ಅಬುಧಾಬಿ: ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದ ಅಫ್ಘಾನಿಸ್ತಾನ ತಂಡವನ್ನು ಜಿಂಬಾಬ್ವೆ 10 ವಿಕೆಟ್ಗಳಿಂದ ಮಣಿಸಿ 2 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಅಬುಧಾಬಿಯ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಕೇವಲ 2 ದಿನದಲ್ಲಿ ಅಂತ್ಯಗೊಂಡಿದೆ. ಮೊದಲ ದಿನ ಮೊದಲ ಇನ್ನಿಂಗ್ಸ್ನಲ್ಲಿ ಅಫ್ಘಾನಿಸ್ತಾನ 131 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಜಿಂಬಾಬ್ವೆ ಮೊದಲ ಇನ್ನಿಂಗ್ಸ್ನಲ್ಲಿ 250 ರನ್ಗಳಿಸಿತ್ತು. ನಾಯಕ ಸೀನ್ ವಿಲಿಯಮ್ಸನ್ 105 ರನ್ ಗಳಿಸಿದ್ದರು.
ಅಫ್ಘಾನಿಸ್ತಾನ ಪರ ಅಮೀರ್ ಹಮ್ಜಾ 75ಕ್ಕೆ 6 ವಿಕೆಟ್, ಜಹೀರ್ ಖಾನ್ 2 ವಿಕೆಟ್ ಪಡೆದಿದ್ದರು.
119 ರನ್ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ಕೇವಲ 135 ರನ್ಗಳಿಗೆ ಸರ್ವಪತನಗೊಂಡಿತು. ಆರಂಭಿಕ ಬ್ಯಾಟ್ಸ್ಮನ್ ಇಬ್ರಾಹಿಂ ಜಾಡ್ರನ್ 76 ರನ್ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ ಸ್ಪರ್ಧಾತ್ಮಕ ಟಾರ್ಗೆಟ್ ನೀಡುವಲ್ಲಿ ವಿಫಲವಾಯಿತು. ಕೇವಲ17 ರನ್ಗಳ ಗುರಿಯನ್ನು ಜಿಂಬಾಬ್ವೆ ಕೇವಲ 3.2 ಓವರ್ಗಳಲ್ಲಿ ಮುಟ್ಟುವ ಮೂಲಕ 10 ವಿಕೆಟ್ಗಳ ಜಯ ಸಾಧಿಸಿತು.
ಜಿಂಬಾಬ್ವೆ ಪರ ಮುಜರಬನಿ ಎರಡೂ ಇನ್ನಿಂಗ್ಸ್ ಸೇರಿ 6(4+2) ವಿಕೆಟ್, ವಿಕ್ಟರ್ ನ್ಯೂಚಿ 6 (3+3), ಟ್ರಿಪಾನೋ 4 (1+3) ಸೀನ್ ವಿಲಿಯಮ್ಸನ್ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.