ಲಂಡನ್: ಇಂಗ್ಲೆಂಡ್ನ ಓವೆಲ್ ಕ್ರೀಡಾಂಗಣದ ಮುಂದೆ ಬ್ರಿಟಿಷ್ ಪ್ರಜೆಯೊಬ್ಬ ಚುರುಮುರಿ ಮಾರಾಟ ಮಾಡುವ ವೀಡಿಯೋ ಸಖತ್ ವೈರಲ್ ಆಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ನೋಡಲು ಹೋದ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ಯಾಕಂದ್ರೆ ಓವೆಲ್ ಕ್ರೀಡಾಂಗಣದ ಮುಂದೆ ಬ್ರಿಟಿಷ್ ಪ್ರಜೆಯೊಬ್ಬ ಭಾರತದ ಬೀದಿ ಬದಿ ಸಿಗುವ ಚುರುಮುರಿ ಮಾರಾಟ ಮಾಡುತ್ತಿದ್ದ.
ಉತ್ತರ ಭಾರತದಲ್ಲಿ 'ಜಾಲ್ಮುರಿ' ಮತ್ತು ದಕ್ಷಿಣ ಭಾರತದಲ್ಲಿ 'ಚುರುಮುರಿ' ಎಂದು ಕರೆಯಲ್ಪಡುವ ಈ ತಿನಿಸನ್ನ ಇಂಗ್ಲೆಂಡಿನ ವ್ಯಕ್ತಿ ಪಕ್ಕಾ ದೇಸಿ ಸ್ಟೈಲ್ನಲ್ಲಿ ಮಾರಾಟ ಮಾಡುತ್ತಿರುವುದನ್ನ ಕಂಡ ಭಾರತೀಯರು ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್ ಮೂಲದ ಆಂಗಸ್ ಡೆನೂನ್ ಎಂಬ ವ್ಯಕ್ತಿ ಕೋಲ್ಕತ್ತಾದಲ್ಲಿ ಈ ತಿಂಡಿ ಸವಿದು ಮಾರು ಹೋಗಿದ್ದಾನೆ. ಅಲ್ಲಿನ ಜನರ ಬಳಿ ಇದನ್ನ ಹೇಗೆ ಮಾಡುವುದು ಎಂದು ತಿಳಿದುಕೊಂಡು ಬಂದು ಇಂಗ್ಲೆಂಡ್ನಲ್ಲಿ 'ಜಾಲ್ಮುರಿ ಎಕ್ಸ್ಪ್ರೆಸ್' ಎಂದು ನಾಮಕರಣ ಮಾಡಿ ವ್ಯಾಪಾರ ಶುರು ಮಾಡಿದ್ದಾನೆ.
ಪ್ರತೀ ಪ್ಲೇಟ್ಗೆ 310 ರೂಪಾಯಿಂತೆ ವ್ಯಾಪಾರ ಮಾಡುವ ಈತ ಇದರಿಂದ ಭರ್ಜರಿ ಲಾಭ ಗಳಿಸಿದ್ದಾನೆ. ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ ಕಣ್ತುಂಬಿಕೊಳ್ಳಲು ಓವೆಲ್ ಮೈದಾನಕ್ಕೆ ಹೋಗಿದ್ದ ಭಾರತೀಯರು ದೇಸಿ ಚುರುಮುರಿ ಸವಿದು ಎಂಜಾಯ್ ಮಾಡಿದ್ದಾರೆ.