ಕರ್ನಾಟಕ

karnataka

ETV Bharat / sports

ಪಾಕ್‌ ಪ್ರವಾಸದಿಂದ ಹೊರಬಂದ ಜಿಂಬಾಬ್ವೆ ಕೋಚ್ ಲಾಲ್​ಚಂದ್​ ರಜಪೂತ್​

ಭಾರತೀಯ ರಾಯಭಾರಿ ಕಚೇರಿ ಜಿಂಬಾಬ್ವೆ ತಂಡದ ಜೊತೆ ರಜಪೂತ್​ರನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಪತ್ರ ಬರೆದಿರುವುದರಿಂದ, ಈ ಪ್ರವಾಸದಿಂದ ಅವರನ್ನು ಕೈಬಿಡಲಾಗಿದೆ. ಬೌಲಿಂಗ್ ಕೋಚ್​ ಆಗಿರುವ ಡಾಗ್ಲಸ್ ಹೊಂಡೊ ತಾತ್ಕಾಲಿಕ ಮುಖ್ಯಕೋಚ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ..

ಲಾಲ್​ಚಂದ್​ ರಜಪೂತ್​
ಲಾಲ್​ಚಂದ್​ ರಜಪೂತ್​

By

Published : Oct 20, 2020, 5:24 PM IST

ಇಸ್ಲಾಮಬಾದ್​:ಹರಾರೆಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮನವಿ ಮೇರೆಗೆ ಜಿಂಬಾಬ್ವೆ ಮುಖ್ಯ ಕೋಚ್​ ಆಗಿರುವ ಭಾರತದ ಮಾಜಿ ಕ್ರಿಕೆಟಿಗ ಲಾಲ್​ಚಂದ್​ ರಜಪೂತ್​ ಅವರನ್ನು ಮುಂಬರುವ ಪಾಕಿಸ್ತಾನ ಪ್ರವಾಸದಿಂದ ಹೊರಬರಲು ಜಿಂಬಾಬ್ವೆ ಕ್ರಿಕೆಟ್​ ಅನುವು ಮಾಡಿಕೊಟ್ಟಿದೆ.

ಮಂಗಳವಾರ ಜಿಂಬಾಬ್ವೆ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಈಗಾಗಲೇ ಪಾಕಿಸ್ತಾನ ರಾಯಬಾರಿ ಕಚೇರಿ ರಜಪೂತ್​ ಅವರಿಗೆ ವೀಸಾ ನೀಡಿದ್ದರೂ ಸಹ ಭಾರತೀಯ ರಾಯಭಾರಿ ಕಚೇರಿಯ ಮನವಿ ಪರಿಗಣಿಸಿ, ರಜಪೂತ್​ರನ್ನು ಪಾಕಿಸ್ತಾನ ಪ್ರವಾಸಕ್ಕೆ ಕಳುಹಿಸದಿರಲು ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಒಪ್ಪಿಕೊಂಡಿದೆ.

"ಜಿಂಬಾಬ್ವೆ ಮುಖ್ಯ ಕೋಚ್ ಲಾಲ್​ಚಂದ್ ರಜಪೂತ್​ ಪಾಕಿಸ್ತಾನ ಪ್ರವಾಸವನ್ನು ತಪ್ಪಿಸಿಕೊಳ್ಳಲಿದ್ದಾರೆ. ಪಾಕಿಸ್ತಾನ ರಜಪೂತ್​ ಅವರಿಗೆ ವೀಸಾ ನೀಡಿದ್ರೂ ಸಹ, ಭಾರತೀಯ ರಾಯಭಾರಿ ಕಚೇರಿ ಜಿಂಬಾಬ್ವೆ ತಂಡದ ಜೊತೆ ರಜಪೂತ್​ರನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಪತ್ರ ಬರೆದಿರುವುದರಿಂದ, ಈ ಪ್ರವಾಸದಿಂದ ಅವರನ್ನು ಕೈಬಿಡಲಾಗಿದೆ. ಬೌಲಿಂಗ್ ಕೋಚ್​ ಆಗಿರುವ ಡಾಗ್ಲಸ್ ಹೊಂಡೊ ತಾತ್ಕಾಲಿಕ ಮುಖ್ಯಕೋಚ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ" ಎಂದು ಜಿಂಬಾಬ್ವೆ ಕ್ರಿಕೆಟ್ ಹೇಳಿಕೆ ಬಿಡುಗಡೆ ಮಾಡಿದೆ.

ಜಿಂಬಾಬ್ವೆ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ತಲಾ 3 ಟಿ20 ಹಾಗೂ ಏಕದಿನ ಪಂದ್ಯವನ್ನಾಡಲಿದೆ. ಅಕ್ಟೋಬರ್ 30, ನವೆಂಬರ್ 1 ಮತ್ತು 3 ರಂದು ಏಕದಿನ ಪಂದ್ಯ ಹಾಗೂ ನವೆಂಬರ್​ 7,8 ಹಾಗೂ10 ರಂದು ಲಾಹೋರ್​ನಲ್ಲಿ ಟಿ20 ಪಂದ್ಯಗಳನ್ನಾಡಲಿದೆ.

ABOUT THE AUTHOR

...view details