್​

ಇಷ್ಟು ಮಾತ್ರವಲ್ಲದೇ, ಆಥಿಯಾ ಶೆಟ್ಟಿ ಅವರು ಕೂಡ ಸ್ಕಾಟ್ಲೆಂಡ್​ ವಿರುದ್ಧ ನಡೆದ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಿದ್ದರು. ಕೆ.ಎಲ್​. ರಾಹುಲ್​ ಅಬ್ಬರದ ಅರ್ಧಶತಕ ಸಿಡಿಸಿದಾಗ ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದರು.

ಇಂಗ್ಲೆಂಡ್​ನಲ್ಲಿ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವಾಸಕ್ಕೂ ಮುನ್ನ ಆಥಿಯಾ ಶೆಟ್ಟಿ ಅವರನ್ನು ತಮ್ಮ ಪಾರ್ಟ್ನರ್​ ಎಂದು ನಮೂದಿಸಿ ಬಿಸಿಸಿಐಗೆ ಮಾಹಿತಿ ನೀಡಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

ABOUT THE AUTHOR

...view details