ದುಬೈ: ಕ್ರಿಕೆಟ್ ಮಂಡಳಿಯ ಆಡಳಿತದಲ್ಲಿ ಅಲ್ಲಿನ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಹಾಗೂ ಐಸಿಸಿಐ ನಿಯಮಕ್ಕೆ ಬದ್ದರಾಗಿರುತ್ತೇವೆ ಎಂದು ಒಪ್ಪಿಕೊಂಡ ಬೆನ್ನಲ್ಲೇ ಜಿಂಬಾಬ್ವೆ ಮೇಲಿನ ನಿಷೇಧವನ್ನು ಐಸಿಸಿ ಹಿತೆಗೆದುಕೊಂಡಿದೆ.
ಜಿಂಬಾಬ್ವೆ ನೇಪಾಳ ಮೇಲಿನ ನಿಷೇಧ ವಾಪಸ್ .. ಟಿ20 ವಿಶ್ವಕಪ್ಗೆ ಅವಕಾಶ - ಜಿಂಬಾಬ್ವೆ ನಿಷೇಧ
ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಜಿಂಬಾಬ್ವೆ ಹಾಗೂ ನೇಪಾಳ ಕ್ರಿಕೆಟ್ ಸಂಸ್ಥೆಗಳ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದ್ದು ಆ ಎರಡು ತಂಡಗಳಿಗೂ 2020ರ ಟಿ20 ವಿಶ್ವಕಪ್ ಆಡಲು ಕೂಡ ಅನುಮತಿ ನೀಡಿದೆ.
ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಜಿಂಬಾಬ್ವೆ ಹಾಗೂ ನೇಪಾಳ ಕ್ರಿಕೆಟ್ ಸಂಸ್ಥೆಗಳ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದ್ದು ಆ ಎರಡು ತಂಡಗಳಿಗೂ 2020ರ ಟಿ20 ವಿಶ್ವಕಪ್ ಆಡಲು ಕೂಡ ಅನುಮತಿ ನೀಡಿದೆ.
ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ತವೆಂಗ್ವಾ ಮುಕುಹ್ಲನಿ, ಜಿಂಬಾಬ್ವೆ ಕ್ರೀಡಾ ಸಚಿವ ಕಿರ್ಸ್ಟಿ ಕೊವೆಟ್ರಿ ಹಾಗೂ ಕ್ರೀಡೆ ಮತ್ತು ಮನರಂಜನಾ ಆಯೋಗದ ಅಧ್ಯಕ್ಷ ಗೆರಾಲ್ಡ್ ಮ್ಲೋತ್ಶ್ವಾ ಅವರ ಮನವಿಯನ್ನು ಸ್ವೀಕರಿಸಿ ಮತ್ತೆ ಜಿಂಬಾಬ್ವೆಗೆ ಐಸಿಸಿ ಸದಸ್ಯತ್ವ ನೀಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ನಿಷೇಧಕ್ಕೊಳಗಾಗಿದ್ದ ನೇಪಾಳ ಕ್ರಿಕೆಟ್ ಸಂಸ್ಥೆಗೂ ಐಸಿಸಿ ನಿಷೇಧವನ್ನು ಹಿಂತೆಗೆದುಕೊಂಡಿದೆ.