ಲಂಡನ್:ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಅಬ್ಬರಿಸಿದ್ದು, 'ಕ್ರಿಕೆಟ್ ಶಿಶು' ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 71 ಎಸೆತಗಳಲ್ಲಿ 148 ರನ್ ಗಳಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಸಿಕ್ಸ್-ಫೋರ್ಗಳಿಂದಲೇ ಮಾರ್ಗನ್ 102ರನ್! ಈ ವಿಶ್ವಕಪ್ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ರೆಕಾರ್ಡ್ ಮಾಡಿದ ಮಾರ್ಗನ್ ಕೇವಲ 57 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದಾರೆ. 17 ಸಿಕ್ಸರ್ ಹಾಗೂ 4 ಬೌಂಡರಿಗಳ ಸಹಾಯದಿಂದಲೇ ಅವರು 118 ರನ್ ಸಿಡಿಸಿದ್ದು ವಿಶೇಷ. ಅಂದರೆ ತಾವು ಗಳಿಕೆ ಮಾಡಿರುವ ಒಟ್ಟು ರನ್ನಲ್ಲಿ ಶೇ.80ರಷ್ಟು ಸಿಕ್ಸರ್- ಬೌಂಡರಿಗಳಿಂದಲೇ ಹರಿದು ಬಂದಿದೆ.
ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಿದ ಇಂಗ್ಲೆಂಡ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಈ ಹಿಂದೆ ಏಕದಿನ ಪಂದ್ಯದಲ್ಲಿ ಭಾರತದ ರೋಹಿತ್ ಶರ್ಮಾ,ಇಂಗ್ಲೆಂಡ್ನ ಕ್ರಿಸ್‌ಗೇಲ್ ಹಾಗೂ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ರಿಂದ ಸಿಡಿದಿದ್ದ 16 ಸಿಕ್ಸರ್ ದಾಖಲೆ ಕೂಡ ಅಳಿಸಿ ಹಾಕಿದ್ದಾರೆ.
ಈ ಹಿಂದೆ ರೋಹಿತ್ ಶರ್ಮಾ ಏಕದಿನ ಪಂದ್ಯದಲ್ಲಿ 158 ಎಸೆತಗಳಲ್ಲಿ 209 ರನ್ ಗಳಿಸಿದ್ದು, ಅದರಲ್ಲಿ 16 ಸಿಕ್ಸರ್,14 ಬೌಂಡರಿಗಳು ಸೇರಿದ್ದವು. ಕ್ರಿಸ್ ಗೇಲ್ ಸಿಡಿಸಿದ್ದ 215 ರನ್ಗಳಲ್ಲಿ 16 ಸಿಕ್ಸರ್ ಹಾಗೂ 10 ಬೌಂಡರಿಗಳಿದ್ದರೆ, ಎಬಿಡಿ ಸಿಡಿಸಿದ್ದ 149 ರನ್ಗಳಲ್ಲಿ 16 ಸಿಕ್ಸರ್ ಹಾಗೂ 9 ಬೌಂಡರಿಗಳಿದ್ದವು.